
ಜಯಾ ಶಂಕಾಸ್ಪದ ಸಾವಿನ ಸಿಬಿಐ ತನಿಖೆ ಕೋರಿದ ಅರ್ಜಿ ಸುಪ್ರೀಂನಿಂದ ವಜಾ
Team Udayavani, Jan 5, 2017, 12:15 PM IST

ಹೊಸದಿಲ್ಲಿ : ಎಐಎಡಿಎಂಕೆ ಪಕ್ಷದ ಬಂಡುಕೋರ ಸಂಸದೆ ಶಶಿಕಲಾ ಪುಷ್ಪಾ ಮತ್ತು ಯುವ ಸಂಘಟನೆಯೊಂದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ| ಜೆ ಜಯಲಲಿತಾ ಅವರ ಶಂಕಾಸ್ಪದ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ; ಮಾತ್ರವಲ್ಲ ಈ ವಿಷಯವನ್ನು ಇನ್ನು ಮುಂದೆ ಆಗ್ರಹಿಸಕೂಡದೆಂಬ ಎಚ್ಚರಿಕೆಯನ್ನು ನೀಡಿದೆ.
“ನಾವಿಲ್ಲಿ ಏನು ಮಾಡಬೇಕೆಂದು ನೀವು ಬಯಸುತ್ತೀರಿ ? ಸಂವಿಧಾನದ 32ನೇ ವಿಧಿ (ಸರಕಾರದಿಂದ ಆಗುವ ನಾಗರಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆಯನ್ನು ಪ್ರಶ್ನಿಸುವ ವಿಧಿ) ಯಡಿ ನೀವು ಅರ್ಜಿ ಸಲ್ಲಿಸಿದ್ದೀರಿ. ನಾವು ನಿಮ್ಮ ಈ ಅರ್ಜಿಗಳನ್ನು ವಜಾ ಮಾಡುತ್ತಿದ್ದೇವೆ; ಮಾತ್ರವಲ್ಲ ಈ ವಿಷಯವನ್ನು ನೀವು ಇನ್ನು ಮುಂದೆ ಮತ್ತೆ ಆಗ್ರಹಿಸಿದಲ್ಲಿ ನಿಮ್ಮ ಮೇಲೆ ಕಾನೂನು ವೆಚ್ಚವನ್ನು ಹೇರುತ್ತೇವೆ’ ಎಂದು ನ್ಯಾಯಮೂರ್ತಿಗಳಾದ ಪಿ ಸಿ ಘೋಷ್ ಮತ್ತು ರೋಹಿನ್‌ಟನ್ ಎಫ್ ನಾರಿಮನ್ ಅವರನ್ನು ಒಳಗೊಂಡ ಪೀಠವು ಎಚ್ಚರಿಕೆ ನೀಡಿತು.
ಜಯಲಲಿತಾ ಅವರ ಸಾವು ನಿಗೂಢ ಸನ್ನಿವೇಶದಲ್ಲಿ ಸಂಭವಿಸಿರುವುದರಿಂದ ಆ ಬಗ್ಗೆ ಸಿಬಿಐ ತನಿಖೆ ಆಗಬೇಕೆಂದು ಒತ್ತಾಯಿಸುವ ತಮಿಳುನಾಡು ತೆಲುಗು ಯವ ಶಕ್ತಿ ಸಂಘಟನೆಯ ಪರವಾಗಿ ವಕೀಲರು ವಾದ ಮಂಡಿಸುವುದರೊಂದಿಗೆ ವಿಚಾರಣೆ ಆರಂಭಗೊಂಡಿತ್ತು. ಎಐಎಡಿಎಂಕೆ ಬಂಡುಕೋರ ಸಂಸದೆ ಶಶಿಕಲಾ ಪುಷ್ಪಾ ಅವರ ವಕೀಲರು ಇದೇ ವೇಳೆ ತಮ್ಮ ವಾದವನ್ನು ಮಂಡಿಸಿ ಜಯಲಲಿತಾ ಅವರ ಶಂಕಾಸ್ಪದ ಸಾವಿನ ಬಗ್ಗೆ ಸಿಬಿಐ ತನಿಖೆಯನ್ನು ಆಗ್ರಹಿಸಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
