ಸಮುದಾಯ ಅಡುಗೆ ಮನೆ ಸ್ಥಾಪನೆ ವಿಚಾರ : ರಾಜ್ಯಗಳಿಗೆ ಸುಪ್ರೀಂಕೋರ್ಟ್ ಛೀಮಾರಿ
Team Udayavani, Feb 11, 2020, 9:39 AM IST
ನವದೆಹಲಿ: ಸಮುದಾಯ ಅಡುಗೆ ಮನೆ ಸ್ಥಾಪನೆ ವಿಚಾರದಲ್ಲಿ ಪ್ರಮಾಣಪತ್ರ ಸಲ್ಲಿಸಲು ವಿಫಲವಾಗಿರುವ ಹಲವು ರಾಜ್ಯಗಳಿಗೆ ಸುಪ್ರೀಂಕೋರ್ಟ್ ಸೋಮವಾರ ಛೀಮಾರಿ ಹಾಕಿದೆ. ಮುಂದಿನ 24 ಗಂಟೆಗಳ ಒಳಗಾಗಿ ಪ್ರಮಾಣ ಪತ್ರ ಸಲ್ಲಿಸದೇ ಇದ್ದರೆ ಒಂದು ಲಕ್ಷ ರೂ. ದಂಡ ಪಾವತಿ ಮಾಡಬೇಕು. ನಂತರವೂ ಪ್ರಮಾಣಪತ್ರ ಸಲ್ಲಿಸದಿದ್ದರೆ ಐದು ಲಕ್ಷ ರೂ. ದಂಡ ನೀಡಬೇಕು ಎಂದು ನ್ಯಾ.ಎನ್.ವಿ.ರಮಣ ನೇತೃತ್ವದ ನ್ಯಾಯಪೀಠ ಆದೇಶ ನೀಡಿದೆ.
ಕರ್ನಾಟಕ ಸೇರಿದಂತೆ ಐದು ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳು ಮಾತ್ರ ಈಗಾಗಲೇ ಪ್ರಮಾಣ ಪತ್ರ ಸಲ್ಲಿಸಿವೆ. ನಮ್ಮಲ್ಲಿ ಇಂದಿರಾ ಕ್ಯಾಂಟೀಸ್ ಸ್ಥಾಪಿಸಿ ಅಗ್ಗದ ದರದಲ್ಲಿ ಜನರಿಗೆ ಆಹಾರ ಪೂರೈಸಲಾಗುತ್ತಿದೆ ಎಂದು ಕರ್ನಾಟಕವು ಅಫಿಡವಿಟ್‌ನಲ್ಲಿ ತಿಳಿಸಿದೆ.