ವೃದ್ಧರ ಹಕ್ಕುಗಳ ರಕ್ಷಿಸಿ
Team Udayavani, Dec 14, 2018, 8:30 AM IST
ಹೊಸದಿಲ್ಲಿ: ಭಾರತದ 10 ಕೋಟಿ ವೃದ್ಧರ ಹಕ್ಕುಗಳನ್ನು ರಕ್ಷಿಸಬೇಕು ಎಂದು ಸುಪ್ರೀಂಕೋರ್ಟ್ ಗುರುವಾರ ಅಭಿಪ್ರಾಯಪಟ್ಟಿದ್ದು, ಪ್ರತಿ ಜಿಲ್ಲೆಯಲ್ಲಿರುವ ವೃದ್ಧಾಶ್ರಮಗಳ ಸಂಖ್ಯೆಯನ್ನು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಿಂದ ಕೇಂದ್ರ ಸರಕಾರ ಪಡೆಯಬೇಕು ಎಂದು ಸೂಚಿಸಿದೆ. ಜೊತೆಗೆ ಜಿಲ್ಲೆಯಲ್ಲಿ ಲಭ್ಯವಿರುವ ವೈದ್ಯಕೀಯ ಸೌಲಭ್ಯ ಮತ್ತು ವೃದ್ಧರ ಆರೈಕೆ ಸೇವೆಯ ಬಗ್ಗೆ ಮಾಹಿತಿ ಪಡೆದು ಕೊಳ್ಳಬೇಕೆಂದು ನ್ಯಾಯಪೀಠ ಸೂಚಿಸಿದೆ. ವೃದ್ಧರ ಪಿಂಚಣಿ ಮೊತ್ತವನ್ನೂ ಮರುಪರಿಶೀಲನೆ ನಡೆಸಬೇಕು ಎಂದಿದೆ.