ಬಿಟ್‌ ಕಾಯಿನ್‌ಗೆ ಸುಪ್ರೀಂಕೋರ್ಟ್‌ ಹಸಿರು ನಿಶಾನೆ


Team Udayavani, Mar 5, 2020, 6:45 AM IST

ಬಿಟ್‌ ಕಾಯಿನ್‌ಗೆ ಸುಪ್ರೀಂಕೋರ್ಟ್‌ ಹಸಿರು ನಿಶಾನೆ

ಹೊಸದಿಲ್ಲಿ: ಬಿಟ್‌ ಕಾಯಿನ್‌ ಸಹಿತ ವರ್ಚುವಲ್‌ ಕರೆನ್ಸಿ ವಹಿವಾಟುಗಳ ಮೇಲೆ ಭಾರತೀಯ ರಿಸರ್ವ್‌ ಬ್ಯಾಂಕ್‌ 2018ರಲ್ಲಿ ಹೇರಿದ್ದ ನಿರ್ಬಂಧವನ್ನು ಸುಪ್ರೀಂ ಕೋರ್ಟ್‌ ಬುಧವಾರ ರದ್ದುಗೊಳಿಸಿದೆ. ಈ ಮೂಲಕ ಅವುಗಳ ಬಳಕೆಗೆ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಹಸಿರು ನಿಶಾನೆ ಸಿಕ್ಕಿದಂತಾಗಿದೆ.

ನ್ಯಾ| ಆರ್‌.ಎಸ್‌. ನಾರಿಮನ್‌ ನೇತೃತ್ವದ ನ್ಯಾಯಪೀಠ ಆರ್‌ಬಿಐ ಸುತ್ತೋಲೆಯಲ್ಲಿ ನೀಡಿದ್ದ ಆದೇಶ ಕೇವಲ ಆಂಶಿಕವಾಗಿದೆ. ಹೀಗಾಗಿ ಅದನ್ನು ಒಪ್ಪಲಾಗದು ಎಂದಿತು. ಆರ್‌ಬಿಐ ವರ್ಚುವಲ್‌ ಕರೆನ್ಸಿ ಮೇಲೆ ನಿಷೇಧ ಹೇರಿಲ್ಲ ಎಂದು ಹೇಳುತ್ತಾ ಬಂದಿದೆ ಮತ್ತು ಕೇಂದ್ರ ಸರಕಾರ ಕೂಡ ಹಲವು ಸಮಿತಿಗಳನ್ನು ರಚಿಸಿ ಅವುಗಳ ಶಿಫಾರಸಿನ ಆಧಾರದಲ್ಲಿ ಅದರಲ್ಲಿ ಎರಡು ಕರಡು ಮಸೂದೆಗಳು ಸೇರಿ ಈ ಕ್ಷೇತ್ರದ ನಿಟ್ಟಿನಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲೂ ವಿಫ‌ಲವಾಗಿದೆ. ಹೀಗಾಗಿ ನ್ಯಾಯಪೀಠ ಆಂಶಿಕವಾಗಿರುವ ನಿಯಮದ ಬಗ್ಗೆ ಸ್ಪಷ್ಟ ತೀರ್ಮಾನ ಕೈಗೊಳ್ಳಬೇಕಾಗಿದೆ ಎಂದು 180 ಪುಟಗಳ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.

2018ರಲ್ಲಿ ಹೊರಡಿಸಲಾಗಿದ್ದ ಸುತ್ತೋಲೆ ಪ್ರಶ್ನೆ ಮಾಡಿ ಇಂಟರ್‌ನೆಟ್‌ ಆ್ಯಂಡ್‌ ಮೊಬೈಲ್‌ ಅಸೋಸಿಯೇಶನ್‌ ಆಫ್ ಇಂಡಿಯಾ (ಐಎಂಎಐ) ಮೇಲ್ಮನವಿ ಸಲ್ಲಿಸಿತ್ತು.

ತೀರ್ಪಿನಿಂದ ಆಗುವ ಪರಿಣಾಮಗಳೇನು?
- ಸಮಾನ ಅವಕಾಶ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳುವ ಸಂದೇಶ ರವಾನೆಯಾಗಿದೆ.

- 2018ರಲ್ಲಿ ಆರ್‌ಬಿಐ ನಿರ್ಧಾರದಿಂದ ಹೊಸ ತನ ಮತ್ತು ನಾವೀನ್ಯ ರೀತಿಯ ಕೈಗಾರಿಕೆಯ ಮೇಲೆ ನಿಬಂಧನೆ ಹೇರಿದಂತೆ ಆಗಿತ್ತು. ಅದಕ್ಕೆ ಸರಿಯಾದ ಸಮಾನ ಅವಕಾಶ ಸಿಕ್ಕಿರಲಿಲ್ಲ.

- ವ್ಯವಸ್ಥೆಯ ನಿಯಂತ್ರಕರು (ಆರ್‌ಬಿಐ) ಹೊಸ ವ್ಯವಸ್ಥೆಗಳನ್ನು ಯಾವ ರೀತಿ ಬಳಕೆ ಮಾಡಿಕೊಳ್ಳಲು ಅವಕಾಶ ಮಾಡಬೇಕು, ಯಾವ ರೀತಿ ಅವುಗಳನ್ನು ನಿಯಂತ್ರಿಸಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.

- ನಿಯಂತ್ರಣ ಎನ್ನುವುದು ಒಂದು ಸಂಸ್ಥೆಯ ಪರಮಾಧಿಕಾರವಲ್ಲ; ಅದು ಕರ್ತವ್ಯ. ಸದ್ಯ ಭಾರತದಲ್ಲಿ ಒಂದೇ ನಿಯಂತ್ರಣ ವ್ಯವಸ್ಥೆ ಇದೆ. ಅದಕ್ಕೆ ಹೊಸ ವ್ಯವಸ್ಥೆ ಬೆಳವಣಿಗೆ ಸಾಧಿಸಬಾರದು ಎಂಬಂಥ ನಿಯಮ ತರುವಂತಾಗ ಬಾರದು. ನಿಯಂತ್ರಣಕ್ಕೆ ಸಮಸ್ಯೆ ಎಂಬ ನೆಪಕ್ಕಾಗಿ ಹೊಸ ವ್ಯವಸ್ಥೆ ಅಭಿವೃದ್ಧಿಗೆ ಮುಳ್ಳಾಗಬಾರದು.

ಆರ್‌ಬಿಐ ಸುತ್ತೋಲೆಯಲ್ಲಿ ಏನಿತ್ತು?
– ಆರ್‌ಬಿಐ ವರ್ಚುವಲ್‌ ಕರೆನ್ಸಿ (ವಿಸಿ) ಮೂಲಕ ವಹಿವಾಟು ನಡೆಸುವುದಿಲ್ಲ. ಇದರ ಜತೆಗೆ ಇತರ ಸಂಸ್ಥೆಗಳು, ವ್ಯಕ್ತಿಗಳೂ ಕೂಡ ಅದರ ಮೂಲಕ ವಹಿವಾಟು, ಸೇವೆ ನೀಡುವ ಅಗತ್ಯವಿಲ್ಲ.

– ಅದರಲ್ಲಿ ಖಾತೆಗಳ ನಿರ್ವಹಣೆ, ನೋಂದಣಿ, ಟ್ರೇಡಿಂಗ್‌, ವ್ಯವಹಾರ ಇತ್ಯರ್ಥಪಡಿಸುವುದು, ವರ್ಚುವಲ್‌ ಟೋಕನ್‌ಗಳ ಆಧಾರದಲ್ಲಿ ಸಾಲ ನೀಡಿಕೆ, ಟೋಕನ್‌ಗಳನ್ನು ಭದ್ರತೆಯಾಗಿ ಪಡೆದುಕೊಳ್ಳುವುದು, ಖಾತೆಗಳನ್ನು ತೆರೆಯುವುದು ಬೇಡ.

– ಸಂಸ್ಥೆಯ ನಿಯಂತ್ರಣಕ್ಕೆ ಒಳಪಟ್ಟ ಸಂಸ್ಥೆ ಗಳೆಲ್ಲವೂ ಮೂರು ತಿಂಗಳ ಒಳಗಾಗಿ ವಿ.ಸಿ. ವ್ಯವಹಾರದಿಂದ ದೂರ ಸರಿಯಬೇಕು.

ಕ್ರಿಪ್ಟೋಕರೆನ್ಸಿ ಎಂದರೇನು?
– ಅತ್ಯಂತ ಸರಳ ಭಾಷೆಯಲ್ಲಿ ವಿವರಿಸುವುದಿದ್ದರೆ ಡಿಜಿಟಲ್‌ ಕರೆನ್ಸಿ. ಇಂಟರ್‌ನೆಟ್‌ ಮಾಧ್ಯಮದ ಮೂಲಕ ಅದನ್ನು ಬಳಕೆ ಮಾಡಲಾಗುತ್ತದೆ. ಅದನ್ನು ವಿನಿಮಯದ ಮಾಧ್ಯಮವಾಗಿ ಉಪಯೋಗಿಸುತ್ತಾರೆ.

– ಕಾನೂನಾತ್ಮಕವಾಗಿ ಸದ್ಯ ಅದಕ್ಕೆ ಮಾನ್ಯತೆ ಇಲ್ಲ. ಅಂದರೆ ಭಾರತದ ಮಟ್ಟಿಗೆ ಹೇಳು ವು ದಾದರೆ, ಆರ್‌ಬಿಐ ಮತ್ತು ಇತರ ಸರಕಾರಿ ಸಂಸ್ಥೆಗಳಿಂದ ಮಾನ್ಯತೆ ಇಲ್ಲ.

– ಅದನ್ನು ಕ್ರಿಪ್ಟೋಗ್ರಫಿ (Cryptography) ಮೂಲಕ ರಕ್ಷಿಸಲಾಗುತ್ತದೆ. ಕ್ರಿಪ್ಟೋಗ್ರಫಿ ಎಂದರೆ ಸಂಕೇತಗಳ ಮೂಲಕ ಮಾಹಿತಿ ಮತ್ತು ವ್ಯವಹಾರಗಳ ಮಾಹಿತಿಯನ್ನು ರಕ್ಷಿಸುವುದು. ಹೀಗಾಗಿ ಕ್ರಿಪ್ಟ್’ (Crypt) ಎಂದರೆ “ಅಡಗಿಸಿದ’, “ಗ್ರಫಿ’ (graphy) ಎಂದರೆ “ಬರೆಯುವುದು’ ಎಂಬ ಅರ್ಥ.

ಬಿಟ್‌ ಕಾಯಿನ್‌ ದರ
ಒಂದು ಬಿಟ್‌ ಕಾಯಿನ್‌ ಎಂದರೆ 6,42,656 ರೂ.

ಟಾಪ್ ನ್ಯೂಸ್

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

1-asasa

Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

kejriwal 2

Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

death

Kollegala: ಕಾಡಾನೆ ದಾಳಿಗೆ ವ್ಯಕ್ತಿ ಬಲಿ

Tiger

Ponnampet; ಹುಲಿ ದಾಳಿಗೆ ಅಸ್ಸಾಂ ಮೂಲದ ಕಾರ್ಮಿಕ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.