Udayavni Special

ಕ್ರಿಮಿನಲ್‌ ಹಿನ್ನೆಲೆಯವರ ಮಾಹಿತಿ ಕೊಡಿ: ರಾಜಕೀಯ ಪಕ್ಷಗಳಿಗೆ ಸುಪ್ರೀಂ ತಾಕೀತು


Team Udayavani, Feb 14, 2020, 10:19 AM IST

Supreme-Court-of-India-730

ಹೊಸದಿಲ್ಲಿ: ಸಂಸತ್‌ ಮತ್ತು ವಿಧಾನಸಭೆಗಳಿಗೆ ಕ್ರಿಮಿನಲ್‌ ಹಿನ್ನೆಲೆ ಉಳ್ಳವರು ಹೆಚ್ಚು ಆರಿಸಿ ಬರುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌, ಅಂಥವರನ್ನೇ ಅಭ್ಯರ್ಥಿಗಳಾಗಿ ಆರಿಸಲು ನಿಮಗಿರುವ ಕಾರಣಗಳೇನು ಎಂಬ ಬಗ್ಗೆ ತಿಳಿಸಿ ಎಂದು ಎಲ್ಲ ರಾಜಕೀಯ ಪಕ್ಷಗಳಿಗೆ ಸೂಚಿಸಿದೆ. ಈ ಸಂಬಂಧ ನಿಮ್ಮ ವೆಬ್‌ಸೈಟ್‌ಗಳಲ್ಲಿ, ಟ್ವಿಟರ್‌ ಮತ್ತು ಫೇಸ್‌ ಬುಕ್‌ ಖಾತೆಗಳಲ್ಲಿ ಹಾಗೂ ಪತ್ರಿಕೆಗಳಲ್ಲಿ ಜಾಹೀರಾತಾಗಿ ಮಾಹಿತಿ ಒದಗಿಸುವಂತೆಯೂ ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ. ವಕೀಲ ಮತ್ತು ಬಿಜೆಪಿ ನಾಯಕ ಅಶ್ವಿ‌ನಿ ಕುಮಾರ್‌ ಉಪಾಧ್ಯಾಯ್‌ ಮತ್ತು ಇತರರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾ| ರೋಹಿಂಗ್ಟನ್‌ ಫಾಲಿ ನಾರಿಮನ್‌ ನೇತೃತ್ವದ ನ್ಯಾಯಪೀಠ ಗುರುವಾರ ಈ ನಿರ್ದೇಶನ ನೀಡಿದೆ.

ಸಂಪೂರ್ಣ ವಿವರ ಕೊಡಿ
ಕ್ರಿಮಿನಲ್‌ ಕೇಸುಗಳಲ್ಲಿ ಭಾಗಿಯಾಗಿರುವ ಶಾಸಕ ಅಥವಾ ಸಂಸದರು ನಿಮ್ಮಲ್ಲಿ ಎಷ್ಟಿದ್ದಾರೆ, ಇನ್ನೂ ಎಷ್ಟು ಮಂದಿ ವಿರುದ್ಧ ಪ್ರಕರಣಗಳು ಬಾಕಿ ಇವೆ, ಕ್ರಿಮಿನಲ್‌ ಕೇಸು ಬಾಕಿ ಇದ್ದ ಹೊರತಾಗಿಯೂ ಅವರಿಗೆ ನೀವು ಟಿಕೆಟ್‌ ನೀಡಿದ್ದೇಕೆ- ಈ ಕುರಿತು ಮಾಹಿತಿ ನೀಡಿ ಎಂದು ಕೋರ್ಟ್‌ ಸೂಚಿಸಿದೆ.

ರಾಜಕೀಯ ಅಪರಾಧೀಕರಣ ಹೆಚ್ಚುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಪೀಠ, ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳು ಇದ್ದರೂ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿದ್ದೇಕೆ ಎಂದು ಪ್ರಶ್ನಿಸಿದೆ. ಅಲ್ಲದೆ ಕ್ರಿಮಿನಲ್‌ ಕೇಸು ಇರುವ, ಆಯ್ಕೆಯಾದ ಜನಪ್ರತಿನಿಧಿಗಳ ಮಾಹಿತಿಯನ್ನು 48 ತಾಸುಗಳ ಒಳಗಾಗಿ ಪಕ್ಷದ ವೆಬ್‌ಸೈಟ್‌, ಸಾಮಾಜಿಕ ಜಾಲತಾಣಗಳು, ಒಂದು ಸ್ಥಳೀಯ ಪತ್ರಿಕೆ ಹಾಗೂ ರಾಷ್ಟ್ರೀಯ ಪತ್ರಿಕೆಯಲ್ಲಿ ಪ್ರಕಟಿಸಬೇಕು. ಹಾಗೆಯೇ ಇಂಥ ಅಭ್ಯರ್ಥಿಗಳನ್ನು ಸ್ಪರ್ಧೆಗೆ ಆಯ್ಕೆ ಮಾಡಿದ 72 ತಾಸುಗಳ ಒಳಗಾಗಿ ಚುನಾವಣ ಆಯೋಗಕ್ಕೆ ವರದಿ ಸಲ್ಲಿಸಬೇಕು ಎಂದು ಆದೇಶಿಸಿದೆ.

ಮೊದಲೇ ಉಲ್ಲಂಘನೆ
ಸುಪ್ರೀಂ ಕೋರ್ಟ್‌ ನಿರ್ದೇಶನದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌, ಕರ್ನಾಟಕದಲ್ಲಿ ಗಣಿ ಅಕ್ರಮದಲ್ಲಿ ಮೊಕದ್ದಮೆ ಎದುರಿಸುತ್ತಿರುವ ಸಚಿವ ಆನಂದ್‌ ಸಿಂಗ್‌ಗೆ ಅರಣ್ಯ ಖಾತೆ ನೀಡಲಾಗಿದೆ. ಸುಪ್ರೀಂ ಕೋರ್ಟ್‌ ನಿರ್ದೇಶನ ಬರುವ ಮೊದಲೇ ಪ್ರಧಾನಿ ಮೋದಿ ಅದನ್ನು ಉಲ್ಲಂಘಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಬಿಜೆಪಿ ಸ್ವಾಗತ
ಸುಪ್ರೀಂ ಕೋರ್ಟ್‌ ನಿರ್ದೇಶನವನ್ನು ಬಿಜೆಪಿ ಸ್ವಾಗತಿಸಿದೆ. ಚುನಾವಣ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಈ ನಿರ್ದೇಶನ ಮತ್ತಷ್ಟು ಬಲಪಡಿಸಿದೆ. ಜತೆಗೆ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕುರಿತು ಮತದಾರರನ್ನು ಜಾಗೃತಗೊಳಿಸಿದೆ ಎಂದು ಬಿಜೆಪಿ ವಕ್ತಾರ ನಳಿನ್‌ ಕೊಹ್ಲಿ ಹೇಳಿದ್ದಾರೆ.

ಗೆಲ್ಲುವ ಅಂಶವೇ ಪ್ರಧಾನವಲ್ಲ
ಚುನಾವಣೆಯಲ್ಲಿ  ನಿಗದಿತ ಅಭ್ಯರ್ಥಿಗಳು ಗೆಲ್ಲಲೇಬೇಕು. ಹಿಂದಿನ ಚುನಾವಣೆಯಲ್ಲಿ ಜಯ ಸಾಧಿಸಿದ್ದಾರೆ ಎಂಬ ಅಂಶಗಳು ಪ್ರಧಾನವಾಗ ಕೂಡದು. ಅವರು ಸಮಾಜಕ್ಕಾಗಿ ನೀಡಿರುವ ಕೊಡುಗೆ ಏನು ಎಂಬುದು ಅವರ ಸಾಧನೆ ನಿರ್ಧರಿಸುವ ಅಂಶವಾಗಬೇಕು ಎಂದು ಸುಪ್ರೀಂ ಕೋರ್ಟ್‌ ಕಟುವಾಗಿ ಅಭಿಪ್ರಾಯಪಟ್ಟಿದೆ. ಒಂದೊಮ್ಮೆ ರಾಜಕೀಯ ಪಕ್ಷಗಳು ಮಾಹಿತಿ ನೀಡದಿದ್ದರೆ ಮತ್ತು ಈ ನಿರ್ದೇಶನವನ್ನು ಜಾರಿಗೊಳಿಸಲು ವಿಫ‌ಲವಾದರೆ ಅದನ್ನು ನ್ಯಾಯಾಂಗ ನಿಂದನೆ ಎಂದು ಚುನಾವಣಾ ಆಯೋಗ ಪರಿಗಣಿಸಬೇಕು ಎಂದೂ ಹೇಳಿದೆ.

ನಿರ್ದೇಶನಗಳು
1. ರಾಜ್ಯ, ರಾಷ್ಟ್ರ ಮಟ್ಟದ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ವಿರುದ್ಧ ಬಾಕಿ ಇರುವ ಕ್ರಿಮಿನಲ್‌ ಪ್ರಕರಣಗಳ ಮಾಹಿತಿಯನ್ನು (ಅಪರಾಧಗಳ ಸ್ವರೂಪ, ಆರೋಪ ಸಾಬೀತು, ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ ಮತ್ತು ಕೇಸು ಸಂಖ್ಯೆ) ತಮ್ಮ ವೆಬ್‌ಸೈಟ್‌ಗಳಲ್ಲಿ ವಿವರವಾಗಿ ಪ್ರಕಟಿಸಬೇಕು.

2. ಚುನಾವಣೆ ಗೆಲುವು ಹೊರತಾಗಿ ಅಭ್ಯರ್ಥಿಯು ಸ್ಪರ್ಧೆಗೆ ಅರ್ಹ ಎಂದು ಪರಿಗಣಿಸಲು ಇರುವ ಕಾರಣಗಳೇನು?- ಈ ಮಾಹಿತಿಯನ್ನು ಒಂದು ಸ್ಥಳೀಯ ಪತ್ರಿಕೆ, ಒಂದು ರಾಷ್ಟ್ರೀಯ ಪತ್ರಿಕೆ, ಫೇಸ್‌ಬುಕ್‌, ಟ್ವಿಟರ್‌ ರೀತಿಯ ಸಾಮಾಜಿಕ ಜಾಲತಾಣಗಳಲ್ಲಿನ ಪಕ್ಷಗಳ ಅಧಿಕೃತ ವೇದಿಕೆಯಲ್ಲಿ ಪ್ರಕಟಿಸಬೇಕು.

3. ಅಭ್ಯರ್ಥಿಯನ್ನು ಸ್ಪರ್ಧೆಗೆ ಆಯ್ಕೆ ಮಾಡಿದ 48 ತಾಸುಗಳ ಒಳಗಾಗಿ ಅಥವಾ ನಾಮಪತ್ರ ಸಲ್ಲಿಕೆ ಆರಂಭವಾದ ಮೊದಲ ದಿನಕ್ಕೆ 2 ವಾರ ಮುಂಚಿತವಾಗಿ ಈ ಮಾಹಿತಿ ಪ್ರಕಟಗೊಳ್ಳಬೇಕು

4. ಪ್ರಸ್ತುತ ನಿರ್ದೇಶನದಲ್ಲಿ  ಸೂಚಿಸಿರುವ ಅಂಶಗಳನ್ನು ಅಭ್ಯರ್ಥಿಯನ್ನು ಆಯ್ಕೆ ಮಾಡಿದ 72 ತಾಸುಗಳ ಒಳಗಾಗಿ ಚುನಾವಣ ಆಯೋಗಕ್ಕೆ ಸಲ್ಲಿಸಬೇಕು.

5. ನ್ಯಾಯಾಲಯದ ನಿರ್ದೇಶನದ ಅನುಸಾರ ಮಾಹಿತಿ ನೀಡಲು ರಾಜಕೀಯ ಪಕ್ಷಗಳು ವಿಫ‌ಲವಾದರೆ, ಅದನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಲಿದ್ದು, ಚುನಾವಣ ಆಯೋಗ ಅದನ್ನು ಕೂಡಲೇ ಕೋರ್ಟ್‌ಗಮನಕ್ಕೆ ತರಬೇಕು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮಂಗಳೂರಿನಲ್ಲಿ ಬಿಜೆಪಿ ಬೆಂಬಲಿತ ಪಂಚಾಯತ್ ಸದಸ್ಯ ಯಾಕೂಬ್ ಕೊಲೆ

ಮಂಗಳೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಬಿಜೆಪಿ ಬೆಂಬಲಿತ ಪಂಚಾಯತ್ ಸದಸ್ಯ ಯಾಕೂಬ್ ಕೊಲೆ

ಅಧಿಕಾರಿಗಳೇ ‘ಏನಿದು ಸಂಸ್ಕಾರ’ ಚಿತಾಗಾರದಲ್ಲಿ ಇಟ್ಟು ಹೋದ ಶವವನ್ನು ಎಳೆದಾಡಿದ ನಾಯಿಗಳು!

ಅಧಿಕಾರಿಗಳೇ ‘ಏನಿದು ಸಂಸ್ಕಾರ’ ಚಿತಾಗಾರದಲ್ಲಿ ಬಿಟ್ಟು ಹೋದ ಶವವನ್ನು ಎಳೆದಾಡಿದ ನಾಯಿಗಳು!

ವಿಂಡೀಸ್ ಬಿಗಿ ಹಿಡಿತದಲ್ಲಿ ಸೌಥಂಪ್ಟನ್ ಟೆಸ್ಟ್: 114 ರನ್ ಮುನ್ನಡೆ ಪಡೆದ ಹೋಲ್ಡರ್ ಪಡೆ

ವಿಂಡೀಸ್ ಬಿಗಿ ಹಿಡಿತದಲ್ಲಿ ಸೌಥಂಪ್ಟನ್ ಟೆಸ್ಟ್: 114 ರನ್ ಮುನ್ನಡೆ ಪಡೆದ ಹೋಲ್ಡರ್ ಪಡೆ

tiktok

ಟಿಕ್ ಟಾಕ್ ಬಳಸದಂತೆ ಉದ್ಯೋಗಿಗಳಿಗೆ ಅಮೇಜಾನ್ ಸೂಚನೆ,ಕೆಲವೇ ಗಂಟೆಗಳಲ್ಲಿ ನಿರ್ಧಾರ ಹಿಂತೆಗೆತ!

america

ಭಾರತ: 4 ದಿನದಲ್ಲಿ 1ಲಕ್ಷ ಜನರಿಗೆ ಕೋವಿಡ್ ಸೊಂಕು,ಅಮೆರಿಕಾದಲ್ಲಿ ಒಂದೇ ದಿನ 69ಸಾವಿರ ಪ್ರಕರಣ

ಹೈದರಾಬಾದ್‌ ಏರ್‌ಪೋರ್ಟ್‌ಗೆ ಕಾಂಟಾಕ್ಟ್ ಲೆಸ್‌ ಕಾರ್‌ ಪಾರ್ಕಿಂಗ್‌

ಹೈದರಾಬಾದ್‌ ಏರ್‌ಪೋರ್ಟ್‌ಗೆ ಕಾಂಟ್ಯಾಕ್ಟ್ ಲೆಸ್‌ ಕಾರ್‌ ಪಾರ್ಕಿಂಗ್‌

ಚೀನಕ್ಕೆ ಕಡಲ ಸಿಡಿಲು ; ಮಲಬಾರ್‌ ನೌಕಾ ಸಮರಾಭ್ಯಾಸಕ್ಕೆ ಆಸ್ಟ್ರೇಲಿಯಾಕ್ಕೆ ಆಹ್ವಾನ

ಚೀನಕ್ಕೆ ಕಡಲ ಸಿಡಿಲು ; ಮಲಬಾರ್‌ ನೌಕಾ ಸಮರಾಭ್ಯಾಸಕ್ಕೆ ಆಸ್ಟ್ರೇಲಿಯಾಕ್ಕೆ ಆಹ್ವಾನ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಡಿಎಚ್‌ಎಫ್ಎಲ್‌ನಿಂದ 3,689 ಕೋಟಿ ರೂ.ವಂಚನೆ: ಪಿಎನ್‌ಬಿ

ಡಿಎಚ್‌ಎಫ್ಎಲ್‌ನಿಂದ 3,689 ಕೋಟಿ ರೂ.ವಂಚನೆ: ಪಿಎನ್‌ಬಿ

ಹೈದರಾಬಾದ್‌ ಏರ್‌ಪೋರ್ಟ್‌ಗೆ ಕಾಂಟಾಕ್ಟ್ ಲೆಸ್‌ ಕಾರ್‌ ಪಾರ್ಕಿಂಗ್‌

ಹೈದರಾಬಾದ್‌ ಏರ್‌ಪೋರ್ಟ್‌ಗೆ ಕಾಂಟ್ಯಾಕ್ಟ್ ಲೆಸ್‌ ಕಾರ್‌ ಪಾರ್ಕಿಂಗ್‌

ಚೀನಕ್ಕೆ ಕಡಲ ಸಿಡಿಲು ; ಮಲಬಾರ್‌ ನೌಕಾ ಸಮರಾಭ್ಯಾಸಕ್ಕೆ ಆಸ್ಟ್ರೇಲಿಯಾಕ್ಕೆ ಆಹ್ವಾನ

ಚೀನಕ್ಕೆ ಕಡಲ ಸಿಡಿಲು ; ಮಲಬಾರ್‌ ನೌಕಾ ಸಮರಾಭ್ಯಾಸಕ್ಕೆ ಆಸ್ಟ್ರೇಲಿಯಾಕ್ಕೆ ಆಹ್ವಾನ

ಪ್ಲಾಸ್ಟಿಕ್‌ ಬಳಸಿ 2 ಲಕ್ಷ ಕಿ.ಮೀ. ರಸ್ತೆ ನಿರ್ಮಾಣ ; ವಿವಿಧೆಡೆ ಪ್ರಗತಿಯಲ್ಲಿರುವ ತ್ಯಾಜ್ಯ ಪ್ಲಾಸ್ಟಿಕ್‌ ಮಿಶ್ರಿತ ರಸ್ತೆ ಕಾಮಗಾರಿ

ಪ್ಲಾಸ್ಟಿಕ್‌ ಬಳಸಿ 2 ಲಕ್ಷ ಕಿ.ಮೀ. ರಸ್ತೆ ನಿರ್ಮಾಣ

ಇಟಲಿಯಿಂದ 100 ಕೋಟಿ ಪರಿಹಾರ ಕೇಳಿದ ಕುಟುಂಬ

ಇಟಲಿಯಿಂದ 100 ಕೋಟಿ ಪರಿಹಾರ ಕೇಳಿದ ಕುಟುಂಬ

MUST WATCH

udayavani youtube

Covid Bus Basin : A new invention by students of SMVIT College Bantakal

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home


ಹೊಸ ಸೇರ್ಪಡೆ

ಮಂಗಳೂರಿನಲ್ಲಿ ಬಿಜೆಪಿ ಬೆಂಬಲಿತ ಪಂಚಾಯತ್ ಸದಸ್ಯ ಯಾಕೂಬ್ ಕೊಲೆ

ಮಂಗಳೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಬಿಜೆಪಿ ಬೆಂಬಲಿತ ಪಂಚಾಯತ್ ಸದಸ್ಯ ಯಾಕೂಬ್ ಕೊಲೆ

ಮತ್ತೆ 25 ಹೊಸ ಪ್ರಕರಣ ಪತ್ತೆ

ಮತ್ತೆ 25 ಹೊಸ ಪ್ರಕರಣ ಪತ್ತೆ

ವಿದೇಶಿ ವಿದ್ಯಾರ್ಥಿಗಳಿಗೆ ನಿರ್ಬಂಧ ವಾಪಸ್‌ ಮಾಡಿ

ವಿದೇಶಿ ವಿದ್ಯಾರ್ಥಿಗಳಿಗೆ ನಿರ್ಬಂಧ ವಾಪಸ್‌ ಮಾಡಿ

ಸಂಕಷ್ಟದಲ್ಲಿಯೂ ದೇಶದ ಅಭಿವೃದ್ಧಿಗೆ ಪ್ರಧಾನಿ ಒತ್ತು

ಸಂಕಷ್ಟದಲ್ಲಿಯೂ ದೇಶದ ಅಭಿವೃದ್ಧಿಗೆ ಪ್ರಧಾನಿ ಒತ್ತು

ಡಿಎಚ್‌ಎಫ್ಎಲ್‌ನಿಂದ 3,689 ಕೋಟಿ ರೂ.ವಂಚನೆ: ಪಿಎನ್‌ಬಿ

ಡಿಎಚ್‌ಎಫ್ಎಲ್‌ನಿಂದ 3,689 ಕೋಟಿ ರೂ.ವಂಚನೆ: ಪಿಎನ್‌ಬಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.