ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರ ಪ್ರತ್ಯೇಕ ಭೇಟಿಗೆ ಸುಪ್ರೀಂ ನಕಾರ
Team Udayavani, Mar 19, 2020, 1:16 AM IST
ಹೊಸದಿಲ್ಲಿ: ಬೆಂಗಳೂರಿನಲ್ಲಿರುವ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರನ್ನು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳ ಕೊಠಡಿಯಲ್ಲಿ ನ್ಯಾಯಮೂರ್ತಿಗಳ ಮುಂದೆ ಹಾಜರುಪಡಿಸುವ ಪ್ರಸ್ತಾವನೆಯನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿದೆ. ಜತೆಗೆ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದಿದೆ.
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್ ತಮ್ಮ ವಕೀಲರಾದ ಮುಕುಲ್ ರೋಹಟಗಿ ಮೂಲಕ ಈ ಪ್ರಸ್ತಾವನೆ ಸಲ್ಲಿಸಿದ್ದರು. ಬೆಂಗಳೂರಿನಲ್ಲಿರುವ 18 ಕಾಂಗ್ರೆಸ್ ಶಾಸಕರು, ಸ್ವ ಇಚ್ಛೆಯಿಂದ ಮಧ್ಯಪ್ರದೇಶ ಬಿಟ್ಟುಬಂದಿದ್ದಾರೆ. ಅವರನ್ನು ಬಿಜೆಪಿ, ಬಂದಿಗಳನ್ನಾಗಿ ಇರಿಸಿಕೊಂಡಿಲ್ಲ ಎಂಬುದನ್ನು ಶಾಸಕರಿಂದಲೇ ನ್ಯಾಯಮೂರ್ತಿಗಳಿಗೆ ಖಾಸಗಿಯಾಗಿ ಮನವರಿಕೆ ಮಾಡಿಕೊಡಲು ಚೌಹಾಣ್ ಈ ಪ್ರಸ್ತಾವನೆ ಸಲ್ಲಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ನ್ಯಾ| ಡಿ.ವೈ. ಚಂದ್ರಚೂಡ್, ನ್ಯಾ| ಹೇಮಂತ್ ಗುಪ್ತಾ ಅವರುಳ್ಳ ನ್ಯಾಯಪೀಠ, “ಶಾಸಕರು ರಾಜಕೀಯ ಶಕ್ತಿಯೊಂದರ ಹಿಡಿತದಲ್ಲಿದ್ದಾರೆಯೇ ಎಂಬುದರ ಬಗ್ಗೆ ಆತಂಕಕಗಳು ಎದ್ದಿವೆ. ಇದನ್ನು ಪರಿಸುವುದಷ್ಟೇ ನಮ್ಮ ಉದ್ದೇಶ. ಜತೆಗೆ, ಶಾಸಕರು ವಿಶ್ವಾಸ ಮತ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ.
ಆದರೆ, ಅವರು ತಮ್ಮ ನಿರ್ಧಾರಗಳನ್ನು ಸ್ವತಂತ್ರವಾಗಿ ಕೈಗೊಳ್ಳುತ್ತಿದ್ದಾರೆಯೇ, ಇಲ್ಲವೇ ಎಂಬುದಷ್ಟೇ ನಮಗೆ ಮುಖ್ಯ’ ಎಂದಿತು. ಆಗ, ತಾವು ಸ್ವತಂತ್ರರು ಎಂಬುದನ್ನು ಸಾಬೀತುಪಡಿಸಲು ಬೆಂಗಳೂರಿ ನಲ್ಲಿರುವ ಕಾಂಗ್ರೆಸ್ ಶಾಸಕರು, ಕರ್ನಾಟಕ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಕಚೇರಿಗೆ ಭೇಟಿ ನೀಡಿ ವಿವರಣೆ ನೀಡಬಹುದೇ ಎಂಬ ಮತ್ತೂಂದು ಪ್ರಸ್ತಾವನೆಯನ್ನೂ ನ್ಯಾಯಪೀಠ ತಿರಸ್ಕರಿಸಿತು. ಇದೇ ವೇಳೆ, ಶಾಸಕರು ನೀಡಿದ ರಾಜೀನಾಮೆ ಗಳನ್ನು ಶೀಘ್ರವೇ ಅಂಗೀಕರಿಸು ವಂತೆಯೂ ಸ್ಪೀಕರ್‌ಗೆ ಸೂಚಿಸಿತು.
ಸ್ಪೀಕರ್‌ಗೆ ಶ್ಲಾಘನೆ
ಮುಖ್ಯಮಂತ್ರಿ ಕಮಲ್‌ನಾಥ್ ಮನವಿ ಮೇರೆಗೆ ತಮ್ಮದೇ ಪಕ್ಷದ ಆರು ಸಚಿವರ ರಾಜೀನಾಮೆಯನ್ನು ಅಂಗೀಕಾರ ಮಾಡಿರುವ ಸ್ಪೀಕರ್‌ರವರ ನಡೆಯನ್ನು ಅಲ್ಲಿನ ರಾಜ್ಯಪಾಲ ಲಾಲ್‌ಜೀ ಟಂಡನ್ ಕೊಂಡಾಡಿದ್ದಾರೆ. “ರಾಜೀನಾಮೆಗಳನ್ನು ಅಂಗೀಕರಿಸಿದ್ದು ನಿಷ್ಪಕ್ಷಪಾತ ಹಾಗೂ ದಿಟ್ಟತನದ ನಡೆ. ಕಳೆದ 8-10 ದಿನಗಳಿಂದ ನೀವು (ಸ್ಪೀಕರ್) ಎಂಥಾ ತೊಳಲಾಟದಲ್ಲಿದ್ದೀರಿ ಎಂಬುದನ್ನು ನಾನು ಬಲ್ಲೆ’ ಎಂದು ರಾಜ್ಯಪಾಲರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಪೊಲೀಸರು ದಿಗ್ವಿಜಯ್ ಸಿಂಗ್‌ರನ್ನು ಬಂಧಿಸಿರುವ ಕ್ರಮದಿಂದಾಗಿ ಮೋದಿ ಸರಕಾರ ಸರ್ವಾಧಿಕಾರಿ ಧೋರಣೆ ಮತ್ತು ಹಿಟ್ಲರ್ ಮಾದರಿ ಆಡಳಿತ ನಡೆಸುತ್ತಿದೆ ಎನ್ನುವುದಕ್ಕೆ ಸಾಕ್ಷಿ.
– ಕಮಲ್‌ನಾಥ್, ಮಧ್ಯಪ್ರದೇಶ ಮುಖ್ಯಮಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಿಪ್ಹಾಪ್ ನೃತ್ಯದ ಜೊತೆ ಹೈಬ್ರಿಡ್ ಭರತನಾಟ್ಯ : ನೆಟ್ಟಿಗರಿಂದ ಭಾರಿ ಮೆಚ್ಚುಗೆ
ಆತ್ಮಹತ್ಯೆ ಪ್ರಕರಣ: ವಿಸ್ಮಯಾ ಪತಿಗೆ 10 ವರ್ಷ ಜೈಲುಶಿಕ್ಷೆ ವಿಧಿಸಿದ ಕೇರಳ ಕೋರ್ಟ್
ಅಮರನಾಥ ಯಾತ್ರೆಗೆ ಹೆಚ್ಚುವರಿ ಭದ್ರತಾ ಕ್ರಮ: ಸಿಆರ್ಪಿಎಫ್
ಜಮ್ಮು- ಕಾಶ್ಮೀರ: ಹಳ್ಳಕ್ಕೆ ಬಿದ್ದ ಸಮಂತಾ-ವಿಜಯ್ ದೇವರಕೊಂಡ ವಾಹನ
ಸಿಂಧುದುರ್ಗ: ಪ್ರವಾಸಿಗರ ದೋಣಿ ಮುಳುಗಿ ಇಬ್ಬರ ಸಾವು; ಮತ್ತಿಬ್ಬರ ಸ್ಥಿತಿ ಗಂಭೀರ
MUST WATCH
ಹೊಸ ಸೇರ್ಪಡೆ
ವರ್ಷದೊಳಗೆ 3.55 ಕೋಟಿ ವೆಚ್ಚದ ರಾಜಕಾಲುವೆ ನಿರ್ಮಾಣ ಭರವಸೆ : ಎಸ್.ಜಯರಾಂ
ಹಿಪ್ಹಾಪ್ ನೃತ್ಯದ ಜೊತೆ ಹೈಬ್ರಿಡ್ ಭರತನಾಟ್ಯ : ನೆಟ್ಟಿಗರಿಂದ ಭಾರಿ ಮೆಚ್ಚುಗೆ
ರೆನ್ಯೂ ಪವರ್ನಿಂದ 7 ವರ್ಷದಲ್ಲಿ 50 ಸಾವಿರ ಕೋಟಿ ರೂ. ಹೂಡಿಕೆಗೆ ಒಪ್ಪಂದ : ಸಿಎಂ ಬೊಮ್ಮಾಯಿ
ಶಿರಸಿ: ಚಾಲಿ ಅಡಿಕೆ ಕಳ್ಳತನ ಪ್ರಕರಣ; ಮತ್ತೋರ್ವ ಆರೋಪಿ ಬಂಧನ, ಆಟೋ ರಿಕ್ಷಾ ವಶಕ್ಕೆ
ಶಿಕ್ಷಣವನ್ನು ಕೇಸರೀಕರಣಗೊಳಿಸಲು ಹೊರಟಿದೆ ಬಿಜೆಪಿ : ಪ್ರಿಯಾಂಕ್ ಖರ್ಗೆ ಆರೋಪ