ಪ್ರಾಧಿಕಾರಗಳಲ್ಲಿ ಕೇಂದ್ರದ ಹಸ್ತಕ್ಷೇಪಕ್ಕೆ ಸುಪ್ರೀಂ ಆಕ್ಷೇಪ; ಹೊಸ ನಿಯಮ ರೂಪಿಸಲು ನಿರ್ದೇಶನ
Team Udayavani, Nov 13, 2019, 5:58 PM IST
ನವದೆಹಲಿ: ಹಸಿರು ಪ್ರಾಧಿಕಾರ ಸೇರಿದಂತೆ ದೇಶದಲ್ಲಿರುವ ವಿವಿಧ ಪ್ರಾಧಿಕಾರಿಗಳಿಗೆ ಸದಸ್ಯರ ನೇಮಕ ವಿಚಾರದಲ್ಲಿ ಕೇಂದ್ರ ಸರಕಾರದ ನೇರ ಪಾತ್ರಕ್ಕೆ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಆಕ್ಷೇಪ ವ್ಯಕ್ತಪಡಿಸಿದೆ. ಮತ್ತು ಈ ಉದ್ದೇಶಕ್ಕಾಗಿ ಹಣಕಾಸು ಕಾಯ್ದೆ 2017ರಲ್ಲಿ ರೂಪಿಸಲಾಗಿರುವ ನಿಯಮಗಳನ್ನು ಸಂವಿಧಾನ ಬಾಹಿರ ಎಂದು ಪಂಚ ಸದಸ್ಯ ಪೀಠ ನರೇಂದ್ರ ಮೋದಿ ಸರಕಾರದ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಪ್ರಾಧಿಕಾರಕ್ಕೆ ಸದಸ್ಯರನ್ನು ನೇಮಿಸುವ ವಿಚಾರದಲ್ಲಿ ಈ ಸಂಬಂಧ ರೂಪುಗೊಂಡಿರುವ ಕಾಯಿದೆಗಳಡಿಯಲ್ಲೇ ಈ ಪ್ರಕ್ರಿಯೆ ನಡೆಯಬೇಕು ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಸ್ಪಷ್ಟ ನಿರ್ದೇಶನವನ್ನು ನೀಡಿದೆ.
ಇನ್ನು, ಹಣಕಾಸು ಕಾಯ್ದೆ – 2017ನ್ನು, ಧನ ವಿಧೇಯಕ ರೂಪದಲ್ಲಿ ಮಂಡಿಸಿ ನರೇಂದ್ರ ಮೋದಿ ಸರಕಾರ ಸಂಸತ್ತಿನ ಅಂಗೀಕಾರ ಪಡೆದುಕೊಂಡಿರುವ ವಿಚಾರವನ್ನು ವಿಸ್ತೃತ ಪೀಠವೇ ನಿರ್ಧರಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪಂಚ ಸದಸ್ಯ ಪೀಠ ಅಭಿಪ್ರಾಯಪಟ್ಟಿತು.
ದೇಶದಲ್ಲಿರುವ ವಿವಿಧ ಪ್ರಾಧಿಕಾರಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ರೂಪಿಸಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಂಸತ್ತಿನ ಅನುಮೋದನೆಯನ್ನು ಪಡೆದುಕೊಂಡಿರುವ ಧನ ವಿಧೇಯಕ – 2017ರ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ನಡೆಸಿದ ಸುಪ್ರೀಂಕೋರ್ಟಿನ ಐವರು ಸದಸ್ಯರ ಪೀಠ ಈ ಮಹತ್ವದ ತೀರ್ಪನ್ನು ನೀಡಿದೆ.
‘ವೈವಿಧ್ಯಮಯ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ವಿವಿಧ ಪ್ರಾಧಿಕಾರಗಳ ಮೇಲೆ ಕೇಂದ್ರ ಸರಕಾರ ನಿಯಂತ್ರಣ ಸಾಧಿಸಲು ಪ್ರಯತ್ನಿಸುವುದು ಅವುಗಳ ಕಾರ್ಯನಿರ್ವಹಣೆಯ ಮೇಲೆ ನೇರ ಹಸ್ತಕ್ಷೇಪ ನಡೆಸಿದಂತಾಗುತ್ತದೆ’ ಎಂದು ಈ ಪ್ರಕರಣದ ಮೇಲಿನ ತನ್ನ ತೀರ್ಪಿನಲ್ಲಿ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಪ್ರಾಧಿಕಾರಗಳಿಗೆ ನೇಮಕಾತಿ ನಡೆಸಲು ರಾಷ್ಟ್ರೀಯ ಪ್ರಾಧಿಕಾರ ಆಯೋಗ ಮತ್ತು ಅಖಿಲ ಭಾರತ ಪ್ರಾಧಿಕಾರ ಸೇವೆಗಳನ್ನು ಸ್ಥಾಪಿಸುವಂತೆಯೂ ಸಹ ನ್ಯಾಯಪೀಠ ಇದೇ ಸಂದರ್ಭದಲ್ಲಿ ಪ್ರಸ್ತಾಪಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಾಳೆ ಕೇರಳಕ್ಕೆ ಮುಂಗಾರು ಪ್ರವೇಶ; ಐದು ದಿನ ಸಾಧಾರಣ ಮಳೆ ಸಾಧ್ಯತೆ
ಮೋದಿ ಸರ್ಕಾರಕ್ಕೆ ಇಂದಿಗೆ 8 ವರ್ಷ; 2014ರ ಮೇ 26ರಂದು ಪ್ರಧಾನಿಯಾಗಿ ಪದಗ್ರಹಣ
ಕೂಲ್ಡ್ರಿಂಕ್ಸ್ನಲ್ಲಿ ಹಲ್ಲಿ! ಅಹ್ಮದಾಬಾದ್ ಮೆಕ್ಡೊನಾಲ್ಡ್ ವಿರುದ್ಧ ಆರೋಪ
ಮಂಗಳಕ್ಕೆ ವಿಜ್ಞಾನಿಗಳ 30 ದಿನಗಳ ಟ್ರಿಪ್! ಅಮೆರಿಕ ಬಾಹ್ಯಾಕಾಶ ಸಂಸ್ಥೆಯ ವಿಶಿಷ್ಟ ಸಾಹಸ
ಈತ ಒಬ್ಬ ವಿಶಿಷ್ಟ ಕಳ್ಳ..ಕದ್ದ ಮೇಲೆ “ಐ ಲವ್ ಯೂ’ ಎಂದ!