Udayavni Special

ಸಿಜೆಐ ಮಹಾಭಿಯೋಗ ಕೇಸ್‌ ಸದಸ್ಯರ ನ್ಯಾಯಪೀಠಕ್ಕೆ: ಇಂದೇ ಅರ್ಜಿ ವಿಚಾರಣೆ


Team Udayavani, May 8, 2018, 6:00 AM IST

16.jpg

ನವದೆಹಲಿ: ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ವಿರುದ್ಧದ ಮಹಾಭಿಯೋಗ ನಿಲುವಳಿಯನ್ನು ರಾಜ್ಯಸಭೆ ಸಭಾಪತಿ ತಿರಸ್ಕರಿಸಿದ ವಿಚಾರ ನ್ಯಾಯಾಂಗ ಕಟಕಟೆಯನ್ನೇರಿದೆ. ಕೇವಲ ಬಾಹ್ಯ ಕಾರಣಗಳನ್ನು ಉಲ್ಲೇಖೀಸಿ ನಿಲುವಳಿ ತಿರಸ್ಕರಿಸಲಾಗಿದ್ದು, ಸಿಜೆಐ ವಿರುದ್ಧ ಸಾಬೀತಾಗಿರುವ ದುರ್ವರ್ತನೆಯ ಆರೋಪ ಇಲ್ಲ ಎಂದು ಸಭಾಪತಿ ಹೇಳಿರುವುದು ಸರಿಯಲ್ಲ ಎಂದು ಆರೋಪಿಸಿ ಕಾಂಗ್ರೆಸ್‌ನ ಇಬ್ಬರು ರಾಜ್ಯಸಭೆ ಸಂಸದರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

ಮಂಗಳವಾರವೇ ಈ ಅರ್ಜಿ ವಿಚಾರಣೆ ನಡೆಯಲಿದೆ. ಅದಕ್ಕಾಗಿ ನ್ಯಾ.ಎ.ಕೆ.ಸಿಕ್ರಿ ಅವರನ್ನೊಳಗೊಂಡ ಐವರು ಸದಸ್ಯರ ಸಾಂವಿಧಾನಿಕ ಪೀಠ ರಚನೆ ಮಾಡಲಾಗಿದೆ. ನ್ಯಾಯಮೂರ್ತಿಗಳಾದ ಎಸ್‌.ಎ.ಬೋಬೆ, ಎನ್‌. ವಿ.ರಮಣ, ಅರುಣ್‌ ಮಿಶ್ರಾ ಮತ್ತು ಎ.ಕೆ.ಗೋಯಲ್‌ ನ್ಯಾಯಪೀಠದ ಇತರ ಸದಸ್ಯರು. ನ್ಯಾಯಮೂರ್ತಿಗಳ ಹಿರಿತನ ಗಮನಿಸುವುದಾದರೆ ನ್ಯಾ.ಸಿಕ್ರಿ ಆರನೇಯವರು. ಎರಡರಿಂದ ಐದರವರೆಗೆ ಹಿರಿತನ ಹೊಂದಿರುವ ನ್ಯಾಯಮೂರ್ತಿಗಳಾದ ಜೆ.ಚಲಮೇಶ್ವರ್‌, ರಂಜನ್‌ ಗೊಗೊಯ್‌, ಎಂ.ಬಿ.ಲೋಕುರ್‌, ಕುರಿಯನ್‌ ಜೋಸೆಫ್ರನ್ನು ದಾಟಿ ನ್ಯಾಯಪೀಠ ರಚಿಸಲಾಗಿದೆ.

 ಇದಕ್ಕೂ ಮುನ್ನ ನ್ಯಾ.ಜೆ.ಚಲಮೇಶ್ವರ್‌ ನೇತೃತ್ವದ ನ್ಯಾಯಪೀಠ ಮುಂದೆ ಅವರು ಅರ್ಜಿಯ ತ್ವರಿತ ವಿಚಾರಣೆಗೆ ಕೋರಿದ್ದು, ಅರ್ಜಿಯನ್ನು ಪರಿಗಣಿಸಬೇಕೋ ಬೇಡವೋ ಎಂದು ಮಂಗಳವಾರ ತೀರ್ಮಾನಿಸುವುದಾಗಿ ನ್ಯಾಯಪೀಠ ಹೇಳಿತ್ತು.  ಕಾಂಗ್ರೆಸ್‌ನ ನಾಯಕರಾದ ಪ್ರತಾಪ್‌ ಸಿಂಗ್‌ ಬಾಜ್ವಾ ಮತ್ತು ಆಮಿ ಹರ್ಷದ್‌ ರಾಯ್‌ ಯಾಕ್‌ ಅವರೇ ಸಭಾಪತಿ ಎಂ.ವೆಂಕಯ್ಯ ನಾಯ್ಡು ನಿರ್ಣಯದ ವಿರುದ್ಧ ಅರ್ಜಿ ಸಲ್ಲಿಸಿದವರು. ಕೋರ್ಟಲ್ಲಿ ಹಾಜರಿದ್ದ ಹಿರಿಯ ನ್ಯಾಯವಾದಿ ಕಪಿಲ್‌ ಸಿಬಲ್‌, ಈ ವಿಚಾರನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ಮನವಿ ಮಾಡಿದ್ದರು.. ಈ ಸಂದರ್ಭದಲ್ಲಿ ನ್ಯಾ.ಜೆ.ಚಲಮೇಶ್ವರ್‌ ಮತ್ತು ನ್ಯಾ.ಎಸ್‌.ಕೆ.ಕೌಲ್‌ ನೇತೃತ್ವದ ಪೀಠ, ತುರ್ತಾಗಿ ವಿಚಾರಣೆ ನಡೆಸಬೇಕಾಗಿದ್ದರೆ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠಕ್ಕೆ ಅರಿಕೆ ಮಾಡಿಕೊಳ್ಳಿ. ಏಕೆಂದರೆ ಅವರೇ ವಿವಿಧ ನ್ಯಾಯಪೀಠಗಳಿಗೆ ಪ್ರಕರಣ ಹಂಚಿಕೆ  ಮಾಡುತ್ತಾರೆ ಎಂದಿದ್ದರು. 

ಅದಕ್ಕೆ ಉತ್ತರಿಸಿದ್ದ ಮಾಜಿ ಸಚಿವ ಕಪಿಲ್‌ ಸಿಬಲ್‌ ಮತ್ತು ನ್ಯಾಯವಾದಿ ಪ್ರಶಾಂತ್‌ ಭೂಷಣ್‌, “ಸಿಜೆಐ  ವಿರುದ್ಧವೇ ಪ್ರಕರಣ ಇರುವಾಗ ಅವರ ಮುಂದೆ ಹೇಗೆ ಪ್ರಸ್ತಾಪಿಸಲಿ. ಹೀಗಾಗಿ ಹಿರಿಯ ನ್ಯಾಯಮೂರ್ತಿ ನೇತೃತ್ವದ ಪೀಠದ ಮುಂದೆ ಅರ್ಜಿ ಸಲ್ಲಿಸಲಾಯಿತು’ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ.ಚಲಮೇಶ್ವರ್‌, ತಾವು ಸದ್ಯದಲ್ಲೇ ಸೇವಾ ನಿವೃತ್ತಿಯಾಗುತ್ತಿದ್ದೇವೆ. ಕೊನೆಗೆ, ಮಂಗಳವಾರ ಈ ಬಗ್ಗೆ ಪರಿಶೀಲಿಸುತ್ತೇವೆ ಎಂದಿದ್ದರು.

ನಿಲುವಳಿ ತಿರಸ್ಕರಿಸಿರುವ ಸಭಾಪತಿ ಕ್ರಮವನ್ನು ಆಕ್ಷೇಪಿಸಿದ್ದ ಸಿಬಲ್‌, ನೋಟಿಸ್‌ಗೆ 64 ಸದಸ್ಯರ ಸಹಿ ಮತ್ತು ಏಳು ಮಂದಿ ಇತ್ತೀಚೆಗಷ್ಟೇ ನಿವೃತ್ತರಾದ ಸದಸ್ಯರೂ ಸಹಿ ಮಾಡಿದ್ದರು ಎಂದು ವಾದಿಸಿದ್ದರು. ಸಿಜೆಐ ಮಿಶ್ರಾ ವಿರುದ್ಧ ಕಾಂಗ್ರೆಸ್‌ ನೇತೃತ್ವದಲ್ಲಿ ಏಳು ಪಕ್ಷಗಳು ಮಹಾಭಿಯೋಗ ನಿಲುವಳಿಗೆ ನೋಟಿಸ್‌ ನೀಡಿದ್ದವು. ಸ್ವಾತಂತ್ರ್ಯಾ ನಂತರ ದೇಶದಲ್ಲಿ ಇದೇ ಮೊದಲ ಬಾರಿಗೆ ಸಿಜೆಐ ವಿರುದ್ಧ ಇಂಥ ಪ್ರಕ್ರಿಯೆ ನಡೆಸಲು ಪಕ್ಷಗಳು ಮುಂದಾಗಿದ್ದವು. ಎಲ್ಲಾ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಿದ ಬಳಿಕ ರಾಜ್ಯಸಭೆ ಸಭಾಪತಿ ಏ.23ರಂದು ನೋಟಿಸ್‌ ತಿರಸ್ಕರಿಸಿದ್ದರು.

ನಿಯಮದಲ್ಲೇ ಉಲ್ಲೇಖ 
ನ್ಯಾಯಮೂರ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವ (ಮಹಾಭಿಯೋಗ) ವೇಳೆ ಸಂಸತ್‌ಗೆ ನೋಟಿಸ್‌ ನೀಡದೆ ಅದರ ಬಗ್ಗೆ ಸಾರ್ವಜನಿಕವಾಗಿ ಮಾತನಾ ಡು ವಂತಿಲ್ಲ. ಈ ಅಂಶ ರಾಜ್ಯಸಭೆಯ ನಿಯಮ ಗಳಲ್ಲಿಯೇ ಪ್ರಸ್ತಾಪವಾಗಿದೆ ಎಂದು ಹೇಳಿದೆ ಸುಪ್ರೀಂಕೋರ್ಟ್‌. ನ್ಯಾಯಮೂರ್ತಿಗಳ ವಿರುದ್ಧ ಕ್ರಮ ಕೈಗೊಂಡ ಬಳಿಕ ಸಂಸದರು ಸಾರ್ವಜನಿಕವಾಗಿ ಹೇಳಿಕೆ ನೀಡದಂತೆ ನಿಷೇಧ ಹೇರಬೇಕು ಎಂದು ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಎ.ಕೆ.ಸಿಕ್ರಿ ಮತ್ತು ನ್ಯಾ.ಅಶೋಕ್‌ ಭೂಷಣ್‌ ನೇತೃತ್ವದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಅರ್ಜಿಯನ್ನು ಜುಲೈ  3ನೇ ವಾರದಲ್ಲಿ ಕೈಗೆತ್ತಿಕೊಳ್ಳುವುದಾಗಿ ಹೇಳಿತು. 

ರಾಜ್ಯಸಭೆ ಸಭಾಪತಿ ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಿದ ಬಳಿ ಕವೇ ಪ್ರತಿಪಕ್ಷಗಳು ಸಲ್ಲಿಸಿದ್ದ ಮಹಾಭಿ ಯೋಗ ನಿಲುವಳಿಯನ್ನು ತಿರಸ್ಕರಿಸಿದ್ದಾರೆ. ಕಾಂಗ್ರೆಸ್‌ನ ಇಬ್ಬರು ಸಂಸದರು ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಯಾವ ಮಹತ್ವವೂ ಇಲ್ಲ.
ಅಮನ್‌ ಸಿನ್ಹಾ, ಬಿಜೆಪಿ ನಾಯಕ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಅತ್ಯಾಧುನಿಕ ಮಾದರಿಯ ಕರ್ನಾಟಕ ಭವನ ನಿರ್ಮಾಣ: ಕಾರಜೋಳ

ಅತ್ಯಾಧುನಿಕ ಮಾದರಿಯ ಕರ್ನಾಟಕ ಭವನ ನಿರ್ಮಾಣ: ಕಾರಜೋಳ

tiktok

ಸೆ.20ರಿಂದ ಅಮೆರಿಕದಲ್ಲಿ ಟಿಕ್ ಟಾಕ್, ವಿ-ಚಾಟ್ ಅಧಿಕೃತವಾಗಿ ಬ್ಯಾನ್

ಪಾರ್ಲಿಮೆಂಟ್ ನೊಳಗೆ ಅಶ್ಲೀಲ ಚಿತ್ರ ವೀಕ್ಷಿಸುತ್ತಿದ್ದಾಗಲೇ ಸಿಕ್ಕಿಬಿದ್ದ ಥಾಯ್ ಸಂಸದ!

ಪಾರ್ಲಿಮೆಂಟ್ ನೊಳಗೆ ಅಶ್ಲೀಲ ಚಿತ್ರ ವೀಕ್ಷಿಸುತ್ತಿದ್ದಾಗಲೇ ಸಿಕ್ಕಿಬಿದ್ದ ಥಾಯ್ ಸಂಸದ!

‘ಬೆಳೆ ಸಮೀಕ್ಷೆ ಆಪ್’ಗೆ ರೈತರಿಂದ ಉತ್ತಮ ಸ್ಪಂದನೆ : ಏನು? ಎತ್ತ? ಇಲ್ಲಿದೆ ಮಾಹಿತಿ

‘ಬೆಳೆ ಸಮೀಕ್ಷೆ ಆಪ್’ಗೆ ರೈತರಿಂದ ಉತ್ತಮ ಸ್ಪಂದನೆ : ಏನು? ಎತ್ತ? ಇಲ್ಲಿದೆ ಮಾಹಿತಿ

ಶಾಸಕರಿಗೆ ಕೋವಿಡ್ 19 ಪರಿಕ್ಷೆ : ತಪಾಸಣೆಗೊಳಗಾದ ಸ್ಪೀಕರ್ ಕಾಗೇರಿ

ಶಾಸಕರಿಗೆ ಕೋವಿಡ್ 19 ಪರಿಕ್ಷೆ : ತಪಾಸಣೆಗೊಳಗಾದ ಸ್ಪೀಕರ್ ಕಾಗೇರಿ

ವಿಷ್ಣುದಾದ 70 ಅಭಿಮಾನಿಗಳ ಮನದಲ್ಲಿ ಯಜಮಾನ್ರು ಜೀವಂತ

ವಿಷ್ಣುದಾದ 70 ಅಭಿಮಾನಿಗಳ ಮನದಲ್ಲಿ ಯಜಮಾನ್ರು ಜೀವಂತ

t-15

ತಡೆಯಲಾಗದ ಅನಿಯಂತ್ರಿತ ಮೂತ್ರ ವಿಸರ್ಜನೆ ಮತ್ತು ಮೂತ್ರಶಂಕೆಯ ಅವಸರ






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಂಪಿ: ಅಕ್ರಮ ಕಲ್ಲುಗಣಿಗಾರಿಕೆ ಮೇಲೆ ದಾಳಿ ಮೂರು ಲಾರಿ ವಶ

ಹಂಪಿ: ಅಕ್ರಮ ಕಲ್ಲು ಗಣಿಗಾರಿಕೆ ಮೇಲೆ ದಾಳಿ; 3 ಲಾರಿ ವಶ

ಮುಂಬಯಿ: 2 ಕೆಜಿ ಚರಸ್‌ ಜತೆಗೆ ಇಬ್ಬರ ಬಂಧನ

ಮುಂಬಯಿ: 2 ಕೆಜಿ ಚರಸ್‌ ಜತೆಗೆ ಇಬ್ಬರ ಬಂಧನ

ಕೃಷಿ ಮಸೂದೆ ಬಗ್ಗೆ ಸುಳ್ಳು ಹಬ್ಬಿಸಬೇಡಿ: ವಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ಆರೋಪವೇನು?

ಕೃಷಿ ಮಸೂದೆ ಬಗ್ಗೆ ಸುಳ್ಳು ಹಬ್ಬಿಸಬೇಡಿ: ವಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ಆರೋಪವೇನು?

ವೆಂಟಿಲೇಟರ್ ಸಮಸ್ಯೆ; ನವಜಾತ ಶಿಶು ಸಾವು-ಸಂಬಂಧಿಕರ ಆಕ್ರೋಶ, ನರ್ಸ್ ಒತ್ತೆಯಾಳು!

ವೆಂಟಿಲೇಟರ್ ಸಮಸ್ಯೆ; ನವಜಾತ ಶಿಶು ಸಾವು-ಸಂಬಂಧಿಕರ ಆಕ್ರೋಶ, ನರ್ಸ್ ಒತ್ತೆಯಾಳು!

ಕೇಂದ್ರದ ಕೃಷಿ ಕ್ಷೇತ್ರದ ಮೂದೆಗೆ ತೀವ್ರ ವಿರೋಧ; ಸೆ.24ರಿಂದ ರೈಲು ತಡೆ ಪ್ರತಿಭಟನೆ

ಕೇಂದ್ರದ ಕೃಷಿ ಕ್ಷೇತ್ರದ ಮಸೂದೆಗೆ ತೀವ್ರ ವಿರೋಧ; ಸೆ.24ರಿಂದ ರೈಲು ತಡೆ ಪ್ರತಿಭಟನೆ

MUST WATCH

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!

udayavani youtube

ಭತ್ತದ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

COVID-19 ಸಮಯದಲ್ಲಿ ಜೀವನಕ್ಕೆ ಆಧಾರವಾದ ಹೈನುಗಾರಿಕೆ

udayavani youtube

ಕೃಷಿ ಮಾಡಲು ಹಠ – ಚಟ ಎರಡೂ ಇರಬೇಕು ಎಂದ ಕೃಷಿಕ | Success story of BV Poojary



ಹೊಸ ಸೇರ್ಪಡೆ

ಅರಳದಿನ್ನಿ ರಸ್ತೆ ದೇವರಿಗೆ ಪ್ರೀತಿ

ಅತ್ಯಾಧುನಿಕ ಮಾದರಿಯ ಕರ್ನಾಟಕ ಭವನ ನಿರ್ಮಾಣ: ಕಾರಜೋಳ

ಅತ್ಯಾಧುನಿಕ ಮಾದರಿಯ ಕರ್ನಾಟಕ ಭವನ ನಿರ್ಮಾಣ: ಕಾರಜೋಳ

rc-tdy-1

ವಿಮಾನ ನಿಲ್ದಾಣಕ್ಕೆ ಡಿಪಿಆರ್‌ ಸಿದ್ಧಪಡಿಸಿ: ಸವದಿ

ಮಳೆ ಹಾನಿ ಜಂಟಿ ಸಮೀಕ್ಷೆ

ಮಳೆ ಹಾನಿ ಜಂಟಿ ಸಮೀಕ್ಷೆ

tiktok

ಸೆ.20ರಿಂದ ಅಮೆರಿಕದಲ್ಲಿ ಟಿಕ್ ಟಾಕ್, ವಿ-ಚಾಟ್ ಅಧಿಕೃತವಾಗಿ ಬ್ಯಾನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.