ಪಿಎಂ ಕೇರ್ಸ್ ವಿರುದ್ಧ ಅರ್ಜಿ ತಿರಸ್ಕೃತ
Team Udayavani, Apr 14, 2020, 5:37 AM IST
ನವದೆಹಲಿ: ಕೋವಿಡ್ ಸೋಂಕಿನಿಂದ ನೊಂದವರಿಗೆ ದೇಣಿ ನೀಡಲು ಸ್ಥಾಪಿಸಿರುವ ಪಿಎಂ ಕೇರ್ಸ್ ನಿಧಿ ಸ್ಥಾಪನೆ ಪ್ರಶ್ನೆ ಮಾಡಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ತಿರಸ್ಕರಿಸಿದೆ. ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ನೇತೃತ್ವದ ನ್ಯಾಯಪೀಠ ನ್ಯಾಯವಾದಿ ಎಂ.ಎಲ್.ಶರ್ಮಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿ ಸಂವಿಧಾನದ ನಿಯಮಗಳಿಗೆ ಅನುಸಾರವಾಗಿ ನಿಧಿ ರಚನೆ ಮಾಡಲಾಗಿಲ್ಲ ಎಂಬ ವಾದವನ್ನು ತಿರಸ್ಕರಿಸಿದೆ.
ಇದೇ ವೇಳೆ, ಪಿಎಂ ಕೇರ್ಸ್ ಫಂಡ್‌ನ ಲೆಕ್ಕಪರಿಶೋಧನೆಯನ್ನು ಪ್ರಧಾನಿ ಮತ್ತು ಅದರ ಟ್ರಸ್ಟಿಗಳು ನೇಮಿಸಿದ ಸ್ವತಂತ್ರ ಅರ್ಹ ಲೆಕ್ಕಪರಿಶೋಧಕರು ನಡೆಸಲಿದ್ದಾರೆ. ಪಿಎಂ ಕೇರ್ಸ್ ಫಂಡ್‌ಗೆ ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆಯಡಿ ವಿನಾಯಿತಿಯಿದೆ. ಅಲ್ಲದೆ, ವಿದೇಶಿ ದೇಣಿಗೆ ಪಡೆಯಲು ಪ್ರತ್ಯೇಕ ಖಾತೆಯನ್ನು ತೆರೆಯಲಾಗಿದೆ.