ಜೆಇಇ ಮೇನ್ 2018: ವಿಜಯವಾಡದ ಸೂರಜ್ ಕೃಷ್ಣ ಗೆ ನಂ.1 ರಾಂಕ್
Team Udayavani, Apr 30, 2018, 7:27 PM IST
ಹೈದರಾಬಾದ್ : ಇಂದು ಪ್ರಕಟಗೊಂಡಿರುವ ಜೆಇಇ ಮೇನ್ 2018 ಪೇಪರ್ 1ರ ಫಲಿತಾಂಶದಲ್ಲಿ ವಿಜಯವಾಡದ ಸೂರಜ್ ಕೃಷ್ಣ ಅಖೀಲ ಭಾರತ ನಂಬರ್ ಒನ್ ರಾಂಕ್ ಪಡೆದಿರುವ ಅದ್ಭುತ ಸಾಧನೆಯನ್ನು ಮಾಡಿದ್ದಾರೆ.
2018ರ ಜೆಇಇ ಮೇನ್ಸ್ ನಲ್ಲಿ ಅಗ್ರ ರಾಂಕ್ ಪಡೆದಿರುವ ಸೂರಜ್ ಕೃಷ್ಣ ಜನರಲ್ ಕೆಟಗರಿಯ ವಿದ್ಯಾರ್ಥಿಯಾಗಿದ್ದಾರೆ.
ಆರನೇ ಆವೃತ್ತಿಯ ಜೆಇಇ ಮೇನ್ 2018ರ ಆಫ್ಲೈನ್ ಪರೀಕ್ಷೆಯು 2018ರ ಎಪ್ರಿಲ್ 8ರಂದು ನಡೆದಿತ್ತು. 10,43,739 ಅಭ್ಯರ್ಥಿಗಳು (ಇವರಲ್ಲಿ ಹುಡುಗರು 6,46,814, ಹುಡುಗಿಯರು 2,66,745 ಮತ್ತು ಮೂವರು ಲಿಂಗಾಂತರಿಗಳು) ಪರೀಕ್ಷೆಗೆ ನೋಂದಾವಣೆ ಮಾಡಿಕೊಂಡಿದ್ದರು. ಎನ್ಐಟಿ, ಐಐಐಟಿ ಮತ್ತು ಕೇಂದ್ರ ಹಣಕಾಸು ನೆರವಿನಲ್ಲಿ ನಡೆಯುತ್ತಿರುವ ಇತರ ತಾಂತ್ರಿಕ ವಿದ್ಯಾಲಯಗಳ ಸೇರ್ಪಡೆ ಈ ಪರೀಕ್ಷೆಗಳು ನಡೆದಿದ್ದವು.