ಅತ್ಯಾಚಾರ ಪ್ರಕರಣ : ಅಸರಾಂ ಪುತ್ರ ನಾರಾಯಣ ಸಾಯಿ ದೋಷಿ

ಸಹೋದರಿಯರ ಅತ್ಯಾಚಾರ ಪ್ರಕರಣದಲ್ಲಿ ಅಸರಾಂ ಪುತ್ರನ ಮೇಲಿನ ಆರೋಪ ಸಾಬೀತು

Team Udayavani, Apr 26, 2019, 3:21 PM IST

ಸೂರತ್‌: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಘೋಷಿತ ದೇವ ಮಾನವ ಅಸರಾಂ ಬಾಪು ಪುತ್ರ ನಾರಾಯಣ ಸಾಯಿ ಅವರನ್ನು ದೋಷಿ ಎಂದು ಸೂರತ್‌ ಸೆಷನ್‌ ನ್ಯಾಯಾಲಯ ಘೋಷಿಸಿದೆ. ಗುಜರಾತ್‌ ನ ಸೂರತ್‌ ನಲ್ಲಿ ಸಹೋದರಿಯರಿಬ್ಬರ ಮೇಲೆ ಅತ್ಯಾಚಾರವೆಸಗಿರುವ ಪ್ರಕರಣದಲ್ಲಿ ನಾರಾಯಣ ಸಾಯಿ ಅವರ ಮೇಲಿನ ಆರೋಪ ಸಾಬೀತಾಗಿದೆ.

ಈ ಅತ್ಯಾಚಾರ ಪ್ರಕರಣದಲ್ಲಿ ನಾರಾಯಣ ಸಾಯಿ ಅವರ ಜೊತೆ ಆರೋಪಿಗಳಾಗಿದ್ದ ಗಂಗಾ, ಜಮುನಾ ಮತ್ತು ಹನುಮಾನ್‌ ಮೇಲಿನ ಆರೋಪಗಳೂ ಸಹ ಸಾಬೀತುಗೊಂಡಿದ್ದು ಈ ಮೂವರನ್ನೂ ಸಹ ನ್ಯಾಯಾಲವು ದೋಷಿಗಳು ಎಂದು ತೀರ್ಮಾನಿಸಿದೆ. ಆದರೆ ಈ ಪ್ರಕರಣದಲ್ಲಿ ಆರೋಪಿಯಾಗಿದ್ದ ಇನ್ನೋರ್ವ ಮಹಿಳೆ ಮೋನಿಕಾಳನ್ನು ನ್ಯಾಯಾಲವು ಮುಗ್ದೆ ಎಂದು ತನ್ನ ತೀರ್ಪಿನಲ್ಲಿ ಉಲ್ಲೇಖೀಸಿದೆ. ಅಪರಾಧಿಗಳಿಗೆ ಶಿಕ್ಷೆಯ ಮಾದರಿ ಮತ್ತು ಪ್ರಮಾಣವನ್ನು ನ್ಯಾಯಾಲವು ಎಪ್ರಿಲ್‌ 30ರಂದು ಪ್ರಕಟಿಸಲಿದೆ.

ನಾರಾಯಣ ಸಾಯಿ ವೇಷ ಮರೆಸಿಕೊಂಡು ದೇಶ ಬಿಟ್ಟು ಪರಾರಿಯಾಗಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ದೆಹಲಿ ಪೊಲೀಸರಿಂದ 2013ನೇ ಇಸವಿ ಡಿಸೆಂಬರ್‌ ತಿಂಗಳಲ್ಲಿ ಬಂಧಿಸಲ್ಪಟ್ಟಿದ್ದ. 2013ರಲ್ಲಿ ದಾಖಲಾಗಿರುವ ಈ ಅತ್ಯಾಚಾರ ಪ್ರಕರಣದಲ್ಲಿ ನಾರಾಯಣ ಸಾಯಿ ತಂದೆ ಅಸಾರಾಂ ಬಾಪೂ ಕೂಡ ಆರೋಪಿಯಾಗಿದ್ದಾನೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ