ಸರ್ಜಿಕಲ್‌ ದಾಳಿ ಹೈಪ್‌ ಹೆಚ್ಚಾಯ್ತು


Team Udayavani, Dec 9, 2018, 6:00 AM IST

11.jpg

ನವದೆಹಲಿ: ಸರ್ಜಿಕಲ್‌ ದಾಳಿಯನ್ನು ಮತ್ತೆ ಮತ್ತೆ ವೈಭವೀಕರಿಸುವುದು ತಪ್ಪು ಎಂದು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ಡಿ.ಎಸ್‌.ಹೂಡಾ ಅವರು ಬೇಸರ ವ್ಯಕ್ತಪಡಿಸಿದ್ದು, ಇದೀಗ ರಾಜಕೀಯ ಕಾದಾ ಟಕ್ಕೂ ಕಾರಣವಾಗಿದೆ. ಮೇಜರ್‌ ಹೂಡಾ ಅವರ ಹೇಳಿಕೆ ಬೆನ್ನಲ್ಲೇ ಪ್ರಧಾನಿ ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಿರುವ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, “”ಮಿಸ್ಟರ್‌36ಗೆ ನಾಚಿಕೆಯೇ ಇಲ್ಲ” ಎಂದು ವ್ಯಂಗ್ಯವಾಡಿದ್ದಾರೆ. 

ಶುಕ್ರವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ಡಿ.ಎಸ್‌.ಹೂಡಾ ಅವರು, ಸರ್ಜಿಕಲ್‌ ದಾಳಿಯನ್ನು ಹೆಚ್ಚು ವೈಭವೀಕರಣ ಮಾಡುವುದರಿಂದ ಸೇನೆಗೆ ಯಾವುದೇ ಲಾಭವಾಗುವುದಿಲ್ಲ. ಆರಂಭದಲ್ಲಿ ಯಶಸ್ಸಿನ ಖುಷಿ ಇರುತ್ತದೆ, ಅದನ್ನು ಅನು ಭವಿಸಬೇಕು ಅಷ್ಟೇ ಎಂದೂ ಹೇಳಿದ್ದಾರೆ. ಆದರೆ, ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು, ಮತ್ತೆ ಮತ್ತೆ ಪ್ರಸ್ತಾಪಿಸುವ ಮೂಲಕ ಹೈಪ್‌ ಮಾಡುವುದು ಸಲ್ಲದು ಎಂದಿದ್ದರು. 

ಮೊದಲಿನಿಂದಲೂ ಸರ್ಜಿಕಲ್‌ ದಾಳಿಯನ್ನು ಬಿಜೆಪಿ ಲಾಭಕ್ಕಾಗಿ ಬಳಸಿಕೊಳ್ಳು ತ್ತಿದೆ ಎಂಬುದು ಕಾಂಗ್ರೆಸ್‌ ಆರೋಪವಾಗಿತ್ತು. ಹೀಗಾಗಿ ಹೂಡಾ ಅವರ ಹೇಳಿಕೆ ಬೆನ್ನಲ್ಲೇ ರಾಹುಲ್‌ ಗಾಂಧಿ ಅವರು ಟ್ವೀಟ್‌ ಮೂಲಕ ನೇರವಾಗಿ ಪ್ರಧಾನಿಗೇ ಟಾಂಗ್‌ ನೀಡಿದ್ದಾರೆ. “”ಮಿ 36(36 ರಫೇಲ್‌ ವಿಮಾನಗಳ ಖರೀದಿ ಹಗರಣ)ಗೆ ನಾಚಿಕೆಯಾಗುವುದಿಲ್ಲ” ಎಂದು ರಾಹುಲ್‌ ಟೀಕಿಸಿದ್ದಾರೆ.  

ಅತ್ತ ಸೇನಾ ಮುಖ್ಯಸ್ಥ ಜ.ಬಿಪಿನ್‌ ರಾವತ್‌ ಅವರು ಪ್ರತಿಕ್ರಿಯೆ ನೀಡಿದ್ದು, ಸರ್ಜಿಕಲ್‌ ದಾಳಿಯನ್ನು ಮುನ್ನ‚ಡೆಸಿದ ವರಲ್ಲಿ ಡಿ.ಎಸ್‌.ಹೂಡಾ ಅವರೂ ಒಬ್ಬರು. ಹೀಗಾಗಿ ಅವರ ವೈಯಕ್ತಿಕ ಹೇಳಿಕೆಗಳಿಗೆ ಬೆಲೆ ಕೊಡಬೇಕಾದದ್ದು ನಮ್ಮ ಕರ್ತವ್ಯ. ಹೀಗಾಗಿ ಅವರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ. ಇನ್ನೊಂದೆಡೆ, ಸೇನೆಯ ನಾರ್ದರ್ನ್ ಕಮಾಂಡ್‌ ಚೀಫ್ ಲೆ.ಜ. ರಣಬೀರ್‌ ಸಿಂಗ್‌ ಅವರು ಮಾತನಾಡಿ, ಸರ್ಜಿಕಲ್‌ ದಾಳಿಯು ಒಂದು ಯಶಸ್ವಿ ಕಾರ್ಯಾಚರಣೆಯಾಗಿದ್ದು, ಪಾಕಿಸ್ತಾನಕ್ಕೆ ದುಸ್ಸಾಹಸ ನಿಲ್ಲಿಸಿ ಎಂಬ ಸ್ಪಷ್ಟ ಸಂದೇಶ ವನ್ನು ರವಾನಿಸಿದೆ ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್

bhagavanth-kubha

ರಸಗೊಬ್ಬರ ಕೊರತೆ; ಕಾಂಗ್ರೆಸ್ ಸುಳ್ಳಿನಿಂದ ಆತಂಕ ಸೃಷ್ಟಿ : ಭಗವಂತ್ ಖೂಬಾ

21school

ಊಟಕ್ಕಾಗಿ 1ಕಿ.ಮೀ ನಡೆಯುತ್ತಿದ್ದ ಮಕ್ಕಳು: ಕೊನೆಗೂ ಬಂತು ಬಿಸಿಯೂಟ

ನಮಗೂ ಮಾದರಿ: ನದಿ ಉಳಿಸಲು ಕಾನೂನು ರಚಿಸಿದ ದೇಶಗಳು..!

ನಮಗೂ ಮಾದರಿ: ನದಿ ಉಳಿಸಲು ಕಾನೂನು ರಚಿಸಿದ ದೇಶಗಳು..!

Tesla’s market cap crosses $1 trillion

ಟೆಸ್ಲಾ ಮಾರುಕಟ್ಟೆ ಮೌಲ್ಯ 1ಲಕ್ಷ ಕೋಟಿ ರೂ. ದಾಟಿದೆ..!

111111111

ನವೆಂಬರ್ ನಲ್ಲಿ ತೆರೆಯ ಮೇಲೆ ಮೂಡಿ ಬರಲಿದೆ ‘ಟಾಮ್ ಅಂಡ್ ಜೆರ್ರಿ’

siddaramaiah

ಜನತಾ ನ್ಯಾಯಾಲಯದ ಮುಂದೆ ಚರ್ಚೆಗೆ ಭಯವೇಕೆ : ಸಿಎಂಗೆ ಸಿದ್ದರಾಮಯ್ಯ ಪ್ರಶ್ನೆ

WS_Jazz 4

ಕನ್ನಡದಲ್ಲೇ ಮೊದಲ ಪ್ರಯೋಗ : ವಿಂಡೋಸೀಟ್ ನಲ್ಲಿ ಮೂಡಿ ಬಂತು ಜಾಝ್ ಸಾಂಗ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತರುಣ್ ತೇಜ್ ಪಾಲ್ ಕೇಸ್: ವಿಚಾರಣಾಧೀನ ಕೋರ್ಟ್ ತೀರ್ಪು, 5ನೇ ಶತಮಾನಕ್ಕೆ ಸೂಕ್ತ: ಗೋವಾ

ತರುಣ್ ತೇಜ್ ಪಾಲ್ ಕೇಸ್: ವಿಚಾರಣಾಧೀನ ಕೋರ್ಟ್ ತೀರ್ಪು, 5ನೇ ಶತಮಾನಕ್ಕೆ ಸೂಕ್ತ: ಗೋವಾ

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದ ಸಂಪುಟ ರಾಜಿನಾಮೆಗೆ ಪ್ರತಿಪಕ್ಷಗಳ ಆಗ್ರಹ

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದ ಸಂಪುಟ ರಾಜಿನಾಮೆಗೆ ಪ್ರತಿಪಕ್ಷಗಳ ಆಗ್ರಹ

ಪೆಗಾಸಸ್ ಗೂಢಚರ್ಯೆ; ಸ್ವತಂತ್ರ ತನಿಖೆ ನಡೆಸಲು ತಜ್ಞರ ಸಮಿತಿ ರಚಿಸಿದ ಸುಪ್ರೀಂಕೋರ್ಟ್

ಪೆಗಾಸಸ್ ಗೂಢಚರ್ಯೆ; ಸ್ವತಂತ್ರ ತನಿಖೆ ನಡೆಸಲು ತಜ್ಞರ ಸಮಿತಿ ರಚಿಸಿದ ಸುಪ್ರೀಂಕೋರ್ಟ್

ಕೋವಿಡ್ 19 ಪ್ರಕರಣಗಳ ಸಂಖ್ಯೆ ದಿಢೀರ್ ಹೆಚ್ಚಳ; ಬಂಗಾಳ ನಗರದಲ್ಲಿ ಲಾಕ್ ಡೌನ್ ಜಾರಿ

ಕೋವಿಡ್ 19 ಪ್ರಕರಣಗಳ ಸಂಖ್ಯೆ ದಿಢೀರ್ ಹೆಚ್ಚಳ; ಬಂಗಾಳ ನಗರದಲ್ಲಿ ಲಾಕ್ ಡೌನ್ ಜಾರಿ

safty belt

ಸುರಕ್ಷತಾ ಚೀಲ, ಹೆಲ್ಮೆಟ್‌ ಅಗತ್ಯ ..!

MUST WATCH

udayavani youtube

ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಬೇಕಾಗಿದೆ : ಆರ್. ಅಶೋಕ್

udayavani youtube

ಆಧುನಿಕ ಪದ್ಧತಿಯೊಂದಿಗೆ ಬ್ಯಾಡಗಿ ಮೆಣಸಿನಕಾಯಿ ಕೃಷಿಗೆ ಮುಂದಾದ ಅಡಕೆ ಕೃಷಿಕ

udayavani youtube

ಬಸ್ ಕಂಡಕ್ಟರ್‌ನಿಂದ ಸೂಪರ್ ಸ್ಟಾರ್ ಆದ ರಜನಿಕಾಂತ್ ಕಥೆ

udayavani youtube

ಈ ಪ್ರೌಢ ಶಾಲೆಯಲ್ಲಿ ಒಂದಲ್ಲ, ಎರಡಲ್ಲ ಹಲವಾರು ಸಮಸ್ಯೆಗಳು!

udayavani youtube

ಪಾಕಿಸ್ಥಾನದ ವಿಜಯವನ್ನು ಸಂಭ್ರಮಿಸಿದ ರಾಜಸ್ಥಾನದ ಟೀಚರ್

ಹೊಸ ಸೇರ್ಪಡೆ

bhagavanth-kubha

ರಸಗೊಬ್ಬರ ಕೊರತೆ; ಕಾಂಗ್ರೆಸ್ ಸುಳ್ಳಿನಿಂದ ಆತಂಕ ಸೃಷ್ಟಿ : ಭಗವಂತ್ ಖೂಬಾ

21school

ಊಟಕ್ಕಾಗಿ 1ಕಿ.ಮೀ ನಡೆಯುತ್ತಿದ್ದ ಮಕ್ಕಳು: ಕೊನೆಗೂ ಬಂತು ಬಿಸಿಯೂಟ

ಮೈಸೂರು ಆರ್ಟಿಸ್ಟ್‌ ಅಸೋಸಿಯೇಷನ್‌ನಿಂದ ಸಾಮೂಹಿಕ ನಾಡಗೀತೆ

ಅನಂತಸ್ವಾಮಿ ಗೀತೆಯನ್ನೇ ನಾಡಗೀತೆಯಾಗಿ ಘೋಷಿಸಿ

ನಮಗೂ ಮಾದರಿ: ನದಿ ಉಳಿಸಲು ಕಾನೂನು ರಚಿಸಿದ ದೇಶಗಳು..!

ನಮಗೂ ಮಾದರಿ: ನದಿ ಉಳಿಸಲು ಕಾನೂನು ರಚಿಸಿದ ದೇಶಗಳು..!

20lake

ಇನ್ನೂ ತುಂಬಿಲ್ಲ ನಿಡಶೇಸಿ ಕೆರೆಯಂಗಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.