ಎಲ್ಲಾ ಮಿತಿಗಳನ್ನು ಮೀರಿದ್ದೀರಿ:ಮಮತಾ ವಿರುದ್ಧ ಸುಷ್ಮಾ ಕಿಡಿ

Team Udayavani, May 8, 2019, 9:34 AM IST

ಹೊಸದಿಲ್ಲಿ: ಮಮತಾ ಬ್ಯಾನರ್ಜಿ ಅವರು ಎಲ್ಲಾ ಮಿತಿಗಳನ್ನು ಮೀರಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು ಟ್ವೀಟ್‌ ಮಾಡುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.

‘ನರೇಂದ್ರ ಮೋದಿ ಅವರನ್ನು ನಾನು ಪ್ರಧಾನಿ ಎಂದು ಒಪ್ಪಿಕೊಳ್ಳುವುದಿಲ್ಲ.  ಅವರಿಗೆ ಪ್ರಜಾಸತ್ತೆಯ ಬಿಗಿ ಕಪಾಳಮೋಕ್ಷ ಸಿಗಬೇಕು’ ಅನಿಸುತ್ತಿದೆ ಎಂದ ಮಮತಾ ಅವರ ವಿರುದ್ಧ ಟ್ವೀಟ್‌ ಮಾಡಿರುವ ಸುಷ್ಮಾ , ಮಮತಾ ಜಿ, ನೀವು ನಿಮ್ಮ ಎಲ್ಲಾ ಮಿತಿಗಳನ್ನು ಮೀರಿದ್ದೀರಿ. ನೀವು ಮುಖ್ಯಮಂತ್ರಿ, ಮೋದಿ ಜಿ ಪ್ರಧಾನಿ, ನಾಳೆ ನಿಮಗೆ ಅವರೊಂದಿಗೆ ಮಾತನಾಡಲೇ ಬೇಕು. ಇದಕ್ಕಾಗಿ ನಾನು ಬಶೀರ ಬದ್ರ್ ಅವರ ಕವಿತೆಯೊಂದನ್ನು ನೆನಪಿಸುತ್ತೇನೆ, ದುಶ್ಮನಿ ಜಮ್‌ ಕರ್‌ ಕರೋ ಲೇಕಿನ್‌ ಯೇ ಗುಂಜಾಯಿಶ್‌ ರಹೆ. ಜಬ್‌ ಕಭಿ ಹಮ್‌ ದೋಸ್ತ್ ಹೋ ಜಾಯೇ ತೋ ಶರ್ಮಿಂದಾ ನ ಹೋ ..(ವೈರತ್ವವನ್ನು ಮಾಡಿ ಆದರೆ ಮಿತಿ ಇರಲಿ, ನಾಳೆ ಮಿತ್ರರಾದರೆ ನಾಚಿಕೆ ಪಡಬೇಡಿ) ಎಂದು ಬರೆದಿದ್ದಾರೆ.

ಮಮತಾ ಬ್ಯಾನರ್ಜಿ ಸರ್ಕಾರವನ್ನು ಸುಲಿಗೆ ಕೂಟದ ಹಣದಿಂದ ನಡೆಯುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಬಂಗಾಳದ ಹಲವೆಡೆ ಚುನಾವಣಾ ಪ್ರಚಾರ ಸಭೆಗಳನ್ನು ಆರೋಪಿಸಿದ್ದರು.

ಫೋನಿ ಚಂಡ ಮಾರುತದ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕರೆಯನ್ನು ಸ್ವೀಕರಿಸಿದೇ ಇದ್ದ ಮಮತಾ ಸಮರ ಸಾರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ