ಜಿಯೋ ಮಾಹಿತಿ ಸೋರಿಕೆ: ಕೇಸು ದಾಖಲು

Team Udayavani, Jul 13, 2017, 3:00 AM IST

ಮುಂಬಯಿ/ಜೈಪುರ: ರಿಲಯನ್ಸ್‌ ಜಿಯೋ ಗ್ರಾಹಕರ ಆಧಾರ್‌ ಮಾಹಿತಿಗಳು ಸೋರಿಕೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ನವಿ ಮುಂಬೈ ಪೊಲೀಸರು ಸೈಬರ್‌ ಕಾನೂನು ಅಡಿ ಕೇಸು ದಾಖಲಿಸಿದ್ದಾರೆ. ಇತ್ತ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಪೊಲೀಸರು ಚುರು ಜಿಲ್ಲೆಯ ಇಮ್ರಾನ್‌ ಚಿಹಿಂಪಾ ಎಂಬಾತನ್ನು ಬಂಧಿಸಿದ್ದಾರೆ. ಸುಮಾರು 12 ಕೋಟಿ ಜಿಯೋ ಬಳಕೆದಾರರು ದೇಶದಲ್ಲಿದ್ದು, ಇವರಲ್ಲಿ ಬಹಳಷ್ಟು ಪ್ರಮಾಣದ ಗ್ರಾಹಕರ ಮಾಹಿತಿ ಸೋರಿಕೆಯಾಗಿತ್ತು. ಆದರೆ ಕಂಪನಿ ಈ ಅಂಶವನ್ನು ತಿರಸ್ಕರಿಸಿತ್ತು. ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಕ್ರೈಂ ವಿಭಾಗಕ್ಕೆ ವರ್ಗಾಯಿಸಲಾಗಿದೆ. ಜಿಯೋ ರಿಟೇಲರ್‌ಗಳು ರಿಚಾರ್ಜ್‌ಗಾಗಿ ಬಳಸುವ ಆ್ಯಪ್‌ನಲ್ಲಿ ಜಿಯೋ ಗ್ರಾಹಕರ ಸಂಪೂರ್ಣ ವಿವರಗಳು ಲಭ್ಯವಾಗುತ್ತಿವೆ ಎಂದು ಪೊಲೀಸರು ಹೇಳಿದ್ದಾರೆ. ಜೊತೆಗೆ ‘ಮ್ಯಾಜಿಕಾಪಿಕೆ’ ಹೆಸರಿನ ವೆಬ್‌ಸೈಟ್‌ನಲ್ಲಿ ಮಾಹಿತಿಗಳು ಲಭ್ಯವಾಗುತ್ತಿದ್ದವು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ