70 ರೂ ಗಾಗಿ ವಿದ್ಯಾರ್ಥಿನಿಯನ್ನು ಶಾಲೆಯಲ್ಲೇ ನಗ್ನಗೊಳಿಸಿದರು!

Team Udayavani, Nov 5, 2017, 10:30 AM IST

ಭೂಪಾಲ್‌ : ಸಹಪಾಠಿಯ  70 ರೂಪಾಯಿ ಕದ್ದಿದ್ದಾಳೆ ಎನ್ನುವ ಶಂಕೆಯಲ್ಲಿ ವಿದ್ಯಾರ್ಥಿನಿಯೊಬ್ಬಳನ್ನು ಶಿಕ್ಷಕಿ  ನಗ್ನಗೊಳಿಸಿ ಹುಡುಕಾಡಿದಹೇಯ ಘಟನೆ ದಮೋಹ ಎಂಬಲ್ಲಿ ನಡೆದಿದೆ.

70 ರೂಪಾಯಿ ಕಳೆದುಕೊಂಡಿದ್ದ ವಿದ್ಯಾರ್ಥಿನಿ ನೀಡಿದ ದೂರಿನಂತೆ ಶಿಕ್ಷಕಿ ಹುಡುಕಾಟದ್ದಿದ್ದು, ಈ ವೇಳೆ ವಿದ್ಯಾರ್ಥಿನಿಯೊಬ್ಬಳ ಮೇಲೆ ಸಂಶಯದಲ್ಲಿ ಬ್ಯಾಗ್‌ಗಳನ್ನು ಹುಡುಕಾಡಿದ್ದಾರೆ. ಹಣ ಪತ್ತೆಯಾಗದೆ ಇದ್ದಾಗ ತಾನು ಹೆಣ್ಣಎನ್ನುವುದನ್ನು ಮರೆತು ಶಿಕ್ಷಕಿ ನಾಚಿಕೆಗೇಡಿನಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ.

ನಾನು ಹಣ ಕದ್ದಿರಲಿಲ್ಲ, ಒಪ್ಪದೆ ಇದ್ದಾಗ ನನ್ನ ಮತ್ತು ಸ್ನೇಹಿತೆಯ ಬಟ್ಟೆ ಬಿಚ್ಚಿಸಿ ಹುಡುಕಾಡಿದ್ದಾರೆ ಎಂದು ನೊಂದ ವಿದ್ಯಾರ್ಥಿನಿ ಹೇಳಿಕೊಂಡಿದ್ದಾಳೆ.

ಈ ಬಗ್ಗೆ ಶಿಕ್ಷಣ ಅಧಿಕಾರಿಗಳು ಶಾಲೆಯ ಪ್ರಿನ್ಸಿಪಾಲ್‌ಗೆ ಶೋಕಾಸ್‌ ನೊಟೀಸ್‌ ನೀಡಿದ್ದಾರೆ. ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. 
 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ