ಪಶ್ಚಿಮ ಬಂಗಾಳ : ಪ್ರತಿಪಕ್ಷದ ನಾಯಕರಾಗಿ ಸುವೇಂದು ಅಧಿಕಾರಿ ನೇಮಕ
Team Udayavani, May 10, 2021, 1:33 PM IST
ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿ ನಂದಿಗ್ರಾಮ್‌ನ ಬಿಜೆಪಿ ಶಾಸಕ ಸುವೇಂದು ಅಧಿಕಾರಿ ಇಂದು ನೇಮಕಗೊಂಡಿದ್ದಾರೆ.
ಇತ್ತೀಚಿಗಷ್ಟೆ ನಡೆದ ಪಶ್ಚಿಮ ಬಂಗಾಳದ ವಿಧಾನ ಸಭೆ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಕ್ಷೇತ್ರವಾಗಿದ್ದ ನಂದಿಗ್ರಾಮದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಸುವೇಂದು ಅಧಿಕಾರಿ 1,956 ಮತಗಳ ಅಂತರದಿಂದ ಜಯಶಾಲಿ ಆಗಿದ್ದಾರೆ.
ಈ ಮೊದಲು ಟಿಎಂಸಿ ಪಕ್ಷದಲ್ಲಿದ್ದ ಸುವೇಂದು ವಿಧಾನ ಸಭೆ ಚುನಾವಣೆಯ ಮುನ್ನ ಬಿಜೆಪಿ ಸೇರಿ, ದೀದಿ ವಿರುದ್ಧ ನಂದಿಗ್ರಾಮದಲ್ಲಿ ಸ್ಪರ್ಧಿಸಿದ್ದರು. ಮತ ಎಣಿಕೆಯ ದಿನದಂದು ಮಮತಾ ಆರಂಭಿಕ ಮುನ್ನಡೆ ಪಡೆದಿದ್ದರೂ ಕೂಡ ಅಂತಿಮವಾಗಿ ಸುವೇಂದು ಗೆಲುವಿನ ನಗೆ ಬೀರಿದರು.
ಇನ್ನು ಬಂಗಾಳದಲ್ಲಿ ಟಿಎಂಸಿ ಅಭೂತಪೂರ್ವ ಸಾಧನೆ ಮಾಡಿದ್ದು 221 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಅಧಿಕಾರದ ಗದ್ದುಗೆ ಏರಿದೆ. ಇತ್ತೀಚಿಗಷ್ಟೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಮಮತಾ ಬ್ಯಾನರ್ಜಿ ಅಧಿಕಾರ ವಹಿಸಿಕೊಂಡಿದ್ದಾರೆ. ಚುನಾವಣೆಯಲ್ಲಿ ಎರಡನೇ ದೊಡ್ಡ ಪಕ್ಷವಾಗಿ ಹೊಮ್ಮಿರುವ ಬಿಜೆಪಿ ಇದೀಗ ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತುಕೊಂಡಿದೆ. ಇಂದು ಸುವೇಂದು ಅಧಿಕಾರಿ ಪ್ರತಿಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಲೇಷ್ಯಾ ವಾಯುಪಡೆ ಜತೆಗೆ ಐಎಎಫ್ ಸಮರಾಭ್ಯಾಸ
ರಾಜು ಶ್ರೀ ವಾಸ್ತವ ಆರೋಗ್ಯದಲ್ಲಿ ಸುಧಾರಣೆ : ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ ಎಂದ ಕುಟುಂಬ
ಫೇಸ್ಬುಕ್ ಮಂಡಿಸಿರುವ ಪ್ರಸ್ತಾವನೆಗೆ ಗೂಗಲ್ ಸಂಸ್ಥೆ ವಿರೋಧ
ಸದ್ಯದಲ್ಲೇ “ಸ್ಕಾರ್ಪಿಯೊ ಕ್ಲಾಸಿಕ್’; ಆರು ಸ್ಪೀಡ್ ಮಾನ್ಯುವಲ್ ಗೇರ್ ವ್ಯವಸ್ಥೆ
35 ಗ್ರಾಂ ಬೆಳ್ಳಿಯಲ್ಲಿ ಪಾರ್ಲಿಮೆಂಟ್ ಭವನ ನಿರ್ಮಾಣ ಮಾಡಿದ ಮಿಲಿಂದ್ ಅಣ್ವೇಕರ್