ಪ್ಲಾಸ್ಟಿಕ್‌ ವಿರುದ್ಧ ಮತ್ತೆ ರಣಕಹಳೆ

ಮಥುರಾದಲ್ಲಿ "ಸ್ವಚ್ಛತಾ ಹೀ ಸೇವಾ' ಕಾರ್ಯಕ್ರಮದಲ್ಲಿ ಪ್ರಧಾನಿಯಿಂದ ಮತ್ತೂಮ್ಮೆ ಕರೆ

Team Udayavani, Sep 12, 2019, 5:39 AM IST

ಉತ್ತರ ಪ್ರದೇಶದ ಮಥುರಾದಲ್ಲಿ ಬುಧವಾರ ಪಶು ವಿಜ್ಞಾನ ಮತ್ತು ಆರೋಗ್ಯ ಮೇಳಕ್ಕೆ ಭೇಟಿ ನೀಡಿದ ಮೋದಿ ಅವರು ಅಲ್ಲಿದ್ದ ಕರುವೊಂದರ ಮೈದಡವಿದರು.

ಮಥುರಾ: ಒಂದು ಬಾರಿ ಬಳಸಬಹುದಾದ ಪ್ಲಾಸ್ಟಿಕ್‌ನ ಬಳಕೆ ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತೂಮ್ಮೆ ಕರೆ ನೀಡಿದ್ದಾರೆ.

ಮಥುರಾದಲ್ಲಿ ಬುಧವಾರ ಆಯೋಜಿಸಲಾಗಿದ್ದ “ಸ್ವಚ್ಛತಾ ಹೀ ಸೇವಾ’ ಎಂಬ ಪ್ಲಾಸ್ಟಿಕ್‌ ವಿಂಗಡಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “”ನನ್ನ ಸರಕಾರ, ದೇಶದಲ್ಲಿ ಒಮ್ಮೆ ಬಳಸ ಬಹುದಾದ ಪ್ಲಾಸ್ಟಿಕ್‌ ಅನ್ನು ಸಂಪೂರ್ಣ ನಿಷೇಧಿಸುವ ನಿರ್ಧಾರ ಕೈಗೊಂಡಿದೆ. ಪರಿಸರಕ್ಕೆ ಮಾರಕವಾಗುವ ವಸ್ತು ಗಳನ್ನು ನಿಷೇಧಿಸಿ, ಪರಿಸರ ಸ್ನೇಹಿ ವಸ್ತುಗಳನ್ನು ಜನ ಬಳಕೆಗೆ ತರುವ ಮಹಾ ಉದ್ದೇಶವನ್ನು ಸರಕಾರ ಹೊಂದಿದೆ. ತ್ಯಾಜ್ಯದಿಂದ ಪ್ಲಾಸ್ಟಿಕ್‌ ಅನ್ನು ಸಂಗ್ರಹಿಸುವ ಹಾಗೂ ಅದರ ಸಮರ್ಪಕ ವಿಲೇವಾರಿಗೆ ಹೊಸ ವ್ಯವಸ್ಥೆಗಳು, ತಂತ್ರಜ್ಞಾನಗಳ ಅಭಿವೃದ್ಧಿಗೆ ಆದ್ಯತೆ ಕೊಡಲಾಗುತ್ತದೆ” ಎಂದರು. ಜತೆಗೆ, 2022ರೊಳಗೆ ದೇಶದಿಂದ ಪ್ಲಾಸ್ಟಿಕ್‌ ಸಂಪೂರ್ಣವಾಗಿ ಮಾಯವಾಗಬೇಕು ಎಂದು ಆಶಿಸಿದರು.

ಯೋಜನೆಗಳಿಗೆ ಚಾಲನೆ: ಪ್ರಾಣಿ ರೋಗ ನಿಯಂತ್ರಣ ಯೋಜನೆ (ಎನ್‌ಎಡಿಸಿಪಿ), ಕಾಲು-ಬಾಯಿ ರೋಗದ (ಎಫ್ಎಂಡಿ) ನಿರ್ಮೂಲನೆ ಯೋಜನೆ, ಜಾನುವಾರುಗಳಲ್ಲಿ ಕಾಣಿಸಿಕೊಳ್ಳುವ ಬ್ರುಸೇಲಿಯಸ್‌ ರೋಗ ನಿರ್ಮೂಲನೆ, ರಾಷ್ಟ್ರೀಯ ಕೃತಕ ಗರ್ಭಧಾರಣೆ ಯೋಜನೆಗಳಿಗೆ ಚಾಲನೆ ನೀಡಿದರು. ಕೇಂದ್ರದಿಂದ ಶೇ. 100 ಅನುದಾನ ಹೊಂದಿರುವ ಎನ್‌ಎಡಿಸಿಪಿ ಅಡಿ, ರಾಸುಗಳು, ಕುರಿ, ಮೇಕೆ ಹಾಗೂ ಹಂದಿ ಸೇರಿದಂತೆ 50 ಕೋಟಿ ಪ್ರಾಣಿಗಳಿಗೆ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಇದಕ್ಕಾಗಿ, 12,652 ಕೋಟಿ ರೂ. ಮೀಸಲಿಡಲು ತೀರ್ಮಾನಿಸಲಾಗಿದೆ. ಇದಲ್ಲದೆ, ಬ್ರುಸೇಲಿ ಯಸ್‌ ತಡೆಗೆ ವಾರ್ಷಿಕ 3.5 ಕೋಟಿ ಹೆಣ್ಣು ಕರುಗಳಿಗೆ ಲಸಿಕೆ ನೀಡುವ ಮೂಲಕ ಆ ರೋಗವು ಮನುಷ್ಯರಿಗೆ ಹರಡದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

ಪ್ಲಾಸ್ಟಿಕ್‌ ಆಯ್ದರು, ಕರು ಜತೆ ಆಡಿದರು!
ಮಥುರಾದಲ್ಲಿ ಮೋದಿ, ಮಹಿಳೆಯರು ಪಾಲ್ಗೊಂಡಿದ್ದ “ಸ್ವಚ್ಛತಾ ಹೀ ಸೇವಾ’ ಎಂಬ ಪ್ಲಾಸ್ಟಿಕ್‌ ವಿಂಗಡಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಪ್ಲಾಸ್ಟಿಕ್‌ ಆಯುವ 25 ಮಹಿಳೆಯರ ಜತೆಗೆ ನೆಲದ ಮೇಲೆ ಕುಳಿತು ಕಸದ ರಾಶಿಯಿಂದ ತಾವೂ ಪ್ಲಾಸ್ಟಿಕ್‌ ವಿಂಗಡಣೆ ಮಾಡಿದ ಪ್ರಧಾನಿ ಮೋದಿ, ಪ್ಲಾಸ್ಟಿಕ್‌ ಸಂಗ್ರಹಿಸುವ ವಿಧಾನಗಳನ್ನು ಮಹಿಳೆಯರಿಂದ ಕೇಳಿ ತಿಳಿದುಕೊಂಡರು. ಅವರ ಪ್ಲಾಸ್ಟಿಕ್‌ ಆಯುವ ಕೆಲಸದಲ್ಲಿ ಯೋಗದಾನ ನೀಡಿದರು. ಅನಂತರ, ಆ ಮಹಿಳೆಯರನ್ನು ವೇದಿಕೆಯ ಮೇಲೆ ಸಮ್ಮಾನಿ ಸಲಾಯಿತು. ಇದಕ್ಕೂ ಮುನ್ನ, ಮಥುರಾದ ಗೋ ಶಾಲೆಗೆ ಭೇಟಿ ನೀಡಿದ ಮೋದಿ, ಅಲ್ಲಿದ್ದ ಕರುವೊಂದರ ಜತೆಗೆ ಕೆಲವು ನಿಮಿಷಗಳ ಕಾಲ ಆಟವಾಡಿದರು.

ಜೈರಾಂ ರಮೇಶ್‌ ಎಚ್ಚರಿಕೆ
ಒಮ್ಮೆ ಬಳಸಬಹುದಾದ ಪ್ಲಾಸ್ಟಿಕ್‌ ಅನ್ನು ಏಕಾಏಕಿ ನಿಷೇಧಿಸುವುದರಿಂದ ಆ ಕ್ಷೇತ್ರದಲ್ಲಿ ದುಡಿಯುತ್ತಿ ರುವ ಲಕ್ಷಾಂತರ ಜನರು ಉದ್ಯೋಗ ವಂಚಿತರಾಗಲಿದ್ದಾರೆ ಎಂದಿರುವ ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌, ಪ್ಲಾಸ್ಟಿಕ್‌ ನಿರ್ಮೂಲನೆಗಿಂತಲೂ ಹೆಚ್ಚಿನ ಒತ್ತನ್ನು ಹಳ್ಳಿಗಳು, ನಗರಗಳು ಹಾಗೂ ಮಹಾ ನಗರಗಳಲ್ಲಿ ಸಂಗ್ರಹವಾ ಗುವ ತ್ಯಾಜ್ಯಗಳ ಸೂಕ್ತ ವಿಲೇವಾರಿ ಬಗ್ಗೆ ವಿವಿಧ ಯೋಜನೆಗಳನ್ನು ರೂಪಿಸಲು ನೀಡಬೇಕಿದೆ ಎಂದಿ ದ್ದಾರೆ. ಸಮರ್ಪಕ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ರೂಪಿ ಸದೇ ಕೇವಲ ಪ್ಲಾಸ್ಟಿಕ್‌ ನಿಷೇಧ ಮಾಡಿದರೆ, ಅದು ಮಾಧ್ಯಮಗಳಲ್ಲಿ ಸುದ್ದಿಯಾಗುವುದು ಬಿಟ್ಟರೆ ಮತ್ಯಾವ ಸಾಧನೆಯೂ ಆಗಲಾರದು ಎಂದಿದ್ದಾರೆ.

ಪ್ರಧಾನಿ ಮೋದಿ, “ಓಂ’ ಮತ್ತು “ಗೋವು’ ಶಬ್ದಗಳನ್ನು ಉಲ್ಲೇಖೀಸಿ ವಿಪಕ್ಷಗಳನ್ನು ಟೀಕಿಸಿದ್ದಾರೆ. ಇದರ ಬದಲಿಗೆ ಪ್ರಧಾನಿ ಮೋದಿ ಅವರು ಕುಸಿಯುತ್ತಿರುವ ಆರ್ಥಿಕತೆ ಬಗ್ಗೆ ಹಾಗೂ ಗೋವಿನ ಹೆಸರಲ್ಲಿ ನಡೆಯುತ್ತಿರುವ ಹತ್ಯೆಗಳ ಬಗ್ಗೆ ಮಾತನಾಡಬೇಕಿತ್ತಲ್ಲವೇ?
ಅಭಿಷೇಕ್‌ ಮನು ಸಿಂಫ್ವಿ, ಕಾಂಗ್ರೆಸ್‌ ನಾಯಕ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ