- Thursday 12 Dec 2019
ಶಸ್ತ್ರಸಜ್ಜಿತ ಡ್ರೋನ್ ಸಮುಚ್ಛಯ ಅಭಿವೃದ್ಧಿ
ಬೆಂಗಳೂರಿನ ಸ್ಟಾರ್ಟಪ್‌ನಿಂದ ಯೋಜನೆ
Team Udayavani, Jul 13, 2019, 6:00 AM IST
ನವದೆಹಲಿ: ಮುಂದಿನ ಹತ್ತು ವರ್ಷಗಳಲ್ಲಿ ಒಂದಷ್ಟು ಡ್ರೋನ್‌ಗಳು ಜೇನು ನೊಣಗಳು ಹೋದಂತೆ ಶತ್ರು ದೇಶಕ್ಕೆ ಹಾರಿ ಹೋಗಿ ಬಾಲಕೋಟ್ ದಾಳಿ ರೀತಿಯಲ್ಲೇ ಉಗ್ರ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿ ಬರುವಂಥ ವ್ಯವಸ್ಥೆಯೊಂದರ ಕಲ್ಪನೆ ಬೆಂಗಳೂರಿನಲ್ಲಿ ಚಿಗುರೊಡೆಯುತ್ತಿದೆ.
ಪ್ರತಿಯೊಂದು ಗುಚ್ಛದಲ್ಲೂ ನೂರಾರು ಡ್ರೋನ್‌ಗಳು ಇರಬಹುದು. ಒಂದೊಮ್ಮೆ ಅವುಗಳ ಇರುವಿಕೆ ಶತ್ರುಗಳಿಗೆ ತಿಳಿದು ದಾಳಿ ನಡೆಸಿದರೂ, ಕೆಲವು ಡ್ರೋನ್‌ಗಳು ದಾಳಿಗೆ ತುತ್ತಾಗಬಹುದು. ಆದರೆ ಉಳಿದವುಗಳು
ಯಶಸ್ವಿಯಾಗಿ ತಮ್ಮ ಕೆಲಸ ಮುಗಿಸುತ್ತವೆ. ಇಂಥದ್ದೊಂದು ವಿಶಿಷ್ಟ ಕಲ್ಪನೆಯನ್ನು ವಾಸ್ತವಗೊಳಿಸಲು ಎಚ್ಎಎಲ್ ಮತ್ತು ಬೆಂಗಳೂರಿನ ಸ್ಟಾರ್ಟಪ್ ನ್ಯೂಸ್ಪೇಸ್ ರಿಸರ್ಚ್ ಆ್ಯಂಡ್ ಟೆಕ್ನಾಲಜೀಸ್ ಜೊತೆಯಾಗಿವೆ. ಅದಕ್ಕೆ ‘ಸ್ವಾರ್ಮ್ ಡ್ರೋನ್’ ಎಂದು ಕರೆಯಲಾಗುತ್ತಿದೆ. ಜತೆಗೆ ‘ಆಲ್ಫಾ ‘ಎಂಬ ಹೆಸರನ್ನೂ ನೀಡಲಾಗಿದೆ. ಈ ಬಗ್ಗೆ ಮೂಲಗಳನ್ನು ಉಲ್ಲೇಖೀಸಿ ‘ಎಡಿಟಿವಿ’ ವರದಿ ಮಾಡಿದೆ.
ಇದರಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ಇತರ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲಾಗುತ್ತದೆ. ಪ್ರತಿಯೊಂದು ಡ್ರೋನ್ ಅನ್ನೂ ನೆಟ್ವರ್ಕ್ ಮೂಲಕ ಸಂಪರ್ಕಿಸಲಾಗಿರುತ್ತದೆ. ಹೀಗಾಗಿ ಇವು ನಿಗದಿತ ಅಂತರದಲ್ಲಿ ಹಾರಾಡುತ್ತವೆ. ಅವುಗಳು ಪ್ರತಿ ಗಂಟೆಗೆ 100 ಕಿ.ಮೀ ವೇಗದಲ್ಲಿ ಹಾರಾಡಬಲ್ಲವು ಮತ್ತು ಕೆಲವು ಗಂಟೆಗಳವರೆಗೆ ಹಾರಾಟ ನಡೆಸುವಷ್ಟು ಬ್ಯಾಟರಿ ಸಾಮರ್ಥ್ಯ ಹೊಂದಿರುತ್ತವೆ. ವಾಯುಪಡೆ ವಿಮಾನದ ರೆಕ್ಕೆಗಳಲ್ಲಿ ಅಳವಡಿಸಿ ನಿಗದಿತ ಎತ್ತರಕ್ಕೆ ತೆಗೆದುಕೊಂಡು ಹೋಗಿ ಈ ಡ್ರೋನ್‌ಗಳನ್ನು ಬಿಡುಗಡೆ ಮಾಡಿದರೆ, ಅಲ್ಲಿಂದ ಇವು ಗುರಿಯ ಕಡೆಗೆ ಸಾಗಬಲ್ಲವು.
ಸದ್ಯ ಇದು ಕಲ್ಪನೆಯ ರೂಪದಲ್ಲಿದ್ದು, ಇನ್ನು ಕೆಲವು ವರ್ಷಗಳಲ್ಲಿ ಇದಕ್ಕೆ ಸ್ಪಷ್ಟ ರೂಪ ಸಿಗಲಿದ್ದು, ಮುಂದಿನ ಹತ್ತು ವರ್ಷಗಳಲ್ಲಿ ಸೇನೆ ಬಳಕೆಗೆ ಸಿಗಲಿದೆ ಎನ್ನಲಾಗಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ಇದರ ಪ್ರಯೋಗ ಭಾರತದಲ್ಲಿ ನಡೆದರೂ ಅಚ್ಚರಿಯಿಲ್ಲ.
ಈ ವಿಭಾಗದಿಂದ ಇನ್ನಷ್ಟು
-
ಮುಂಬಯಿ: ದೇಶಾದ್ಯಂತ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲೇ ವಾಣಿಜ್ಯ ರಾಜಧಾನಿ ಮುಂಬಯಿಯಲ್ಲಿ ಇದಕ್ಕೆ ವ್ಯತಿರಿಕ್ತವಾಗಿರುವ...
-
ನವದೆಹಲಿ: ದೇಶದ ಜನತೆಯನ್ನು ಬೆಚ್ಚಿ ಬೀಳಿಸಿದ್ದ ನಿರ್ಭಯಾ ಅತ್ಯಾಚಾರಿ ಆರೋಪಿಗಳನ್ನು ಡಿಸೆಂಬರ್ 16ರಂದು ನೇಣುಗಂಬಕ್ಕೆ ಏರಿಸುವ ಸಾಧ್ಯತೆ ಇದೆ ಎಂದು ಸರ್ಕಾರದ...
-
ನವದೆಹಲಿ:ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂವಿವಾದ ಪ್ರಕರಣದ ಸಂಬಂಧ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಎಲ್ಲಾ ಹದಿನೆಂಟು ಮರುಪರಿಶೀಲನಾ...
-
ನವದೆಹಲಿ: ಉನ್ನಾವ್ ಹಾಗೂ ಹೈದರಾಬಾದ್ ಪಶುವೈದ್ಯೆಯ ಮೇಲಿನ ಅತ್ಯಾಚಾರ, ಕೊಲೆ ಘಟನೆಗೆ ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಇದೀಗ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ...
-
ಗುವಾಹಟಿ/ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರಗೊಂಡ ಹಿನ್ನೆಲೆಯಲ್ಲಿ ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯದಲ್ಲಿ...
ಹೊಸ ಸೇರ್ಪಡೆ
-
ರವಿ ಶರ್ಮಾ ಮಾನ್ವಿ: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ನಾಮಕಾವಾಸ್ತೆ ಎಂಬಂತಾಗಿದ್ದು, ಇಲ್ಲಿ ಯಾವುದೇ ಕೃಷಿ ಉತ್ಪನ್ನಗಳ ಮಾರಾಟ-ಖರೀದಿ ಪ್ರಕ್ರಿಯೆ ನಡೆಯುತ್ತಿಲ್ಲ....
-
ಕಲಬುರಗಿ: ಬರುವ ಫೆಬ್ರವರಿ 5ರಿಂದ ಮೂರು ದಿನಗಳ ಕಾಲ ನಡೆಯುವ ಅಖಿಲ ಭಾರತ 85ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ರಚಿಸಲಾಗಿದೆ. ಉಪಮುಖ್ಯಮಂತ್ರಿ ಹಾಗೂ...
-
ಮುದ್ದೇಬಿಹಾಳ: ಪಟ್ಟಣದ ವಿದ್ಯಾನಗರದಲ್ಲಿನ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಹತ್ತಿರ ಇರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ...
-
ಬಸವಕಲ್ಯಾಣ: ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಕೈಗೊಂಡಿರುವ ಕಾಮಗಾರಿಗಳು ಶೀಘ್ರ ಮುಗಿಸಬೇಕು ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗಾಗಿ...
-
ಕಲಬುರಗಿ: ಜಿಲ್ಲೆಯಲ್ಲಿ ಡೆಂಘೀ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿಗಳ ಜೊತೆಗೆ ಅಂಗನವಾಡಿ ಮತು ಆಶಾ ಕಾರ್ಯಕರ್ತೆಯರನ್ನು ಸಮರ್ಪಕವಾಗಿ ಬಳಸಿಕೊಂಡು...