ಮೊಬೈಲ್ ನಲ್ಲಿ ಮಾತಾಡುತ್ತ ಜೋಡಿ ಹಾವುಗಳ ಮೇಲೆ ಕುಳಿತು ಪ್ರಾಣಕಳೆದುಕೊಂಡ ಮಹಿಳೆ!

Team Udayavani, Sep 12, 2019, 12:17 PM IST

ಗೋರಖ್ ಪುರ್: ಮೊಬೈಲ್ ನಲ್ಲಿ ಮಾತನಾಡುವುದರಲ್ಲಿಯೇ ತಲ್ಲೀನರಾಗಿದ್ದ ಮಹಿಳೆಯೊಬ್ಬರು ಜೋಡಿ ಹಾವುಗಳ ಮೇಲೆ ಕುಳಿತುಕೊಂಡ ಪರಿಣಾಮ ಗಾಬರಿಬಿದ್ದ ಹಾವು ಕಚ್ಚಿದ್ದು, ಕೆಲವೇ ಹೊತ್ತಿನಲ್ಲಿ ಮಹಿಳೆ ಪ್ರಾಣಕಳೆದುಕೊಂಡ ಘಟನೆ ಗೋರಖ್ ಪುರದ ರಿಯಾನ್ವ ಗ್ರಾಮದಲ್ಲಿ ನಡೆದಿದೆ.

ಥಾಯ್ ಲ್ಯಾಂಡ್ ನಲ್ಲಿರುವ ಪತಿ ಜೈ ಸಿಂಗ್ ಯಾದವ್ ಜತೆ ಪತ್ನಿ ಗೀತಾ ಮೊಬೈಲ್ ನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಎರಡು ಹಾವುಗಳು ಮನೆಯೊಳಗೆ ಬಂದಿದ್ದು, ಬೆಡ್ ಮೇಲೆ ಠಿಕಾಣಿ ಹೂಡಿದ್ದವು.

ಮೊಬೈಲ್ ನಲ್ಲಿ ಮಾತನಾಡುತ್ತ ಕೋಣೆಯೊಳಗೆ ಅಡ್ಡಾಡುತ್ತಿದ್ದ ಗೀತಾ, ಮಿಲನ ಕ್ರಿಯೆಯಲ್ಲಿ ತೊಡಗಿದ್ದ ಹಾವುಗಳನ್ನು ಗಮನಿಸದೇ ಬೆಡ್ ಮೇಲೆ ಕುಳಿತುಬಿಟ್ಟಿದ್ದರು. ಆಗ ಹಾವುಗಳು ಕಚ್ಚಿದ್ದ ಪರಿಣಾಮ ಆಕೆ ಕೆಲವೇ ನಿಮಿಷಗಳಲ್ಲಿ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.

ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಅಷ್ಟರಲ್ಲಿಯೇ ಗೀತಾ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದರು. ಮನೆಯವರು ಮತ್ತು ಸ್ಥಳೀಯರು ಮನೆಯೊಳಗೆ ಶೋಧ ನಡೆಸಿದಾಗ ಎರಡು ಹಾವುಗಳು ಪತ್ತೆಯಾಗಿದ್ದು, ಆಕ್ರೋಶಿತಗೊಂಡ ಸ್ಥಳೀಯರು ಹಾವುಗಳನ್ನು ಹೊಡೆದು ಕೊಂದು ಹಾಕಿರುವುದಾಗಿ ವರದಿ ವಿವರಿಸಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ