ಭೀಕರ ಅಪಘಾತ: ಗರ್ಭಿಣಿಯ ಬೆನ್ನ ಹಿಂದೆಯೇ ಇತ್ತು ಯಮರೂಪಿ ಲಾರಿ!watch

Team Udayavani, Feb 9, 2019, 9:38 AM IST

ಚೆನ್ನೈ:  ಬಸ್ ಅನ್ನು ಹತ್ತಲು ಮುಂದಾಗುತ್ತಿದ್ದ ಗರ್ಭಿಣಿ ಮಹಿಳೆಗೆ ಹಿಂದಿನಿಂದ ಬಂದ ಲಾರಿಯೊಂದು ಗುದ್ದಿದ್ದರಿಂದ ಬಸ್ ಮತ್ತು ಲಾರಿ ಮಧ್ಯೆ ಸಿಲುಕಿ ಗರ್ಭಿಣಿ ಮಹಿಳೆ ಸಾವನ್ನಪ್ಪಿರುವ ದಾರುಣ ಘಟನೆ ತಮಿಳುನಾಡಿನ ಕಾಂಚಿಪುರಂ ಜಿಲ್ಲೆಯಲ್ಲಿ ಸಂಭವಿಸಿದೆ. 

ಬಸ್ ನಿಲ್ದಾಣದ ಬಳಿ ಸರ್ಕಾರಿ ಬಸ್ ಬಂದು ನಿಂತಿತ್ತು. ಈ ವೇಳೆ ಗರ್ಭಿಣಿ ಮಹಿಳೆ  ಬಸ್ ಅನ್ನು ಹತ್ತಲು ಮುಂದಾಗಿದ್ದರು. ಆಗ ಹಿಂಬದಿಯಿಂದ ಬಂದ ಲಾರಿ ಮೊದಲಿಗೆ ಬೈಕ್ ಗೆ ಗುದ್ದಿದ್ದು ಬೈಕ್ ಸವಾರ ಲಾರಿ ಕೆಳಗೆ ಬಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ ಗರ್ಭಿಣಿ ಮಹಿಳೆ ಮಾತ್ರ ಬಸ್ ಮತ್ತು ಲಾರಿ ನಡುವೆ ಸಿಲುಕಿದ್ದಾರೆ. ಈ ವೇಳೆ ಅಲ್ಲಿದ್ದ ಜನರು ಲಾರಿಯನ್ನು ಹಿಂದಕ್ಕೆ ತೆಗೆಯುವಂತೆ ಕೂಗಿದ್ದಾರೆ. ಮೊದಲೇ ಗಾಬರಿಗೊಂಡಿದ್ದ ಲಾರಿ ಚಾಲಕ ಕೆಲ ಸೆಕೆಂಡ್ ಗಳ ಕಾಲ ಲಾರಿ ಹಿಂದಕ್ಕೆ ತೆಗೆಯದಿದ್ದರಿಂದ ಉಸಿರುಗಟ್ಟಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

 

ಮೃತ ಪಟ್ಟ ಮಹಿಳೆಯನ್ನು  ಸೋಫಿಯಾ ರಾಬಿನ್( 28)  ಎಂದು ಗುರುತಿಸಲಾಗಿದ್ದು,  ಈಕೆ ಚೆಂಗಂಪೇಟೆಯ ಬಾಲಾಶ್ರಮದಲ್ಲಿ ಟೀಚರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ಈ ಭೀಕರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ