ಷೇರಿನ ಮೇಲೆ ತೆರಿಗೆ ಎ.1ರಿಂದ
Team Udayavani, Feb 6, 2018, 8:40 AM IST
ಹೊಸದಿಲ್ಲಿ: ಷೇರುಗಳಲ್ಲಿ ದೀರ್ಘಕಾಲೀನ ಹೂಡಿಕೆಯಿಂದ ಗಳಿಸುವ ಲಾಭದ ಮೇಲೆ (ಎಲ್‌ಟಿಸಿಜಿ) ವಿಧಿಸುವ ತೆರಿಗೆಯು ಏ.1ರಿಂದ ಅನ್ವಯವಾಗಲಿದೆ. ಈ ಬಗ್ಗೆ ಸರಕಾರ ವಿವರಣೆ ನೀಡಿದ್ದು, ಏ.1ರ ನಂತರ ಮಾರಾಟ ಮಾಡಿದ ಷೇರುಗಳಿಗೆ ಮಾತ್ರವೇ ಇದು ಅನ್ವಯಿಸುತ್ತದೆ ಎಂದಿದೆ. ಅಲ್ಲದೆ ಫೆಬ್ರವರಿ 1ರಿಂದ ಮಾರ್ಚ್ 31ರ ಮಧ್ಯೆ ಖರೀದಿ ಅಥವಾ ಮಾರಾಟ ಮಾಡಿದ ಷೇರುಗಳಿಂದ ಗಳಿಸಿದ ಲಾಭದ ಮೇಲಿನ ತೆರಿಗೆಗೆ ವಿನಾಯಿತಿ ಇದೆ ಎಂದು ವಿವರಣೆಯಲ್ಲಿ ತಿಳಿಸಲಾಗಿದೆ.
ಜಾಗತಿಕ ಮಾರುಕಟ್ಟೆಯೇ ಕಾರಣ: ಇದೇ ವೇಳೆ, ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ ಉಂಟಾಗಲು ಜಾಗತಿಕ ಮಾರುಕಟ್ಟೆಯಲ್ಲಿನ ಹಿನ್ನಡೆ ಕಾರಣವೇ ಹೊರತು, ಸರಕಾರ ಎಲ್‌ಟಿಸಿಜಿ ವಿಧಿಸಿದ್ದು ಕಾರಣವಲ್ಲ ಎಂದು ಹಣಕಾಸು ಕಾರ್ಯದರ್ಶಿ ಹಸು¾ಖ್ ಅಧಿಯಾ ಹೇಳಿದ್ದಾರೆ. ಈಗಾಗಲೇ ಅಲ್ಪಾವಧಿ ಹೂಡಿಕೆಯ ಮೇಲೆ ಶೇ. 15ರಷ್ಟು ತೆರಿಗೆ ಇದ್ದು, ಇದೀಗ ದೀರ್ಘಾವಧಿ ಹೂಡಿಕೆಯಿಂದ ಗಳಿಸಿದ ಲಾಭದ ಮೇಲೂ ತೆರಿಗೆ ವಿಧಿಸಲಾಗಿದೆ. ಬಜೆಟ್‌ನಲ್ಲಿ ಈ ನಿರ್ಧಾರ ಘೋಷಿಸಿದ ಬಳಿಕ ಮಾರುಕಟ್ಟೆ ಕುಸಿತ ಕಂಡಿದೆ.
ತೆರಿಗೆ ಪಾವತಿಯಲ್ಲಿ ಅಸಮಾನತೆ: ನೌಕರ ವರ್ಗ ಮತ್ತು ಉದ್ಯಮಿಗಳು ಪಾವತಿ ಮಾಡುವ ತೆರಿಗೆಯಲ್ಲಿ ಅಸಮಾನತೆಯಿದೆ. ರಿಟರ್ನ್Õ ಸಲ್ಲಿಸುವಂಥ 7 ಲಕ್ಷ ಕಂಪೆನಿಗಳ ಪೈಕಿ ಶೇ. 50ರಷ್ಟು ನಷ್ಟ ತೋರಿಸುತ್ತವೆ . ಇಂತಹ ಸಮಸ್ಯೆಯನ್ನು ನೀಗಿಸಲು ಸರಕಾರ ತಾಂತ್ರಿಕ ವ್ಯವಸ್ಥೆಯನ್ನು ಇನ್ನಷ್ಟು ಸುಸ್ಥಿರಗೊಳಿಸಬೇಕಿದೆ ಎಂದು ಅಧಿಯಾ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chandigarh: ಪುತ್ರನ ಬೆನ್ನಲ್ಲೇ ಪುತ್ರಿ ಜತೆಗೆ ಸಾವಿತ್ರಿ ಜಿಂದಾಲ್ ಬಿಜೆಪಿಗೆ
Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!
RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
ಬಿಲ್ ಗೇಟ್ಸ್ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ
MUST WATCH
ಹೊಸ ಸೇರ್ಪಡೆ
Chandigarh: ಪುತ್ರನ ಬೆನ್ನಲ್ಲೇ ಪುತ್ರಿ ಜತೆಗೆ ಸಾವಿತ್ರಿ ಜಿಂದಾಲ್ ಬಿಜೆಪಿಗೆ
Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ
Kalaburagi; ಶೋಕಿಗಾಗಿ ನಕಲಿ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು
ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ
Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!