ಶೀಘ್ರ ಬದಲಾಗಲಿದೆ ತೆರಿಗೆ ನೀತಿ

ನೇರ ತೆರಿಗೆ ನೀತಿ ಕುರಿತ ವರದಿ ಸಲ್ಲಿಸಿದ ಸಮಿತಿ

Team Udayavani, Aug 20, 2019, 5:00 AM IST

ಹೊಸದಿಲ್ಲಿ: 50 ವರ್ಷಗಳ ಹಳೆಯ ಆದಾಯ ತೆರಿಗೆ ಕಾನೂನಿಗೆ ನರೇಂದ್ರ ಮೋದಿ ಸರಕಾರ ಬದಲಾವಣೆ ತರಲಿದೆ. ಸಾರ್ವ  ಜನಿಕರಿಗೆ ಆದಾಯ ತೆರಿಗೆ ಪಾವತಿ ಮಾಡು ವುದನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಈ ಮಹತ್ವದ ಬದಲಾವಣೆ ಇರಲಿದೆ. ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿ ಡಿಟಿ) ಸದಸ್ಯ ಅಖೀಲೇಶ್‌ ರಂಜನ್‌ ಅವರ ನೇತೃತ್ವದ ಕಾರ್ಯಪಡೆ ಈಗಾಗಲೇ ನೇರ ತೆರಿಗೆ ನೀತಿ ವರದಿಯನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಸೋಮವಾರ ಸಲ್ಲಿಸಿದೆ.

ಈ ಸಮಿತಿಯ ವರದಿಯನ್ನು ಜಾರಿಗೊಳಿಸಿ ದರೆ 1961ರಿಂದ ಜಾರಿಯಲ್ಲಿರುವ ಆದಾಯ ತೆರಿಗೆ ಕಾಯ್ದೆ ಮರೆಗೆ ಸರಿಯಲಿದೆ. ಮೋದಿ ಸರಕಾರದ ಹಿಂದಿನ ಅವಧಿಯಲ್ಲಿ ಅರುಣ್‌ ಜೇಟಿÉ ವಿತ್ತ ಸಚಿವರಾಗಿದ್ದಾಗ 2017 ನವೆಂ ಬರ್‌ನಲ್ಲಿ ಈ ಕಾರ್ಯಪಡೆಯನ್ನು ರಚನೆ ಮಾಡ ಲಾಗಿತ್ತು. 2019 ಮೇ 31ಕ್ಕೆ ಈ ಸಮಿತಿ ಅಂತಿಮ ವರದಿ ನೀಡಬೇಕಿತ್ತಾದರೂ, ಅವಧಿ ವಿಸ್ತರಣೆಯ ಅನಂತರ ಸೋಮವಾರ ವರದಿ ಸಲ್ಲಿಕೆಯಾಗಿದೆ. ಸಮಿತಿಯಲ್ಲಿ ಚಾರ್ಟರ್ಡ್‌ ಅಕೌಂಟೆಂಟ್‌ ಗಿರೀಶ್‌ ಅಹುಜಾ, ಇವೈ ಮುಖ್ಯಸ್ಥ ರಾಜೀವ್‌ ಮೆಮಾನಿ, ತೆರಿಗೆ ವಕೀಲ ಮುಖೇಶ್‌ ಪಟೇಲ್‌, ಐಸಿಆರ್‌ಐಇಆರ್‌ ಸಲಹೆಗಾರ ಮನ್ಸಿ ಕೆದಿಯಾ ಹಾಗೂ ನಿವೃತ್ತ ಐಆರ್‌ಎಸ್‌ ಅಧಿಕಾರಿ ಜಿ.ಸಿ. ಶ್ರೀವಾಸ್ತವ ಸದಸ್ಯರಾಗಿದ್ದರು.

ಇದರಲ್ಲಿ ಕೇವಲ ನೌಕರರಿಗೆ ತೆರಿಗೆ ಪಾವತಿ ಸುಲಭಗೊಳಿಸುವುದಷ್ಟೇ ಅಲ್ಲ, ರಿಟರ್ನ್ ಸಲ್ಲಿಸುವವರಿಗೂ ಅನುಕೂಲ ಕಲ್ಪಿಸುವ ಸಾಧ್ಯತೆಗಳಿವೆ. ಇದರ ಒಟ್ಟು ಪರಿಣಾಮವಾಗಿ ತೆರಿಗೆ ದಾರರ ಸಂಖ್ಯೆ ಹೆಚ್ಚಳ ಕಾಣುವ ನಿರೀಕ್ಷೆಯಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ