ಟಿಸಿಎಸ್ ಷೇರು ಮರುಖರೀದಿ: 16 ಸಾವಿರ ಕೋಟಿ ಮೌಲ್ಯದ 5.61 ಕೋಟಿ ಷೇರು
Team Udayavani, Feb 21, 2017, 3:45 AM IST
ನವದೆಹಲಿ: ಷೇರು ಮಾರುಕಟ್ಟೆಯಲ್ಲಿನ 16 ಸಾವಿರ ಕೋಟಿ ರೂ. ಮೌಲ್ಯದ ಷೇರುಗಳನ್ನು ಮರುಖರೀದಿಸಲು ಟಿಸಿಎಸ್ (ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್) ಆಡಳಿತ ಮಂಡಳಿ ನಿರ್ಧರಿಸಿದೆ. ತಲಾ 2,850 ರೂ. ದರದಲ್ಲಿ 5.61 ಕೋಟಿ ಷೇರುಗಳನ್ನು ತನ್ನ ಷೇರುದಾರರಿಂದಲೇ ಸಂಸ್ಥೆ ಖರೀದಿಸುತ್ತಿದೆ.
ಆಡಳಿತ ಮಂಡಳಿಯ ಈ ಘೋಷಣೆಯಿಂದ ಇನ್ಫೋಸಿಸ್, ವಿಪ್ರೋ ಸೇರಿದಂತೆ ಹಲವು ಸಂಸ್ಥೆಗಳ ಮೇಲೆ ಒತ್ತಡ ಸೃಷ್ಟಿಯಾಗಿದೆ. ಮರು ಖರೀದಿ ಕುರಿತು ಷೇರುದಾರರೇ ಪ್ರಸ್ತಾಪ ಸಲ್ಲಿಸಿದ್ದರಿಂದ ಟಿಸಿಎಸ್ ಮಂಡಳಿ ಈ ನಿರ್ಧಾರ ಕೈಗೊಂಡಿದೆ. ಟಿಸಿಎಸ್ ಹೀಗೆ ಘೋಷಿಸುತ್ತಿದ್ದಂತೆ, ಮುಂಬೈ ಷೇರು ಮಾರುಕಟ್ಟೆಯಲ್ಲಿ ಸಂಸ್ಥೆಯ ಷೇರುಗಳ ಮೌಲ್ಯ ಶೇಕಡಾ 4ರಷ್ಟು ಹೆಚ್ಚಳ ಕಂಡಿದ್ದು, 2,506 ರೂಪಾಯಿ ಏರಿಕೆ ಕಂಡಿದೆ. ಇನ್ಫೋಸಿಸ್ನ ಮಾಜಿ ಉನ್ನತಾಧಿಕಾರಿಗಳಾದ ವಿ. ಬಾಲಕೃಷ್ಣನ್ ಮತ್ತ ಮೋಹನದಾಸ್ ಪೈ ಅವರು ಷೇರು ಮರುಖರೀದಿಗೆ ಸಲಹೆ ನೀಡಿದ್ದರು ಎನ್ನಲಾಗಿದೆ.
ಮಿಸಿŒ ಸ್ಥಾನಕ್ಕೆ ಚಂದ್ರ: ಟಾಟಾ ಸಮೂಹಕ್ಕೆ ಹೊಸ ಅಧ್ಯಕ್ಷರಾಗಿ ಎನ್. ಚಂದ್ರಶೇಖರನ್ ಮಂಗಳವಾರ ಅಧಿಕಾರ ಸ್ವೀಕರಿಸಲಿದ್ದಾರೆ. ಸೈರಸ್ ಮಿಸಿŒ ಅವರು ಟಾಟಾ ಸಮೂಹದಿಂದ ಹೊರ ನಡೆದಿದ್ದರಿಂದ ಆ ಸ್ಥಾನಕ್ಕೆ ಚಂದ್ರಶೇಖರನ್ ಅವರನ್ನು ನೇಮಿಸಲಾಗಿದೆ. 150 ವರ್ಷದ ಬಳಿಕ ಟಾಟಾ ಸಂಸ್ಥೆಗೆ ಪಾರ್ಸಿಯೇತರ ಅಧ್ಯಕ್ಷರನ್ನು ಆರಿಸಿದಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
MUST WATCH
ಹೊಸ ಸೇರ್ಪಡೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್