ಕಚೇರಿಗೆ ನುಗ್ಗಿ ತಹಶೀಲ್ದಾರನ್ನು ಸುಟ್ಟುಹಾಕಿದ ದುಷ್ಕರ್ಮಿ!

ತೆಲಂಗಾಣದಲ್ಲಿ ಮಹಿಳಾ ತಹಶೀಲ್ದಾರ್‌ ಸಜೀವ ದಹನ

Team Udayavani, Nov 4, 2019, 7:54 PM IST

ಹೈದರಾಬಾದ್‌: ಹಾಡಹಗಲೇ ಸರ್ಕಾರಿ ಕಚೇರಿಗೆ ನುಗ್ಗಿ ಮಹಿಳಾ ತಹಶೀಲ್ದಾರ್‌ವೊಬ್ಬರನ್ನು ಬೆಂಕಿ ಹಚ್ಚಿ ಸುಟ್ಟು ಹತ್ಯೆಗೈದಿರುವ ಭೀಭತ್ಸ ಕೃತ್ಯ ತೆಲಂಗಾಣದಲ್ಲಿ ನಡೆದಿದೆ. ತಾಲೂಕು ದಂಡಾಧಿಕಾರಿ ವಿಜಯಾ ರೆಡ್ಡಿ (30) ಸಜೀವ ದಹನವಾದವರು.

ಅಬ್ದುಲ್ಲಾಪುರಮೆಟ್‌ ಸಮೀಪದ ಕಚೇರಿಯಲ್ಲಿ ಸೋಮವಾರ ವಿಜಯಾ ರೆಡ್ಡಿ ಒಬ್ಬರೇ ಇದ್ದರು. ಜಮೀನು ವಿವಾದ ಸಂಬಂಧ ವ್ಯಕ್ತಿಯೊಬ್ಬ ಮಧ್ಯಾಹ್ನ 1.30ಕ್ಕೆ ಕಚೇರಿ ಪ್ರವೇಶಿಸಿ, ಮಾತಿಗಿಳಿದಿದ್ದ. ಸುಮಾರು 20 ನಿಮಿಷಗಳ ಕಾಲ ಕಚೇರಿಯೊಳಗೆ ತಹಶೀಲ್ದಾರ್‌ ಜತೆ ಮಾತುಕತೆ ನಡೆಸುತ್ತಿದ್ದ ಆತ, ನಂತರ ಏಕಾಏಕಿ ಅವರ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಭೀಕರವಾಗಿ ಕೊಲೆಗೈದಿದ್ದಾನೆ. ಈ ವೇಳೆ ರಕ್ಷಣೆಗೆ ಧಾವಿಸಿದ ಇಬ್ಬರು ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ.

ಕೃತ್ಯ ಎಸಗಿದ ದುಷ್ಕರ್ಮಿ ಕೂಡ ಗಾಯಗೊಂಡಿದ್ದು, ದೇಹದ ಶೇ.50 ಭಾಗಗಳು ಸುಟ್ಟುಹೋಗಿವೆ. ಈತನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.
ಕಚೇರಿಯಲ್ಲೇ ಅಧಿಕಾರಿಯೊಬ್ಬರನ್ನು ಈ ರೀತಿ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಭೀಕರವಾಗಿ ಕೊಲೆಗೈದಿರುವುದು ರಾಜ್ಯದಲ್ಲಿ ಇದೇ ಮೊದಲ ಪ್ರಕರಣವಾಗಿದ್ದು, ರಾಜ್ಯದ ಜನತೆಯನ್ನು ಬೆಚ್ಚಿಬೀಳಿಸಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ