ಟ್ರಂಪ್ ಗೆ ಕೋವಿಡ್ : ದೇವರಂತೆ ಆರಾಧಿಸುತ್ತಿದ್ದ ತೆಲಂಗಾಣದ ಅಭಿಮಾನಿ ಹೃದಯಾಘಾತದಿಂದ ಸಾವು
Team Udayavani, Oct 11, 2020, 10:01 PM IST
ನವದೆಹಲಿ : ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ದೇವರಂತೆ ಪೂಜಿಸುತ್ತಿದ್ದ ತೆಲಂಗಾಣ ಮೂಲದ ವ್ಯಕ್ತಿಯೊಬ್ಬರು ಟ್ರಂಪ್ ಕೋವಿಡ್ ವಿಷಯ ತಿಳಿದು ಆಘಾತದಿಂದ ಹೃದಯಘಾತವಾಗಿ ಮೃತಪಟ್ಟ ಘಟನೆ ತೆಲಂಗಾಣದ ಮೇಡಕ್ ಜಿಲ್ಲೆಯ ತೂಪ್ರನ್ ಪ್ರದೇಶದಲ್ಲಿ ನಡೆದಿದೆ.
ಸ್ನೇಹ ವಲಯ ಹೇಳುವ ಪ್ರಕಾರ ಮೃತ ಬುಸ್ಸಾ ಕೃಷ್ಣ ಡೊನಾಲ್ಟ್ ಟ್ರಂಪ್ ಅವರ ಅಪ್ಪಟ ಅಭಿಮಾನಿಯಾಗಿದ್ದರು. ಟ್ರಂಪ್ ರನ್ನು ದೇವರಂತೆ ಆರಾಧಿಸಿ ಪೂಜೆ ಸಲ್ಲಿಸುತ್ತಿದ್ದರು.ಟ್ರಂಪ್ ರನ್ನು ಆರಾಧಿಸಲು ಕೃಷ್ಣ ಕಳೆದ ವರ್ಷ ತೆಲಂಗಾಣದ ಜನಗಾಂವ್ ಜಿಲ್ಲೆಯ ಬಚನ್ನಪೇಟೆ ಬ್ಲಾಕ್‌ನಲ್ಲಿರುವ ಕೊನ್ನೆ ಗ್ರಾಮದಲ್ಲಿರುವ ತಮ್ಮ ನಿವಾಸದಲ್ಲಿ 6 ಅಡಿ ಎತ್ತರದ ಟ್ರಂಪ್ ರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸುವುದು ಮಾತ್ರವಲ್ಲದೆ ಪ್ರತಿ ಶುಕ್ರವಾರ ಟ್ರಂಪ್ ಅವರ ದೀರ್ಘಾ ಆಯಷ್ಯಕ್ಕಾಗಿ ಉಪವಾಸ ಇರುತ್ತಿದ್ದರು..
ಕೃಷ್ಣ ಟ್ರಂಪ್ ಅವರ ಭಾವಚಿತ್ರವನ್ನು ಕುತ್ತಿಗೆಯಲ್ಲಿ ಹಾಕಿರುತ್ತಿದ್ದರು. ಎಲ್ಲಿ ಹೋದರು ಟ್ರಂಪ್ ಅವರ ಚಿತ್ರವನ್ನು ತೆಗೆದುಕೊಂಡು ಹೋಗುತ್ತಿದ್ದರಂತೆ. ಕೃಷ್ಣ ಅವರ ಕುಟುಂಬದವರು ಹೇಳುವ ಪ್ರಕಾರ ಡೊನಾಲ್ಟ್ ಟ್ರಂಪ್ ಕೋವಿಡ್ ಸೋಂಕು ಪತ್ತೆಯಾದ ದಿನದಿಂದ ಕೃಷ್ಣ ಸರಿಯಾಗಿ ಊಟ ,ನೀರು ಸೇವಿಸದೆ ಟ್ರಂಪ್ ಗುಣಮುಖಕ್ಕೆ ಪ್ರಾರ್ಥನೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ.
ಟ್ರಂಪ್ ಕೋವಿಡ್ ಸೋಂಕಿನ ವಿಷಯ ತಿಳಿದು ದುಃಖದಿಂದ ಇದ್ದ 38 ವರ್ಷದ ಕೃಷ್ಣ ಸಂಬಂಧಿಕರ ಮನೆಯಲ್ಲಿ ಚಹಾ ಕುಡಿಯುವ ವೇಳೆಯಲ್ಲಿ ಕುಸಿದು ಬಿದ್ದಿದ್ದಾರೆ.ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಆದಾಗಲೇ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಟ್ರಂಪ್ ಭಾರತ ಭೇಟಿಯ ವೇಳೆಗೆ ಕೇಂದ್ರ ಸರ್ಕಾರಕ್ಕೆ ಅವರೊಂದಿಗೆ ಸಭೆಯನ್ನು ಏರ್ಪಡಿಸಲು ಮನವಿಯನ್ನು ಕೃಷ್ಣ ಮಾಡಿಕೊಂಡಿದ್ದರು. ಗ್ರಾಮದಲ್ಲಿ ಅವರನ್ನು ಟ್ರಂಪ್ ಕೃಷ್ಣ ಎಂದು ಕರೆಯಲಾಗುತ್ತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ತಾಜ್ ಮಹಲ್ ಅಡಿಯಲ್ಲಿ ಪ್ರಧಾನಿಯ ಡಿಗ್ರಿ ಹುಡುಕುತ್ತಿದ್ದಾರೆ: ಓವೈಸಿ ವ್ಯಂಗ್ಯ
ಕೇದಾರನಾಥದ ಕಸದ ರಾಶಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ
ವಿಜ್ಞಾನ ವಿಸ್ಮಯ: 40 ದಿನದ ಮಗುವಿನ ಹೊಟ್ಟೆಯೊಳಗೆ ಭ್ರೂಣ ಬೆಳವಣಿಗೆ !!
ಪಾಕ್ ಗಡಿಯಲ್ಲಿ ಬಾಂಬ್, ಗ್ರೆನೇಡ್ಗಳಿದ್ದ ಡ್ರೋನ್ ಹೊಡೆದುರುಳಿಸಿದ ಸೇನೆ
ಮೋಜಿಗಾಗಿ ವಿದ್ವಂಸಕ ಕೃತ್ಯ: ಎಸಿ ಲೋಕಲ್ ರೈಲುಗಳಿಗೆ ಕಲ್ಲು ತೂರಾಟ!