ಕೋವಿಡ್ 19: ಉತ್ತರಪ್ರದೇಶದಲ್ಲಿ ದೇವಸ್ಥಾನಗಳ ಬಂದ್ ಮುಂದುವರಿಕೆ; ಭಕ್ತರಿಗೆ ನಿರಾಸೆ
ಕಾನ್ಪುರದಲ್ಲಿ ಕಳೆದ 186 ದಿನಗಳಿಂದ ದೇವಸ್ಥಾನಗಳು ಮುಚ್ಚಿರುವುದಾಗಿ ವರದಿ ವಿವರಿಸಿದೆ.
Team Udayavani, Sep 21, 2020, 12:42 PM IST
ಕಾನ್ಪುರ್: ಕೋವಿಡ್ 19 ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವುದರಿಂದ ಉತ್ತರಪ್ರದೇಶದಲ್ಲಿ ಅನ್ ಲಾಕ್ 4ನೇ ಹಂತದಲ್ಲಿ ದೇವಸ್ಥಾನಗಳ ಬಂದ್ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇವಸ್ಥಾನಗಳು ತೆರೆಯಲಿದೆ ಎಂಬ ನಿರೀಕ್ಷೆಯಲ್ಲಿದ್ದ ಭಕ್ತರಿಗೆ ಹಾಗೂ ಅರ್ಚಕರಿಗೆ ಈ ನಿರ್ಧಾರದಿಂದ ನಿರಾಸೆಯಾಗಿದೆ ಎಂದು ತಿಳಿಸಿದ್ದಾರೆ.
ಅನ್ ಲಾಕ್ 4ರ ನಿಯಮಾವಳಿ ಪ್ರಕಾರ ಸೋಮವಾರದಿಂದ (ಸೆಪ್ಟೆಂಬರ್ 21, 2020) ದೇವಸ್ಥಾನಗಳನ್ನು ತೆರೆಯಲು ಅವಕಾಶ ನೀಡಲಾಗುವುದು ಎಂದು ತಿಳಿಸಿತ್ತು. ಆದರೆ ಕಾನ್ಪುರ್ ಜಿಲ್ಲಾಡಳಿತ ಕೋವಿಡ್ 19 ಸೋಂಕು ಪ್ರಕರಣ ಹೆಚ್ಚಳವಾಗುತ್ತಿದ್ದ ನಿಟ್ಟಿನಲ್ಲಿ ದೇವಸ್ಥಾನ ತೆರೆಯುವ ಬಗ್ಗೆ ಯಾವುದೇ ಹೊಸ ಪ್ರಕಟಣೆ ಹೊರಡಿಸಿಲ್ಲ ಎಂದು ಹೇಳಿದೆ.
ಚೀನಾಪಡೆಗೆ ಮುಖಭಂಗ: ಲಡಾಖ್ ನ 6 ಪ್ರಮುಖ ಪರ್ವತ ಶ್ರೇಣಿ ಭಾರತೀಯ ಸೇನಾಪಡೆ ವಶಕ್ಕೆ
ಸಾರ್ವಜನಿಕರು ಕೋವಿಡ್ 19 ನಿಯಮಾವಳಿ ಸಮರ್ಪಕವಾಗಿ ಪಾಲಿಸದ ಹಿನ್ನೆಲೆಯಲ್ಲಿ ದೇವಸ್ಥಾನಗಳನ್ನು ತೆರೆಯುವ ನಿರ್ಧಾರ ಕೈಗೊಂಡಿಲ್ಲ ಎಂದು ಕಾನ್ಪುರ್ ಜಿಲ್ಲಾಡಳಿತ ತಿಳಿಸಿದೆ. ಭಕ್ತರು ದೇವಸ್ಥಾನದ ಆವರಣದಲ್ಲಿ ಪ್ರಾರ್ಥನೆ ಸಲ್ಲಿಸಬಹುದು. ಕಾನ್ಪುರದಲ್ಲಿ ಕಳೆದ 186 ದಿನಗಳಿಂದ ದೇವಸ್ಥಾನಗಳು ಮುಚ್ಚಿರುವುದಾಗಿ ವರದಿ ವಿವರಿಸಿದೆ.
ರಾಜ್ಯದಲ್ಲಿನ ಶಾಲಾ, ಕಾಲೇಜುಗಳು ಕೂಡಾ ಸೆಪ್ಟೆಂಬರ್ 21ರಿಂದ ಪುನರಾರಂಭವಾಗುವುದಿಲ್ಲ ಎಂದು ಉತ್ತರಪ್ರದೇಶ ಸರ್ಕಾರ ಭಾನುವಾರ ಘೋಷಿಸಿತ್ತು. ಶಾಲಾ, ಕಾಲೇಜು ಬಗ್ಗೆ ಶಿಕ್ಷಣ ಇಲಾಖೆ ಈ ಕ್ರಮ ತೆಗೆದುಕೊಂಡಿರುವುದಾಗಿ ತಿಳಿಸಿದೆ.