ಕರ್ತಾಪುರ್ ಸಾಹೀಬ್ ಗುರುದ್ವಾರ ಸಮೀಪದ ಗಡಿಯಲ್ಲಿ ಉಗ್ರರ ತರಬೇತಿ ಶಿಬಿರ; ಗುಪ್ತಚರ ಇಲಾಖೆ
Team Udayavani, Nov 4, 2019, 3:52 PM IST
ಚಂಡೀಗಢ್: ಕರ್ತಾಪುರ್ ಸಾಹಿಬ್ ಗುರುದ್ವಾರಕ್ಕೆ ತೆರಳಲು ಅನುಕೂಲವಾಗುವ ಕರ್ತಾಪುರ್ ಕಾರಿಡಾರ್ ಯೋಜನೆ ಆರಂಭಗೊಳ್ಳಲು ದಿನಗಣನೆ ನಡೆಯುತ್ತಿದ್ದರೆ, ಮತ್ತೊಂದೆಡೆ ಪಾಕಿಸ್ತಾನ್ ಪಂಜಾಬ್ ಪ್ರಾಂತ್ಯದ ನಾರೋವಾಲ್ ಜಿಲ್ಲೆಯ ಗಡಿಯಲ್ಲಿ ಭಯೋತ್ಪಾದಕರ ತರಬೇತಿ ಚಟುವಟಿಕೆ ನಡೆಯುತ್ತಿರುವುದಾಗಿ ಗುಪ್ತಚರ ಇಲಾಖೆ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಪಾಕಿಸ್ತಾನ ಪಂಜಾಬ್ ಪ್ರಾಂತ್ಯದ ನಾರೋವಾಲ್ ಮತ್ತು ಮುರಿಡಕೆ, ಶಾಕಾರ್ ಗಢ್ ನಲ್ಲಿ ಭಯೋತ್ಪಾದಕರ ತರಬೇತಿ ಶಿಬಿರಗಳು ಇದ್ದು, ಅಲ್ಲಿ ಪುರುಷರು ಮತ್ತು ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಗುಪ್ತಚರ ಇಲಾಖೆ ಮೂಲಗಳು ಹೇಳಿವೆ.
ಕರ್ತಾಪುರ್ ಕಾರಿಡಾರ್ ಉದ್ಘಾಟನೆಗೊಂಡು ಭಾರತೀಯ ಯಾತ್ರಾರ್ಥಿಗಳು ತೆರಳುವ ಒಂದು ವಾರದ ಮುನ್ನವೇ ಗುಪ್ತಚರ ಇಲಾಖೆ ಈ ಎಚ್ಚರಿಕೆಯ ಸಂದೇಶ ರವಾನಿಸಿದೆ. ಭಾರತದ ಪಂಜಾಬ್ ಪ್ರಾಂತ್ಯದ ಗುರುದಾಸ್ ಪುರ್ ಜಿಲ್ಲೆಯ ಮೂಲಕ ಪಾಕಿಸ್ತಾನ ಪಂಜಾಬ್ ಪ್ರಾಂತ್ಯದಲ್ಲಿರುವ ಕರ್ತಾಪುರ್ ಸಾಹೀಬ ಗುರುದ್ವಾರ ಪ್ರದೇಶವನ್ನು ಸಂಪರ್ಕಿಸಲಿದೆ.
ನವೆಂಬರ್ 9ರಂದು ಭಾರತದ ಕಡೆಯಿಂದ ಕರ್ತಾಪುರ್ ಕಾರಿಡಾರ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಅದೇ ದಿನ ಪಾಕಿಸ್ತಾನದ ಕಡೆಯಿಂದ ಯೋಜನೆಯನ್ನು ಪಾಕ್ ಪ್ರಧಾನಿ ಇಮ್ರಾನ್ ಉದ್ಘಾಟಿಸಲಿದ್ದಾರೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ