ಶೋಪಿಯಾನ್‌ನಲ್ಲಿ ಸೇನಾಪಡೆಗಳಿಂದ ಇನ್ನೋರ್ವ ಉಗ್ರನ ಹತ್ಯೆ

ಪುಲ್ವಾಮಾ ದಾಳಿಯ ಬಳಿಕ 41 ಉಗ್ರರು ಫಿನಿಶ್‌

Team Udayavani, May 10, 2019, 9:32 AM IST

ಹೊಸದಿಲ್ಲಿ: ಶೋಪಿಯಾನ್‌ನಲ್ಲಿ ಶುಕ್ರವಾರ ನಸುಕಿನ ವೇಳೆ ಸೇನಾಪಡೆಗಳು ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಉಗ್ರರನೊಬ್ಬನನ್ನು ಹತ್ಯೆಗೈದಿವೆ.

ಹತ್ಯೆಗೀಡಾದ ಉಗ್ರ ಯಾವ ಸಂಘಟನೆಗೆ ಸೇರಿದವನು ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ.

ಉಗ್ರನೊಬ್ಬ ಝಾನ್‌ಪೋರಾ ಪ್ರದೇಶದಲ್ಲಿ ಬುಧವಾರ ಇಬ್ಬರು ಪಿಡಿಪಿ ಕಾರ್ಯಕರ್ತರನ್ನು ಅಪಹರಿಸಿ ಗುಂಡಿಕ್ಕಿ ಗಾಯಗೊಳಿಸಿದ ಬಳಿಕ ಈ ಕಾರ್ಯಾಚರಣೆ ನಡೆಸಲಾಗಿದೆ.

ಮೇ 5 ರಂದು ಸೇನಾಪಡೆಗಳು ಮೂವರು ಉಗ್ರರನ್ನು ಹತ್ಯೆಗೈದಿದ್ದರು.

41 ಉಗ್ರರು ಫಿನಿಶ್‌
ಪುಲ್ವಾಮಾ ಉಗ್ರ ದಾಳಿಯಲ್ಲಿ ಸಿಆರ್‌ಪಿಎಫ್ನ 40 ಯೋಧರನ್ನು ಹತ್ಯೆಗೈದ ಬಳಿಕ ನಡೆಸಿದ ಕಾರ್ಯಾಚರಣೆಗಳಲ್ಲಿ ಇದುವರೆಗೆ ಒಟ್ಟು 41 ಉಗ್ರರನ್ನು ಹತ್ಯೆಗೈಯಲಾಗಿದೆ ಎಂದು ಲೆಫ್ಟಿನೆಂಟ್‌ ಜನರಲ್‌ ಕೆ.ಜೆ.ಎಸ್‌.ಧಿಲ್ಲೊನ್‌ ವಿವರಗಳನ್ನು ನೀಡಿದ್ದಾರೆ.

ಹತ್ಯೆಗೀಡಾ 41 ಉಗ್ರರ ಪೈಕಿ 25 ಮಂದಿ ಜೈಶ್‌ ಇ ಮೊಹಮದ್‌ ಉಗ್ರ ಸಂಘಟನೆಗೆ ಸೇರಿದವರಾಗಿದ್ದು, ಅದರಲ್ಲಿ 13 ಮಂದಿ ಪಾಕ್‌ ಉಗ್ರರು ಎಂದು ತಿಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ