ಸೇನೆಗೆ ಸಿಗಲಿದೆ ಮತ್ತಷ್ಟು ಶಸ್ತ್ರಾಸ್ತ್ರಗಳ ನೆರವು
Team Udayavani, Mar 1, 2018, 7:00 AM IST
ನವದೆಹಲಿ: ಪಾಕಿಸ್ತಾನ ಹಾಗೂ ಚೀನಾದ ಗಡಿಭಾಗಗಳಲ್ಲಿ ಆ ದೇಶಗಳ ಸೈನಿಕರಿಂದ ಹೆಚ್ಚುತ್ತಿರುವ ಉಪಟಳವನ್ನು ಹತ್ತಿಕ್ಕಲು, ಗಡಿ ಕಾಯುವ ಯೋಧರಿಗೆ ಮತ್ತಷ್ಟು ಶಸ್ತ್ರಾಸ್ತ್ರ ಬಲ ಒದಗಿಸಲು ಭಾರತೀಯ ರಕ್ಷಣಾ ಇಲಾಖೆ ಮುಂದಾಗಿದೆ. ಇದರ ಪರಿಣಾಮವಾಗಿ, ಗಡಿ ಕಾಯುವ ಯೋಧರಿಗಾಗಿ 41,000 ಲೈಟ್ ಮೆಷಿನ್ ಗನ್ (ಎಲ್ಎಂಜಿ), 3.5 ಲಕ್ಷಗಳಷ್ಟು ಕ್ಲೋಡ್-ಕ್ವಾರ್ಟರ್ ಕಾರ್ಬೈನ್ಗಳನ್ನು ಖರೀದಿಸುವ 9,435 ಕೋಟಿ ಮೌಲ್ಯದ ಪ್ರಸ್ತಾವನೆಗೆ ರಕ್ಷಣಾ ಇಲಾಖೆಯು ಒಪ್ಪಿಗೆ ನೀಡಿದೆ. ಪ್ರಸ್ತಾವನೆಯಲ್ಲಿರುವ ಶಸ್ತ್ರಾಸ್ತ್ರಗಳಲ್ಲಿ ಶೇ. 75ರಷ್ಟನ್ನು ಖಾಸಗಿ ಸಂಸ್ಥೆಯೊಂದು ಪೂರೈಸಲಿದ್ದು, ಶೇ. 25ರಷ್ಟು ಶಸ್ತ್ರಾಸ್ತ್ರಗಳನ್ನು ಆರ್ಡಿನನ್ಸ್ ಫ್ಯಾಕ್ಟರಿ ಬೋರ್ಡ್ ಒದಗಿಸಲಿದೆ.