ಒಳಗೆ ಒಮ್ಮತ, ಹೊರಗೆ ತಾಪ!

Team Udayavani, Feb 6, 2017, 3:45 AM IST

shashikala.jpg

ಚೆನ್ನೈ: ಮಧ್ಯಾಹ್ನ 2 ಗಂಟೆ. ಸೂರ್ಯ ನೆತ್ತಿ ಸುಡುತ್ತಿದ್ದಾನೆ ಅಂತ ಅಲ್ಲಿ ಯಾರಿಗೂ ಅನ್ನಿಸಲೇ ಇಲ್ಲ. ರೋಯಪೇಟಾದ ಎಐಎಡಿಎಂಕೆ  ಕಚೇರಿಯ ಮುಂದೆ ಸಾಲುಗಟ್ಟಿ ನಿಂತ ಮಹಿಳೆಯರಿಗೆ ಸೂರ್ಯನಿಗಿಂತ ಮನಸ್ಸನ್ನು ತಾಪಕ್ಕೆ ದೂಡಿದ್ದು ಒ. ಪನ್ನೀರ್‌ ಸೆಲ್ವಂ ಪದತ್ಯಾಗ!

ರೋಯಪೇಟಾ  ಪಕ್ಷದ ಕಚೇರಿಯೊಳಗೆ ಒಮ್ಮತದ ಸಂಭ್ರಮ ಮೂಡಿದ್ದರೂ ಹೊರಗೆ ಸಾಲುಗಟ್ಟಿ ನಿಂತ ಅಭಿಮಾನಿಗಳಲ್ಲಿ ಸಂಭ್ರಮ ಇದ್ದಿರಲಿಲ್ಲ. ಅನೇಕರ ಕೈಯಲ್ಲಿ ಹಸಿರು ಪ್ಲಾಸ್ಟಿಕ್‌ನಿಂದ ನಿರ್ಮಿಸಿದ್ದ ಅಮ್ಮನ ಫೋಟೋಗಳು. ಅದರ ಮುಂದೆ ಅನೇಕರು ಮೂಕರಾಗಿ, ಕೆಲವರು ಮತ್ತೂಬ್ಬರ ಕಿವಿಯಲ್ಲಿ ಪಿಸುಗುಡುತ್ತಾ, “ಶಶಿಕಲಾ ಸಿಎಂ ಆಗ್ತಾರಂತಾ?’, “ಪನ್ನೀರ್‌ ಸೆಲ್ವಂರನ್ನು ಪಕ್ಷ ಹೀಗೆ ನಡೆಸಿಕೊಂಡಿದ್ದು ಸರೀನಾ?’ ಎಂದು ಕೇಳುತ್ತಿದ್ದರು. “ಅಮ್ಮ ಇಲ್ಲವಾದ ಮೇಲೆ ಪಕ್ಷದಲ್ಲಿ ಏನೆಲ್ಲ ಆಯ್ತಲ್ಲ’ ಎಂದು ಮತ್ತೂಬ್ಬರ ಕಣ್ಣೀರು! 

ಈ ಮೌನ ತಾಪದ ಸಂಭಾಷಣೆ ನಡುವೆ ಮಧ್ಯಾಹ್ನ 2.20ಕ್ಕೆ ಪನ್ನೀರ್‌ ಸೆಲ್ವಂ ಕಾರು ಪಕ್ಷದ ಕಚೇರಿಯ ಆವರಣದೊಳಗೆ ಸಾಗಿತು. ಕೆಲವೇ ನಿಮಿಷಗಳಲ್ಲಿ ಚಿನ್ನಮ್ಮ ಕೂಡ ಅಲ್ಲಿಗೆ ಬಂದರು. ಪನ್ನೀರ್‌ ಸೆಲ್ವಂ ಆ ಸಭೆಗೆ ಕಾಲಿಟ್ಟು 40 ನಿಮಿಷವೂ ಆಗಿರಲಿಲ್ಲ. ಮುಂದಿನ ಸಿಎಂ ಶಶಿಕಲಾ ಎಂದು ಸಭೆ ನಿರ್ಣಯಿಸಿದ ಫ್ಯಾಕ್ಸ್‌ ಒಂದು ರಾಜ್ಯಪಾಲ ವಿದ್ಯಾಸಾಗರ್‌ರನ್ನು ತಲುಪಿತ್ತು!

ಹೊರಗೆ ದಿಗಿಲು: ಹಾಗೆ ಸಾಲುಗಟ್ಟಿ ನಿಂತವರಲ್ಲಿ 58 ವರ್ಷದ ಕಾರ್ಯಕರ್ತೆಯೊಬ್ಬರು, “ಪನ್ನೀರ್‌ ರಾಜೀನಾಮೆ ವಿಚಾರ ಕೇಳಿ ಹೃದಯಾಘಾತವೇ ಆಯಿತು. ಶಶಿಕಲಾಗೆ ಆಡಳಿತದಲ್ಲಿ ಏನು ಅನುಭವ ಇದೆ? ನಾವೆಲ್ಲ ಪನ್ನೀರ್‌ ಹೆಸರನ್ನೇ ಸೂಚಿಸಿದ್ದೆವು. ಅವರಿಗಷ್ಟೇ ಈ ರಾಜ್ಯವನ್ನು ಮುನ್ನಡೆಸುವುದು ಗೊತ್ತು’ ಎನ್ನುತ್ತಿದ್ದರು. ಕೆಲವರು ಅಲ್ಲಿಯೇ ಶಶಿಕಲಾ ಅವರ ಬ್ಯಾನರ್‌ಗಳನ್ನು ಹರಿದು ಹಾಕುತ್ತಿದ್ದರು.

ಶಶಿಕಲಾ ಪರ ಸ್ವರ:  ಸಾಲುಗಟ್ಟಿ ನಿಂತ ಮಹಿಳೆಯರ ಗುಂಪಿನಿಂದ 50 ಮೀಟರ್‌ ಆಚೆ ಇನ್ನೊಂದು ಪಡೆ. ಅವರ ಕೈಗಳಲ್ಲಿ ಅದಾಗಲೇ ಶಶಿಕಲಾ ಭಾವಚಿತ್ರ! ಮುಂದಿನ ಸಿಎಂ ಶಶಿಕಲಾ ನಟರಾಜನ್‌ ಅಂದಕೂಡಲೇ ಎಲ್ಲರ ಮುಖ ಹಿಗ್ಗಿತ್ತು. ಪಳನಿಯಿಂದ ಚೆನ್ನೈಗೆ 487 ಕಿ.ಮೀ. ಸಾಗಿಬಂದಿದ್ದ ಕಾರ್ಯಕರ್ತ ವಿಎಸ್‌ ಮಣಿಕಂಠನ್‌, ” ಅಮ್ಮನೊಂದಿಗೆ ಶಶಿಕಲಾ ಮೇಡಂ 3 ದಶಕ ಇದ್ದವರು. ಈ ರಾಜ್ಯ ಒಳಿತಾಗಲು ಅವರಿಂದಷ್ಟೇ ಸಾಧ್ಯ’ ಎನ್ನುತ್ತಿದ್ದರು. 

ಈ ತಳಮಟ್ಟದ ಕಾರ್ಯಕರ್ತರ ಯಾವ ಧ್ವನಿಯೂ ಪಕ್ಷದ ಕಚೇರಿಯೊಳಗೆ ನುಸುಳಲಿಲ್ಲ. ಅಲ್ಲಿ ಹೊಮ್ಮಿದ್ದು ಕೇವಲ ಒಮ್ಮತದ ಅಭಿಪ್ರಾಯ! “ಶಶಿಕಲಾ ಮುಂದಿನ ಸಿಎಂ’ ಎನ್ನುವುದಷ್ಟೇ!

ಶಶಿಕಲಾ ನಡೆದ ಹಾದಿ
– ಹುಟ್ಟಿದ್ದು 1957, ಮನ್ನಾರ್‌ಗುಡಿ, ತಮಿಳುನಾಡು
– ತಂದೆ: ವಿವೇಕಾನಂದನ್‌, ತಾಯಿ: ಕೃಷ್ಣವೇಣಿ
– 1976ರಲ್ಲಿ ಡಿಸಿಯೊಬ್ಬರ ಮೂಲಕ ನಟಿ ಜಯಲಲಿತಾ ಪರಿಚಯ
– ವಿಡಿಯೋ ರೆಕಾರ್ಡರ್‌ ಆಗಿದ್ದ ಶಶಿಕಲಾ ಆಗ ನಟರಾಜನ್‌ ಅವರನ್ನು ವರಿಸಿದ್ದಷ್ಟೇ. ಪತಿಯ ಕೆಲಸವೂ ಹೋಗಿ ಸಂಸಾರ ಆರ್ಥಿಕ ಸಂಕಷ್ಟದಲ್ಲಿತ್ತು. ಜಯಲಲಿತಾ ಅವರ ಎಲ್ಲ ಸಾರ್ವಜನಿಕ ಕಾರ್ಯಕ್ರಮಗಳ ವಿಡಿಯೋ ರೆಕಾರ್ಡ್‌ ಮಾಡುವ ಕೆಲಸಕ್ಕೆ ನೇಮಕ.
– 1987ರಲ್ಲಿ ಸಿಎಂ ಎಂಜಿಆರ್‌ ನಿಧನರಾದಾಗ ಜನರ ಭಾವನಾತ್ಮಕ ಬೆಂಬಲ ಜಯಲಲಿತಾ ಕಡೆ ಬರುವಂತೆ ನೋಡಿಕೊಂಡರು.
– ”ಸೋದರಿ ಆಗಲು ರಕ್ತಸಂಬಂಧವೇ ಬೇಕಿಲ್ಲ’ ಎನ್ನುವ ಮೂಲಕ ಜಯಲಲಿತಾ ಅವರನ್ನು ಶಶಿಕಲಾ ತಮ್ಮ ಕುಟುಂಬದೊಳಗೆ ಸೇರಿಕೊಂಡರು.
– 1996ರಲ್ಲಿ ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ ಉಲ್ಲಂಘನೆ ಆರೋಪದಡಿ ಡಿಎಂಕೆ ಸರಕಾರದಿಂದ ಶಶಿಕಲಾ ಬಂಧನ. ಈ ಬೆಳವಣಿಗೆ ನಂತರ ಅಂತರ ಕಾಯ್ದುಕೊಂಡ ಜಯಲಲಿತಾ.
– ಕ್ರಮೇಣ ಮರುಸ್ನೇಹ. 2014ರ ತಾಮಿÕ ಭೂ ಹಗರಣದ ಆರೋಪದಡಿ, ಜಯಲಲಿತಾ ಜತೆ ಶಶಿಕಲಾ ಬಂಧನ.
– ಇತ್ತೀಚೆಗೆ ಜಯಲಲಿತಾ ಆರೋಗ್ಯ ಹದಗೆಟ್ಟಾಗಲೆಲ್ಲ ಆಕೆಯ ನೆರವಿಗೆ ಧಾವಿಸಿದ ಶಶಿಕಲಾ ಎಐಎಡಿಎಂಕೆ ಪಕ್ಷದ ಚಟುವಟಿಕೆಗಳಲ್ಲಿ ಭಾಗಿ.
– ಅಮ್ಮನ ನಿಧನದ ನಂತರ ಪಕ್ಷದ ಸಂಪೂರ್ಣ ಹಿಡಿತವನ್ನು  ಕೈಗೆತ್ತಿಕೊಂಡು, ಸಿಎಂ ಆದರು.

ಟಾಪ್ ನ್ಯೂಸ್

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

1-gadaga

Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Aravind kejriwal

Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ

Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ

Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

1-gadaga

Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.