ದೇಶಕ್ಕಿದು ದೀರ್ಘಾವಧಿ ತಾಪ ಹವೆ

Team Udayavani, Jun 13, 2019, 6:00 AM IST

ಸಾಂದರ್ಭಿಕ ಚಿತ್ರ.

ಹೊಸದಿಲ್ಲಿ: ಕಳೆದ 32 ದಿನಗಳಿಂದ ದೇಶಾದ್ಯಂತ ಹರಡಿರುವ ಉಷ್ಣಹವೆಯು 1988ರಲ್ಲಿ ಆವರಿಸಿದ್ದ ಉಷ್ಣಹವೆಯ ಕಾಲಾವಧಿಯನ್ನೂ ಮೀರಿಸಿ, ‘ಅತಿ ದೀರ್ಘಾವಧಿಯ ಉಷ್ಣಹವೆ’ ಎಂಬ ಕುಖ್ಯಾತಿಗೆ ಪಾತ್ರವಾಗಲಿದೆ. ಆಗ ಆವರಿಸಿದ್ದ ಉಷ್ಣಹವೆ 33 ದಿನ ಇತ್ತು. ಈ ವರ್ಷದ ಉಷ್ಣಹವೆ ಈಗಾಗಲೇ 32 ದಿನ ಪೂರೈಸಿದ್ದು, ಇನ್ನೆರಡು ದಿನ ಮುಂದುವರಿದರೆ ಅದು 1988ರ ದಾಖಲೆ ಮುರಿಯಲಿದೆ.

ಬುಧವಾರ ಅತಿ ಹೆಚ್ಚು ಉಷ್ಣಾಂಶ ದಾಖಲಿಸಿದ ನಗರಗಳಲ್ಲಿ ಟಾಪ್‌ 3 ನಗರಗಳಲ್ಲಿ ಉತ್ತರ ಪ್ರದೇಶದ ಬಂಡಾ (49.2 ಡಿಗ್ರಿ ಸೆ.), ಅಲಹಾಬಾದ್‌ (48.9 ಡಿಗ್ರಿ ಸೆ.), ದಿಲ್ಲಿ (48 ಡಿಗ್ರಿ ಸೆ.) ದಾಖಲಾಗಿತ್ತು.

ದೂಳಿನ ಬಿರುಗಾಳಿ: ಉಷ್ಣ ಹವೆಯ ಪರಿಣಾಮ, ದಿಲ್ಲಿಯಲ್ಲಿ ಬುಧವಾರ ಸಂಜೆಯಿಂದ ಧೂಳು ಸಹಿತ ಬಿರುಗಾಳಿ ಆವರಿಸಿದೆ. ಈ ಬಿರುಗಾಳಿ ರಾಜಸ್ಥಾನದ ಕಡೆಯಿಂದ ಧೂಳುಮಿಶ್ರಿತ ಬಿರುಗಾಳಿ ದಿಲ್ಲಿಗೆ ಅಪ್ಪಳಿಸಿದೆ. ಆನಂತರ, ಗಾಳಿಯ ದಿಕ್ಕು ಬದಲಾಗಿ ಇಡೀ ನಗರದೆಲ್ಲೆಡೆ ಧೂಳು ಆವರಿಸಿತ್ತು. ಇದರಿಂದಾಗಿ ವಿಮಾನಗಳ ಸಂಚಾರಕ್ಕೂ ಅಡ್ಡಿಯಾಗಿತ್ತು.


ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ