ರೈಲ್ವೆಯಲ್ಲಿ 2.5 ಲಕ್ಷ ಹುದ್ದೆ ಭರ್ತಿಗೆ ನಿರ್ಧಾರ
Team Udayavani, Jan 24, 2019, 12:30 AM IST
ಹೊಸದಿಲ್ಲಿ: ಭಾರತೀಯ ರೈಲ್ವೆ ಮುಂದಿನ ಎರಡು ವರ್ಷಗಳಲ್ಲಿ 2.5 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಿದೆ ಎಂದು ಬುಧವಾರ ಘೋಷಿಸಿದೆ. ಈಗಾಗಲೇ ಪ್ರಕ್ರಿಯೆಯಲ್ಲಿರುವ ನೇಮಕಾತಿಯ ಹೊರತಾಗಿಯೂ ಇಷ್ಟು ಪ್ರಮಾಣದ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಎಂದು ರೈಲ್ವೆ ಇಲಾಖೆ ಪ್ರಕಟಿಸಿದೆ. ಪ್ರಸ್ತುತ ಪ್ರಗತಿಯಲ್ಲಿರುವ ನೇಮಕಾತಿಯನ್ನೂ ಪರಿಗಣಿಸಿದರೆ ಒಟ್ಟು 4 ಲಕ್ಷ ಹುದ್ದೆ ಗಳನ್ನು ಭತಿ ಮಾಡಲಾಗುತ್ತಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಹೇಳಿದ್ದಾರೆ. ಹೊಸದಾಗಿ ಭರ್ತಿ ಮಾಡಲಾಗುವ ಹುದ್ದೆಗಳಿಗೆ ಆರ್ಥಿಕವಾಗಿ ಹಿಂದುಳಿ ದವರಿಗೆ ನೀಡಲಾಗುವ ಶೇ. 10 ಮೀಸಲಾತಿ ಅನ್ವಯಿಸಲಿದೆ. ಕಾನೂನು ಜಾರಿಗೆ ಬಂದ ನಂತರ ಮೊದಲ ಬಾರಿಗೆ ಈ ಮೀಸಲಾತಿ ಅಡಿಯಲ್ಲಿ ನೇಮಕಾತಿ ಮಾಡಲಾಗುತ್ತಿದೆ.