ವಿವಾದಿತ ಭೂಮಿ ಅಖಾಡದ್ದಾಗಿರಲಿಲ್ಲ

Team Udayavani, Sep 12, 2019, 5:00 AM IST

ನವದೆಹಲಿ: ವಿವಾದಿತ ರಾಮ ಜನ್ಮಭೂಮಿಯು ಎಂದಿಗೂ ನಿರ್ಮೋಹಿ ಅಖಾಡಕ್ಕೆ ಸಂಬಂಧಿಸಿರಲಿಲ್ಲ. ಟ್ರಸ್ಟ್‌ ರೂಪದಲ್ಲಾಗಲೀ ಅಥವಾ ಭಕ್ತರು ಎಂಬ ಕಾರಣಕ್ಕಾಗಲೀ ಅಖಾಡ ಯಾವುದೇ ರೀತಿಯ ಮಾಲೀಕತ್ವವನ್ನು ಹೊಂದಿರಲಿಲ್ಲ ಎಂದು ಸುಪ್ರೀಂಕೋರ್ಟ್‌ನಲ್ಲಿ ಮುಸ್ಲಿಂ ಮಂಡಳಿಗಳು ವಾದಿಸಿವೆ.

ಅಯೋಧ್ಯೆ ಕುರಿತ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠವು 21ನೇ ದಿನದ ವಿಚಾರಣೆಯನ್ನು ಆಲಿಸಿತು. ಮುಸ್ಲಿಂ ಮಂಡಳಿಗಳ ಪರ ವಾದ ಮಂಡಿಸಿದ ರಾಜೀವ್‌ ಧವನ್‌, ನಿರ್ಮೋಹಿ ಅಖಾಡವು ತನ್ನ ಹಕ್ಕನ್ನು 1959ರಲ್ಲಿ ಪ್ರಸ್ತಾಪಿಸಿ ದೂರು ದಾಖಲಿಸಿದ್ದು, ಇದು ದಾವೆ ಸಲ್ಲಿಸಲು ನೀಡಲಾಗಿದ್ದ ನಿಯಮಿತ ಕಾಲಾವಧಿಯನ್ನು ಮೀರಿದೆ ಎಂದಿದ್ದಾರೆ.

1950ರಲ್ಲಿ ಸರ್ಕಾರ ಈ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು, ಮೂಲ ವಾರಸುದಾರರಿಗೆ ಅರ್ಜಿ ಸಲ್ಲಿಸಲು ಮೂರು ವರ್ಷ ಕಾಲಾವಕಾಶ ನೀಡಿತ್ತು. ಆದರೆ ಅಖಾಡ 1959ರಲ್ಲಿ ಅರ್ಜಿ ಸಲ್ಲಿಸಿದೆ ಎಂದು ಅವರು ವಾದಿಸಿದ್ದಾರೆ. ಆದರೆ ವಿವಾದಿತ 2.77 ಎಕರೆ ಭೂಮಿಯಲ್ಲಿ ಅಖಾಡಕ್ಕೆ ಮೂರನೇ ಒಂದು ಭಾಗವನ್ನು ಅಲಹಾಬಾದ್‌ ಹೈಕೋರ್ಟ್‌ ನೀಡಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ