ತಾಜ್ ಮೀರಿಸಲಿದೆ ಕಸ ಪರ್ವತ
213 ಅಡಿ ಎತ್ತರಕ್ಕೇರಿದೆ ದಿಲ್ಲಿಯ ತ್ಯಾಜ್ಯ ಗೋಪುರ
Team Udayavani, Jun 5, 2019, 6:00 AM IST
ನವದೆಹಲಿ: ರಾಷ್ಟ್ರ ರಾಜಧಾನಿಯ ಪೂರ್ವಕ್ಕಿರುವ ಗಾಜಿಪುರ್ನ ಕಸ ವಿಲೇವಾರಿ ಮೈದಾನದಲ್ಲಿ 213 ಅಡಿಗಳಷ್ಟು ದೊಡ್ಡದಾದ “ತ್ಯಾಜ್ಯ ಪರ್ವತ’ ರೂಪುಗೊಂಡಿದ್ದು, ತ್ಯಾಜ್ಯ ವಿಲೇವಾರಿ ಅನಿಯಂತ್ರಿತವಾಗಿ ಹೀಗೇ ಮುಂದುವರಿದರೆ ಈ ಪರ್ವತದ ಎತ್ತರ ಮುಂದಿನ ವರ್ಷ ತಾಜ್ಮಹಲನ್ನು (239 ಅಡಿ) ಮೀರಿಸುತ್ತದೆ ಎಂದು ಹೇಳಲಾಗಿದೆ.
1984ರಲ್ಲಿ ಇಲ್ಲಿ ತ್ಯಾಜ್ಯ ಸುರಿಯುವಿಕೆ ಶುರುವಾಗಿದ್ದು, 2002ರ ಹೊತ್ತಿಗಾಗಲೇ ಗರಿಷ್ಠ ಮಟ್ಟ ಮುಟ್ಟಿತ್ತು. ಆದರೆ, ಮತ್ತಷ್ಟು ಮಗದಷ್ಟು ತ್ಯಾಜ್ಯ ಇಲ್ಲಿ ಸುರಿಯಲ್ಪಡುತ್ತಲೇ ಇದೆ. ಪ್ರತಿದಿನ 2000 ಟನ್ಗಳಿಗಿಂತ ಹೆಚ್ಚಿನ ತ್ಯಾಜ್ಯ ಇಲ್ಲಿ ಸುರಿಯಲಾಗುತ್ತದೆ. 2018ರಲ್ಲಿ ಇಲ್ಲಿನ ತ್ಯಾಜ್ಯ ಪರ್ವತವೊಂದು ಮಳೆಯಿಂ ದಾಗಿ ಕುಸಿದು ಅಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರನ್ನು ಬಲಿಪಡೆದಿತ್ತು. ಆಗ, ಇಲ್ಲಿ ತ್ಯಾಜ್ಯ ಸುರಿಯುವಿಕೆಗೆ ನಿಷೇಧ ಹೇರಲಾಗಿತ್ತಾದರೂ, ದೆಹಲಿ ಪಾಲಿಕೆಯು ಬದಲಿ ಜಾಗ ಹುಡುಕುವಲ್ಲಿ ವಿಫಲವಾಗಿದ್ದರಿಂದ ಇಲ್ಲಿ ತ್ಯಾಜ್ಯ ಸುರಿಯುವಿಕೆ ಪುನಃ ಮುಂದುವರಿದಿತ್ತು ಎಂದು ಹೇಳಲಾಗಿದೆ.
ದೊಡ್ಡ ಕಸದ ಪರ್ವತಗಳು ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಕಡಿಮೆ ಎತ್ತರದಲ್ಲಿ ಹಾರಾಡುವ ಜೆಟ್ ವಿಮಾನಗಳಿಗೆ ತೊಂದರೆಯಾಗದಂತೆ ಕಸದ ರಾಶಿಗಳ ಮೇಲೆ ಕೆಂಪು ದೀಪಗಳನ್ನು ಅಳವಡಿಸುವಂತೆ ಸುಪ್ರೀಂ ಕೋರ್ಟ್ ಕಳೆದ ವರ್ಷ ಸೂಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು
Congress ಪಡೆದ ಬಾಂಡ್ ಸುಲಿಗೆ ಅಲ್ಲವೇ: ಅಮಿತ್ ಶಾ ಪ್ರಶ್ನೆ
250 km per hour; ಶೀಘ್ರದಲ್ಲೇ ಬುಲೆಟ್ ರೈಲಿನಲ್ಲೂ ಆತ್ಮನಿರ್ಭರತೆ!
MUST WATCH
ಹೊಸ ಸೇರ್ಪಡೆ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?