ಬೋಗಿ ತುಂಡರಿಸಲು ಹುಬ್ಬಳ್ಳಿ ರೈಲ್ವೆ ವಲಯ ಹೊಸ ತಂತ್ರ
Team Udayavani, Jan 29, 2018, 6:05 AM IST
ನವದೆಹಲಿ: ರೈಲು ಅಪಘಾತಗಳಾದ ಸಂದರ್ಭದಲ್ಲಿ ಒಂದರ ಮೇಲೊಂದು ಬಿದ್ದ ಬೋಗಿಗಳನ್ನು ತೆಗೆದು ಪ್ರಯಾಣಿಕರನ್ನು ರಕ್ಷಿಸುವುದೇ ಸವಾಲಿನ ಕೆಲಸ. ಆದರೆ ಕರ್ನಾಟಕದ ನೈಋತ್ಯ ರೈಲ್ವೆ ವಲಯ ಹುಬ್ಬಳ್ಳಿ ವಿನೂತನ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಅದಕ್ಕೆ ಕೋಚ್ ವಿಂಡೋ ರಾಡ್ ಸ್ನಾಪರ್ ಟೂಲ್ ಎಂದು ಹೆಸರಿಸಲಾಗಿದೆ. ಅತ್ಯುತ್ಕೃಷ್ಟ ತಂತ್ರಜ್ಞಾನದಿಂದ ಅದನ್ನು ಸಿದ್ಧಪಡಿಸಲಾಗಿದೆ. ಸಾಮಾನ್ಯವಾಗಿ ಹೈಡ್ರಾಲಿಕ್ ರಾಡ್ ಕಟ್ಟರ್‌ನಿಂದ ಬೋಗಿಗಳನ್ನು ತುಂಡರಿಸಲು 5 ನಿಮಿಷ ಬೇಕಾಗುತ್ತದೆ. ಆದರೆ ಹುಬ್ಬಳ್ಳಿ ವಿಭಾಗ ಅಭಿವೃದ್ಧಿ ಮಾಡಿರುವ ಈ ರಾಡ್‌ನಿಂದ 30-40 ಸೆಕೆಂಡ್‌ಗಳಲ್ಲಿಯೇ ತುಂಡರಿಸಿ ಜನರನ್ನು ರಕ್ಷಿಸಲು ಸಾಧ್ಯವಿದೆ.
ಇದಲ್ಲದೆ ಇನ್ನೂ ಹಲವು ರೈಲ್ವೆ ಮಂಡಳಿಗಳು ಹೊಸತನಗಳನ್ನು ಶೋಧಿಸಿವೆ. ರೈಲ್ವೆ ಮಂಡಳಿ ಅಧ್ಯಕ್ಷರು ಇತ್ತೀಚೆಗೆ ಆಯಾ ಮಂಡಳಿಗಳು ನಡೆಸಿದ ಉತ್ತಮ ಕೆಲಸಗಳ ವಿವರಣೆ ನೀಡುವಂತೆ ಕೋರಿದ್ದರು. ಈಶಾನ್ಯ ರೈಲ್ವೆ ಮಂಡಳಿ ಕೇವಲ 500 ರೂ.ಗಳಲ್ಲಿ ಹಳಿ ಮೇಲೆ ನಿಗಾ ಇರಿಸುವವರಿಗಾಗಿ ವಿಶೇಷ ಬ್ಯಾಗ್ ಅಭಿವೃ ದ್ಧಿಪಡಿಸಿದೆ. ಅದರಲ್ಲಿ ಮಾರ್ಗ ನಿರ್ವಹಣೆಗೆ ಅಗತ್ಯವಾಗಿರುವ ಸಲಕರಣೆಗಳನ್ನು ಒಯ್ಯಲೂ ಸಾಧ್ಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
B Y Vijayendra: ಕಾಂಗ್ರೆಸ್ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?
Video Viral: ಕಚ್ಚಿದ ಹಾವನ್ನೇ ಕೊಂದು ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು
Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್- ಬಿಜೆಪಿ ನೇರ ಹಣಾಹಣಿ
Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ
Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ
MUST WATCH
ಹೊಸ ಸೇರ್ಪಡೆ
Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ
Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ
Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಸೆರೆ
B Y Vijayendra: ಕಾಂಗ್ರೆಸ್ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?