ಬಹುಮತಕ್ಕೆ 20 ಸ್ಥಾನ ಕೊರತೆ ಸಂಭವ
Team Udayavani, Jan 31, 2019, 12:30 AM IST
ಹೊಸದಿಲ್ಲಿ: ಲೋಕಸಭೆ ಚುನಾವಣೆಗೆ ದಿನಗಳು ಸಮೀಪಿಸು ತ್ತಿರುವಂತೆಯೇ, “ಟೈಮ್ಸ್ ನೌ’ ಚಾನೆಲ್ ಮತ್ತು ವಿಎಂಆರ್ ಸಂಸ್ಥೆ ಜಂಟಿಯಾಗಿ ನಡೆಸಿರುವ ಸಮೀಕ್ಷೆಯಲ್ಲಿ ಆಡಳಿತಾರೂಢ ಎನ್ಡಿಎಗೆ 252 ಸ್ಥಾನಗಳು ಪ್ರಾಪ್ತಿಯಾಗಲಿವೆ. ಹೀಗಾಗಿ ಸರಳಬಹುತ 272ಕ್ಕೆ 20 ಸ್ಥಾನಗಳು ಕೊರತೆ ಬೀಳಲಿದೆ. ಯುಪಿಎಗೆ 147, ಇತರರಿಗೆ 144 ಸ್ಥಾನಗಳು ಲಭ್ಯವಾಗಲಿವೆ ಎಂದು ಅಭಿಪ್ರಾಯ ಪಡಲಾಗಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿಗೆ 27, ಎಸ್ಪಿ-ಬಿಎಸ್ಪಿ ಮೈತ್ರಿಕೂಟ 51 ಸ್ಥಾನಗಳನ್ನು ಬಗಲಿಗೆ ಹಾಕಿಕೊಳ್ಳಲಿವೆ. ಮಹಾರಾಷ್ಟ್ರದ 48 ಸ್ಥಾನಗಳ ಪೈಕಿ 43 ಸ್ಥಾನಗಳಲ್ಲಿ ಎನ್ಡಿಎ ಜಯಗಳಿಸಲಿದೆ ಎಂದು ಹೇಳಲಾಗಿದೆ. ಈಶಾನ್ಯ ರಾಜ್ಯಗಳ 11ರ ಪೈಕಿ 9ರಲ್ಲಿ ಎನ್ಡಿಎ ಗೆಲ್ಲಲಿದೆ.
ಕರ್ನಾಟಕಕ್ಕೆ ಸಂಬಂಧಿಸಿದಂತೆ 28 ಸ್ಥಾನಗಳ ಪೈಕಿ 14 ಸ್ಥಾನಗಳಲ್ಲಿ ಬಿಜೆಪಿ ಜಯ ಗಳಿಸಲಿದೆ. ಯುಪಿಎ ಕೂಡ 14 ಸ್ಥಾನ ಗೆಲ್ಲಲಿವೆ. ಕೇರಳದ 20 ಸ್ಥಾನಗಳ ಪೈಕಿ ಎನ್ಡಿಎ 1, ಯುಡಿಎಫ್ 16, ಉಳಿದ ಮೂರು ಕ್ಷೇತ್ರಗಳನ್ನು ಯುಡಿಎಫ್ ಗೆಲ್ಲಲಿದೆ. ಆಂಧ್ರ ದಲ್ಲಿ ವೈಎಸ್ಆರ್ ಕಾಂಗ್ರೆಸ್ 25 ಸ್ಥಾನಗಳ ಪೈಕಿ 23ರಲ್ಲಿ ಗೆಲ್ಲುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ
Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್ಐ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?