37.8 ಕೋಟಿ ರೂ.ಗಳಿಗೆ ಮಾರಾಟವಾಯ್ತು ಈ ಪೈಂಟಿಂಗ್
Team Udayavani, Jul 16, 2021, 3:10 PM IST
ಮುಂಬೈ : 1938ರ ಸಮಯದಲ್ಲಿ ರಚಿತವಾಗಿದ್ದ ಪ್ರಸಿದ್ಧ ಚಿತ್ರಕಲೆ 37.8 ಕೋಟಿ ರೂ.ಗಳಿಗೆ ಮಾರಾಟವಾಗಿದೆ. ಇತ್ತೀಚಿಗೆ ಮುಂಬೈನಲ್ಲಿ ಸ್ಯಾಫ್ರನ್ ಆರ್ಟ್ ನಡೆಸಿದ ಹರಾಜಿನಲ್ಲಿ ಈ ಪೈಂಟಿಂಗ್ ಸೇಲ್ ಆಗಿದೆ.
ಹೆಸರಾಂತ ಹಂಗೇರಿಯನ್-ಭಾರತೀಯ ವರ್ಣಚಿತ್ರಕಾರೆಯಾಗಿದ್ದ ಅಮೃತಾ ಶೆರ್ ಗಿಲ್ ಅವರು ಈ ಚಿತ್ರವನ್ನು ರಚಿಸಿದ್ದರು. ಪೈಂಟಿಂಗ್ ಇದಾಗಿದೆ. 20ನೇ ಶತಮಾನ ಆರಂಭದ ಶ್ರೇಷ್ಠ ಮಹಿಳಾ ಕಲಾವಿದರಲ್ಲಿ ಅಮೃತ ಶೆರ್ ಗಿಲ್ ಕೂಡ ಒಬ್ಬರು. ತಮ್ಮ ಚಿಕ್ಕ ವಯಸ್ಸಿನಲ್ಲೇ ಇವರು ಚಿತ್ರಕಲೆಯತ್ತ ಆಸಕ್ತಿ ಬೆಳೆಸಿಕೊಂಡಿದ್ದರು.
”ಅಮೃತ ಶೇರ್ ಗಿಲ್ ಅವರ ಕೌಶಲ್ಯ ಮತ್ತು ಪ್ರತಿಭೆಗೆ ಇವರ ಚಿತ್ರಕಲೆಯೇ ಸಾಕ್ಷಿಯಾಗಿದೆ. ಈ ಚಿತ್ರಕಲೆಯು ಕಲಾವಿದೆಯ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಎತ್ತಿ ತೋರಿಸುತ್ತದೆ” ಎಂದು ಸ್ಯಾಫ್ರನ್ ಆರ್ಟ್ ಸಿಇಒ ಮತ್ತು ಸಹ-ಸಂಸ್ಥಾಪಕ ದಿನೇಶ್ ವಾಜಿರಾನಿ ತಿಳಿಸಿದ್ದಾರೆ.
ಇನ್ನು ಇದುವರೆಗೆ ಮಾರಾಟವಾದ ಅತ್ಯಂತ ದುಬಾರಿ ಭಾರತೀಯ ಚಿತ್ರಕಲೆ 39.98 ಕೋಟಿ ರೂ.ಗೆ ಈ ವರ್ಷದ ಮಾರ್ಚ್ ನಲ್ಲಿ ಮಾರಾಟವಾಗಿತ್ತು. ವಿ.ಎಸ್. ಗಾಯ್ತೊಂಡೆ ಅವರ ಶೀರ್ಷಿಕೆ ರಹಿತವಾದ ಪೇಂಟಿಂಗ್ ಇದಾಗಿತ್ತು. ಸದ್ಯ ಮಾರಾಟವಾಗಿರುವ ಪೈಂಟಿಂಗ್ ಜಾಗತಿಕವಾಗಿ ಮಾರಾಟವಾದ 2ನೇ ಅತ್ಯಂತ ದುಬಾರಿ ಮೊತ್ತದ ಭಾರತೀಯ ಚಿತ್ರಕಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು