ಭಾರತವನ್ನು ವಿಶ್ವಗುರು ಸ್ಥಾನಕ್ಕೆ ಕೊಂಡೊಯ್ಯಲು ಪ್ರತಿಯೊಬ್ಬ ಭಾರತೀಯರ ಸಹಭಾಗಿತ್ವ ಅವಶ್ಯ

Team Udayavani, May 28, 2023, 4:52 PM IST

ಭಾರತವನ್ನು ವಿಶ್ವಗುರು ಸ್ಥಾನಕ್ಕೆ ಕೊಂಡೊಯ್ಯಲು ಪ್ರತಿಯೊಬ್ಬ ಭಾರತೀಯರ ಸಹಭಾಗಿತ್ವ ಅವಶ್ಯ

ಪಣಜಿ: ಜಿ 20 ರಾಷ್ಟ್ರಗಳ ಅಧ್ಯಕ್ಷ ಸ್ಥಾನ ಭಾರತಕ್ಕೆ ಲಭಿಸಿರುವುದು ಐತಿಹಾಸಿಕ ವಿಷಯವಾಗಿದೆ. ಭಾರತವು ವಿಶ್ವಕ್ಕೆ ಯೋಗ, ಆಯುರ್ವೇದ ಮುಂತಾದ ಕೊಡುಗೆಗಳನ್ನು ನೀಡಿದೆ. ಭಾರತಕ್ಕೆ ಸಂಗೀತ, ನೃತ್ಯ, ಕಲೆ, ಸಾಹಿತ್ಯ, ಚಿತ್ರ, ಶಿಲ್ಪ ಮುಂತಾದ ಸಾಂಸ್ಕೃತಿಕ ಪರಂಪರೆ ಲಭಿಸಿದೆ. ಇದು ಎಲ್ಲರ ಜೊತೆಗೆ ಹಂಚಿಕೊಳ್ಳುವುದು ಆವಶ್ಯಕವಾಗಿದೆ. ಭಾರತವು ಕೇವಲ ಅಭಿವೃದ್ಧಿ ಹೊಂದುತ್ತಿರುವ ದೇಶವಷ್ಟೇ ಅಲ್ಲ, ಭಾರತವು ಅಭಿವೃದ್ಧಿಯ ಪಥದತ್ತ ಮತ್ತು ಸಾಮರ್ಥ್ಯಶಾಲಿಯಾಗಿ ವಿಶ್ವದಲ್ಲಿ ಉದಯಿಸುತ್ತಿದೆ. ಭಾರತದ ಈ ನವ ನಿರ್ಮಾಣದಲ್ಲಿ ಮತ್ತು ಭಾರತವನ್ನು ವಿಶ್ವಗುರು ಸ್ಥಾನಕ್ಕೆ ಕೊಂಡೊಯ್ಯಲು ಪ್ರತಿಯೊಬ್ಬ ಭಾರತೀಯರು ಸಹಭಾಗಿಯಾಗುವುದು ಆವಶ್ಯಕವಾಗಿದೆ ಎಂದು ಗೋವಾ ರಾಜ್ಯದ ಕಲೆ ಮತ್ತು ಸಾಂಸ್ಕೃತಿಕ ಸಚಿವ ಗೋವಿಂದ  ಗಾವಡೆ ಕರೆ ನೀಡಿದರು.

ಗೋವಾ ರಾಜ್ಯ ಸರ್ಕಾರ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಇಂಟನ್ರ್ಯಾಷನಲ್ ಸೆಂಟರ್ ಫಾರ್ ಕಲ್ಚರಲ್ ಸ್ಟಡೀಸ್ ಮತ್ತು ಭಾರತೀಯ ವಿದ್ಯಾ ಭವನ, ನವದೆಹಲಿ ಈ ಸಂಸ್ಥೆಗಳ ಸಂಯುಕ್ತ ಸಹಯೋಗದೊಂದಿಗೆ ಆಯೋಜಿಸಿದ್ದ ಸಿ 20 ಪರಿಷತ್ತಿನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ದಾಬೋಲಿ, ವಾಸ್ಕೊ, ಗೋವಾದ ರಾಜಹಂಸ ನೌದಳ ಸಭಾಗೃಹದಲ್ಲಿ, ವಿವಿಧತೆ, ಸಮಾವೇಶಕತೆ ಮತ್ತು ಪರಸ್ಪರ ಗೌರವ ಈ ವಿಷಯದ ಬಗ್ಗೆ ಸಿ 20 ಪರಿಷತ್ತಿಗೆ ದೇಶ ವಿದೇಶದಿಂದ ಬಂದಿರುವ ಗೌರವಾನ್ವಿತರು ಮತ್ತು 350 ಕೂ ಹೆಚ್ಚಿನ ವಿಶೇಷಜ್ಞರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಗೋವಾದ ಸಾಂಸ್ಕೃತಿಕ ಸಚಿವ ಗೋವಿಂದ ಗಾವಡೆ, ಇಂಟರ್ನ್ಯಾಷನಲ್ ಸೆಂಟರ್ ಫಾರ್ ಕಲ್ಚರಲ್ ಸ್ಟಡೀಸ್ ನ ಅಧ್ಯಕ್ಷೆ ಮತ್ತು ಸಿ 20 ಪರಿಷತ್ತಿನ ಅಂತರಾಷ್ಟ್ರೀಯ ಸಮನ್ವಯಕರಾದ ಪ್ರಾ. ಡಾ. ಶಶೀಬಾಲಾ, ಸಿಂಗಾಪುರ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಸಮೂಹದ ಸದಸ್ಯರಾದ ಮನೀಷ ತ್ರಿಪಾಟಿ, ಹಿಂದಿ ಚಲನಚಿತ್ರ ನಟಿ ಹಾಗೂ ಲೇಖಕಿ ಪೂಜಾ ಬೇದಿ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಶೋಧನಾ ಸಮನ್ವಯಕರಾದ ಶ್ವೇತಾ ಕ್ಲಾರ್ಕ್ ಮತ್ತು ಸ್ಪಿರಿಚುವಲ್ ಸೈನ್ಸ್ ರಿಸರ್ಚ್ ಫೌಂಡೇಶನ್ ಈ ಜಾಲತಾಣದ ಸಂಪಾದಕರಾದ ಶಾನ್ ಕ್ಲಾರ್ಕ್ ಇವರು ದೀಪ ಪ್ರಜ್ವಲನೆ ಮಾಡಿದರು. ಈ ಸಮಯದಲ್ಲಿ ಸಿ 20 ಪರಿಷತ್ತಿನ ಪ್ರಾ. ಡಾ. ಶಶೀಬಾಲಾ ಇವರು ಸಿ 20 ಪರಿಷತ್ತಿನ ಚಿಹ್ನೆಯಿರುವ ಎರಡು ಧ್ವಜಗಳನ್ನು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಶ್ವೇತಾ ಕ್ಲಾರ್ಕ್ ಮತು ಶಾನ್ ಕ್ಲಾರ್ಕ್ ಇವರಿಗೆ ಹಸ್ತಾಂತರಿಸಿದರು. ಇದೇ ವೇಳೆ ಸಾಂಸ್ಕೃತಿಕ  ಸಚಿವ ಗೋವಿಂದ ಗಾವಡೆ ರವರು ಸಿ 20 ಪರಿಷತ್ತಿನ ವಸುದೈವ ಕುಟುಂಬಕಮ್ ಸಂದೇಶ ನೀಡುವ ಸಂಗೀತಮಯ ವಿಡಿಯೋ ಲೋಕಾರ್ಪಣೆ ಮಾಡಲಾಯಿತು.

ಬಳಿಕ ಮಾತನಾಡಿದ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್, ವಿಶ್ವಶಾಂತಿ ಮತ್ತು ವೈಶ್ವಿಕ ವಿಕಾಸದ ದೃಷ್ಟಿಯಿಂದ ಗೋವಾದಲ್ಲಿ ನಡೆಯುವ ಜಿ 20 ಯ ಪರಿಷದ್ ಗೋಮಂತಕಿಯರಿಗಾಗಿ ಅಭಿಮಾನದ ವಿಷಯವಾಗಿದೆ. ಭಾರತವು ಜಗತ್ತಿನ ಆಧ್ಯಾತ್ಮಿಕ ರಾಜಧಾನಿಯಾಗಿದೆ. ಅದು ಜಿ 20 ರಾಷ್ಟ್ರಗಳಿಗೆ ಐಕ್ಯತೆ, ಸಮೃದ್ಧಿ ಮತ್ತು ಸಮಾವೇಶಕತೆ ಈ ದಿಶೆಯಲ್ಲಿ ಕರೆದುಕೊಂಡು ಹೋಗಲಿದೆ. ಭಾರತಾದ್ಯಂತ ಈ ಪರಿಷತ್ತಿನ ಮೂಲಕ ಆರೋಗ್ಯ, ವಿಕಾಸ, ಪ್ರವಾಸಿತಾಣ, ಎನರ್ಜಿ, ಸ್ಟಾರ್ಟ್ ಅಪ್, ಮುಂತಾದ ವಿವಿಧ ವಿಷಯಗಳ ಬಗ್ಗೆ ಪರಿಷದ್‍ಗಳು ನಡೆಯುತ್ತಿವೆ. ಪ್ರಧಾನಮಂತ್ರಿ. ನರೇಂದ್ರ ಮೋದಿ ಇವರ ನೇತೃತ್ವದಲ್ಲಿ ಭಾರತ ಜಗತ್ತಿನ ನೇತೃತ್ವ ವಹಿಸಿಕೊಂಡಿದೆ. ಸಿ 20 ಪರಿಷತ್ತಿನ ಮಾಧ್ಯಮದಿಂದ ನಾವು ಜಗತ್ತಿಗೆ ವಸುದೈವ ಕುಟುಂಬಕಮ್, ಧ್ಯೇಯದವರೆಗೆ ಕರೆದುಕೊಂಡು ಹೋಗೋಣ ಎಂದರು.

ಶ್ರದ್ಧೆ ಮತ್ತು ಅಶ್ರದ್ದೆ ಇದರಲ್ಲಿ ಜಗತ್ತಿನ ವಿಭಜನೆ ಮಾಡಬಾರದು ! – ಪ್ರಾ. ಡಾ. ಶಶೀಬಾಲಾ
ಇಂದು  ಜಗತ್ತಿನಲ್ಲಿ  ಸಂಘರ್ಷ, ಭಯೋತ್ಪಾದನೆ ಮತ್ತು ಅರಾಜಕತೆಯ ವಾತಾವರಣವಿದೆ. ಮನುಷ್ಯ ನಿಸರ್ಗದ ಮಾಲಿಕನಾಗಿದ್ದಾನೆ. ಕಮ್ಯುನಿಸ್ಟ್, ಬಂಡವಾಳಶಾಹಿ ಮತ್ತು ವ್ಯಾಪಾರಿಕರಣದಿಂದ ಜಗತ್ತಿನಾದ್ಯಂತ ಅಗೌರವ, ಹಾಗೂ ವಿಶಿಷ್ಟ ವರ್ಗವನ್ನು ಬಹಿಷ್ಕರಿಸುವ ಪ್ರವೃತ್ತಿ ಹೆಚ್ಚಿದೆ. ಜಗತ್ತಿನಲ್ಲಿ ಹೆಚ್ಚಿರುವ ಈ ಸಂಘರ್ಷ ತ್ಯಾಗ, ತಪ, ಕರುಣೆ ಮತ್ತು ಪ್ರೇಮ ಇವುಗಳಿಂದ ನಷ್ಟವಾಗಬಹುದು. ಭಾರತೀಯ ಋಷಿಮುನಿಗಳು ಪ್ರತಿಪಾದಿಸಿರುವ ಕಲಿಕೆಯಿಂದ ಭಾರತ ಜಗತ್ತಿಗೆ ಮಾರ್ಗದರ್ಶನ ಮಾಡಬಹುದು. ಆಧ್ಯಾತ್ಮಿಕ ಮಾರ್ಗದಲ್ಲಿ ಜಗತ್ತಿನಲ್ಲಿ ಎಲ್ಲಾ ಸಮಸ್ಯೆಗಳಿಗೆ ಉಪಾಯ ಹುಡುಕುವ ಕ್ಷಮತೆ ಇದೆ. ನಾವು ಶ್ರದ್ಧೆಯುಳ್ಳವರು (ಬಿಲಿವರ್ಸ್) ಮತ್ತು ಅಶ್ರದ್ದೆ (ನಾನ್ ಬಿಲಿವರ್ಸ್) ಇವರಲ್ಲಿ ಜಗತ್ತನ್ನು ವಿಭಜಿಸಬಾರದು, ಎಂದು ಸಿ 20 ಪರಿಷತ್ತಿನ ಅಂತರಾಷ್ಟ್ರೀಯ ಸಮನ್ವಯಕರಾದ  ಡಾ. ಶಶೀಬಾಲಾ ಇವರು ಪ್ರತಿಪಾದಿಸಿದರು.

ದೇವಸ್ಥಾನದಲ್ಲಿನ ಸಕಾರಾತ್ಮಕ ಊರ್ಜೆಯು ಎಲ್ಲರ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ ! – ಶ್ವೇತಾ ಕ್ಲಾರ್ಕ್
ಭಾರತದಲ್ಲಿನ ದೇವಸ್ಥಾನಗಳು ಭಾರತದ ಗೌರವಶಾಲಿ ಪರಂಪರೆಗೆ ಮೂರ್ತಿರೂಪ ನೀಡಿದೆ, ಜೊತೆಗೆ ಭಾರತದ ಸಮೃದ್ಧ ಸಾಂಸ್ಕೃತಿಕ ಸಾಕ್ಷಿ ನೀಡುತ್ತದೆ. ದೇವಸ್ಥಾನದ ಅದ್ವಿತೀಯತೆಯ ಬಗ್ಗೆ ಮಾಹಿತಿ ನೀಡುವಾಗ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಶೋಧನಾ ಸಮನ್ವಯಕರಾದ  ಶ್ವೇತಾ ಕ್ಲಾರ್ಕ್ ಇವರು ಧನಬಾದ್(ಜಾಖರ್ಂಡ್) ಇಲ್ಲಿಯ ಸ್ವಯಂಭೂ ಮಹಾದೇವ ದೇವಸ್ಥಾನದಲ್ಲಿನ ತಮ್ಮ ಸ್ವಂತದ ಅನುಭವ ಹಂಚಿಕೊಂಡರು. ಶ್ವೇತಾ ಇವರು, ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಮೇಲೆ ಅವರು ಯಾವುದೇ ಧರ್ಮದವರಾಗಿರಲಿ ಅಲ್ಲಿಯ ಸಕಾರಾತ್ಮಕ ಊರ್ಜೆಯು ಅವರ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ, ಇದು ಯೂನಿವರ್ಸಲ್ ಔರಾ ಸ್ಕ್ಯಾನರ್ ಈ ವೈಜ್ಞಾನಿಕ ಉಪಕರಣದ ಮೂಲಕ ನಡೆಸಿರುವ ಪ್ರಯೋಗದಲ್ಲಿ ಸಿದ್ದವಾಗಿದೆ ಎಂದರು.

ಈ ವೇಳೆ ಪ್ರತಿಷ್ಠಿತ ಗೌರವಾನ್ವಿತರಲ್ಲಿ ಸಿಂಗಾಪೂರ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ, ಸಮೂಹದ ಸದಸ್ಯರಾದ ಮನೀಶ ತ್ರಿಪಾಠೀ, ಪ್ರಾಚೀನ ಪರಂಪರೆ ಮತ್ತು ತಂತ್ರಜ್ಞಾನದ ಮೂಲಕ ಮಾನವೀಯತೆಯ ಸಾಮೂಹಿಕ ಚೇತನ ಹೆಚ್ಚಿಸುವ  ಅಜಿತ ಪದ್ಮನಾಭ, ಗೋವಾದ ಶ್ರೀನಿವಾಸ್ ಸಿನಾಯಿ ಟೆಂಪೋ ಕಾಲೇಜ್ ಆಫ್ ಕಾಮರ್ಸ್ ಅಂಡ್ ಎಕನಾಮಿಕ್ಸ್‍ನ ಪ್ರಾಚಾರ್ಯ ಹಾಗೂ ಸಾಹಿತಿ, ಲೇಖಕ ಪ್ರಾ.(ಡಾ.) ಮನೋಜ ಕಾಮತ್, ಗೋವಾ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಮಹೇಶ ಪಾಟೀಲ, ಸಂತ ಈಶ್ವರ್ ಫೌಂಡೇಶನ್‍ನ ರಾಷ್ಟ್ರೀಯ ಸಚಿವ ವೃಂದಾ ಖನ್ನಾ, ಆಯುರ್ವೇದ ಮತ್ತು ನಿಸರ್ಗೋಪಚಾರ ತಜ್ಞ ಡಾ. ನಿಶಿ ಭಟ್ಟ, ಪಾರ್ಕ್ ಹಾಸ್ಟೆಲ್‍ನ ಮಹಾವ್ಯವಸ್ಥಾಪಕರಾದ ಸೌರಭ ಖನ್ನಾ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ : Car Accident: ಶೀಘ್ರದಲ್ಲಿ ಮದುವೆಯಾಗಲಿದ್ದ ಖ್ಯಾತ ನಟನ ಕಾರು ಅಪಘಾತ

ಟಾಪ್ ನ್ಯೂಸ್

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.