ನೋಟಿನ ವಾಟರ್ ಮಾರ್ಕ್ ಬದಲಿಲ್ಲ; ಭಾರತೀಯ ರಿಸರ್ವ್ ಬ್ಯಾಂಕ್
Team Udayavani, Jun 6, 2022, 10:00 PM IST
ಮುಂಬೈ: ಹೊಸ ಮಾದರಿಯ ಭದ್ರತಾ ಗುಣ ಲಕ್ಷಣಗಳನ್ನು ಹೊಂದಿರುವ ನೋಟುಗಳಲ್ಲಿ ಮಹಾತ್ಮಾ ಗಾಂಧಿಯವರ ವಾಟರ್ ಮಾರ್ಕ್ ಜತೆಗೆ ಇತರ ಪ್ರಮುಖರನ್ನು ಸೇರ್ಪಡೆಗೊಳಿಸುವ ಪ್ರಸ್ತಾಪ ಇಲ್ಲ. ಹೀಗೆಂದು ಭಾರತೀಯ ರಿಸರ್ವ್ ಬ್ಯಾಂಕ್ ಸೋಮವಾರ ಸ್ಪಷ್ಟಪಡಿಸಿದೆ.
ಕೆಲವೊಂದು ಮಾಧ್ಯಮಗಳಲ್ಲಿ ಹೊಸತಾಗಿ ಮುದ್ರಣಗೊಳ್ಳಲಿರುವ ನೋಟುಗಳಲ್ಲಿ ಮಹಾತ್ಮಾ ಗಾಂಧಿಯವರ ವಾಟರ್ಮಾರ್ಕ್ ಬದಲಾಗಿ ಇತರ ಮುಖಂಡರ ವಾಟರ್ ಮಾರ್ಕ್ ಅನ್ನು ಸೇರ್ಪಡೆಗೊಳಿಸಲಾಗುತ್ತದೆ ಎಂಬ ಬಗ್ಗೆ ವರದಿಗಳು ಪ್ರಕಟಗೊಂಡಿದ್ದವು.
ಅದಕ್ಕೆ ಸ್ಪಷ್ಟನೆ ನೀಡಿರುವ ಆರ್ಬಿಐ, ನಮ್ಮ ಮುಂದೆ ಅಂಥ ಪ್ರಸ್ತಾಪವೇ ಇಲ್ಲ ಎಂದು ಹೇಳಿದೆ.