Udayavni Special

ಆಹಾರ ಕಲಬೆರಕೆ ಪರೀಕ್ಷೆಗೆ ಇನ್ನು ಶುಲ್ಕವಿಲ್ಲ

ಗ್ರಾಹಕರು ಇನ್ನು ಪರೀಕ್ಷಾ ವರದಿ ಪಡೆಯುವುದೂ ಸುಲಭ

Team Udayavani, Dec 14, 2019, 9:45 PM IST

lab

ಹೊಸದಿಲ್ಲಿ: ನೀವು ತಿನ್ನುವ, ಖರೀದಿಸಿದ ಆಹಾರದ ಮೇಲೆ ಸಂಶಯವಿದೆಯೇ? ಹಾಗಿದ್ದರೆ ತಡ ಬೇಡ. ಇನ್ನು ಅಧಿಕೃತ ಆಹಾರ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಖರ್ಚು ವೆಚ್ಚಗಳಿಲ್ಲದೇ ಆಹಾರವನ್ನು ಪರೀಕ್ಷಿಸಬಹುದು.

ಇಂಥದ್ದೊಂದು ಗ್ರಾಹಕ ಸ್ನೇಹಿ ತೀರ್ಮಾನವನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್‌ಎಸ್‌ಎಐ) ಇದೀಗ ಜಾರಿಗೆ ತಂದಿದೆ. ಇದರೊಂದಿಗೆ ನಂಬಿಕಸ್ಥ ಗ್ರಾಹಕ ಸ್ವಯಂ ಸೇವಾ ಸಂಸ್ಥೆಗಳು ಈ ವಿಚಾರದಲ್ಲಿ ಗ್ರಾಹಕರಿಗೆ ನೆರವು ನೀಡುವುದಕ್ಕೆ ಅವಕಾಶವನ್ನೂ ಮಾಡಿಕೊಟ್ಟಿದೆ.

ಕಾನೂನು ಪ್ರಕಾರ ಈವರೆಗೆ ಗ್ರಾಹಕರು ಪರೀಕ್ಷಿಸಲು ನೀಡಿದ ಆಹಾರ ದೋಷದಿಂದ ಕೂಡಿದ್ದರೆ ಮಾತ್ರ ಪ್ರಯೋಗಾಲಯಗಳು ಈ ಕುರಿತ ಶುಲ್ಕವನ್ನು ವಾಪಸ್‌ ಮಾಡುತ್ತಿದ್ದವು. ಆದರೆ ಇದರಲ್ಲಿ ಕೆಲವೊಂದು ಪ್ರಾಯೋಗಿಕ ಸಮಸ್ಯೆಗಳು ಇದ್ದುದರಿಂದ ಶುಲ್ಕವನ್ನು ವಾಪಸ್‌ ನೀಡುವ ಪದ್ಧತಿ ಕೈಬಿಡಲಾಗಿದೆ. ಆಹಾರ ಸರಿಯಾಗಿದೆ ಎಂದು ಲ್ಯಾಬ್‌ಗಳು ಹೇಳಿದರೂ ಶುಲ್ಕ ಪಡೆಯುವುದಿಲ್ಲ ಎಂದು ಎಫ್ಎಸ್‌ಎಸ್‌ಎಐ ಹೇಳಿದೆ.

ಆಹಾರ ಪರೀಕ್ಷೆಗೆ 80 ಲ್ಯಾಬ್‌ಗಳಿಗೆ ಎಫ್ಎಸ್‌ಎಸ್‌ಎಐ ಅವಕಾಶ ಮಾಡಿಕೊಟ್ಟಿದೆ. ಎಫ್ಎಸ್‌ಎಸ್‌ಎಐಯ ವಿನೂತನ ಕ್ರಮವನ್ನು ಆಹಾರ ಮತ್ತು ಪೋಷಕಾಂಶ ಸಂರಕ್ಷಣೆಗಾಗಿರುವ ಗ್ರಾಹಕ ಸಂಘಗಳು ದೇಶಾದ್ಯಂತ ನೆಟ್‌ವರ್ಕ್‌ ಸ್ಥಾಪನೆ ಮೂಲಕ ಬೆಂಬಲಿಸಲಿವೆ.

ಪೂರ್ವ ನಿರ್ಧರಿತ ಗ್ರಾಹಕ ಸಂಸ್ಥೆಗಳ ಮೂಲಕ ನಿರ್ದಿಷ್ಟ ಸಂಖ್ಯೆಯಲ್ಲಿ ಆಹಾರ ಪರೀಕ್ಷೆ ನಡೆಸಲಾಗುತ್ತದೆ. ಆರಂಭದಲ್ಲಿ ವಿಶ್ವಾಸಾರ್ಹ ಸಂಸ್ಥೆಗಳನ್ನು ಇದಕ್ಕಾಗಿ ತಯಾರು ಮಾಡಲಾಗುವುದು ಎಂದು ಎಫ್ಎಸ್‌ಎಸ್‌ಎಐ ಸಿಇಒ ಪವನ್‌ ಅಗರ್‌ವಾಲ್‌ ಹೇಳಿದ್ದಾರೆ. ಈ ಗ್ರಾಹಕ ಸ್ವಯಂ ಸೇವಾ ಸಂಸ್ಥೆಗಳು ನಿರ್ದಿಷ್ಟ ಲ್ಯಾಬ್‌ಗಳೊಂದಿಗೆ ಸಂಪರ್ಕ ಹೊಂದಿದ್ದು, ಆ ಲ್ಯಾಬ್‌ಗಳ ಮೂಲಕವೇ ಪರೀಕ್ಷೆ ನಡೆಸಲಾಗುತ್ತದೆ ಎಂದವರು ಹೇಳಿದ್ದಾರೆ.

ಬಿಸಿಯೂಟ ಪರೀಕ್ಷೆಗೂ ಕ್ರಮ
ಇದರೊಂದಿಗೆ ಶಾಲೆಗಳ ಬಿಸಿಯೂಟದ ಪರೀಕ್ಷೆಗೆ ಸ್ವಯಂ ಸೇವಾ ಸಂಸ್ಥೆಗಳಿಗೆ ಸ್ವಯಂ ಶೋಧನೆಯ 100 ಸಲಹಾ ಅಂಶಗಳುಳ್ಳ ಆಹಾರ ಸುರಕ್ಷತೆ ಮ್ಯಾಜಿಕ್‌ ಬಾಕ್ಸ್‌ಗಳನ್ನು ನೀಡಲಾಗುತ್ತದೆ. ಇದರೊಂದಿಗೆ ಗ್ರಾಹಕರ ದೂರುಗಳನ್ನು ಆಲಿಸಲು 200 ನೋಡಲ್‌ ಅಧಿಕಾರಿಗಳನ್ನು ನೇಮಿಸಲು ಎಫ್ಎಸ್‌ಎಸ್‌ಎಐ ನಿರ್ಧರಿಸಿದೆ. ಸ್ವಯಂ ಸೇವಾ ಸಂಸ್ಥೆಗಳನ್ನೂ ಗ್ರಾಹಕರ ದೂರುಗಳನ್ನು ಪರಿಹರಿಸಲು ತರಬೇತುಗೊಳಿಸಲಾಗುವುದು ಎಂದು ಅಧಿಕೃತ ಮೂಲಗಳು ಹೇಳಿವೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಟೀಂ ಇಂಡಿಯಾ ಮಾಜಿ ಆಟಗಾರನಿಗೂ ಕಾಡಿದ ಕೋವಿಡ್-19 ಸೋಂಕು

ಟೀಂ ಇಂಡಿಯಾ ಮಾಜಿ ಆಟಗಾರನಿಗೂ ಕಾಡಿದ ಕೋವಿಡ್-19 ಸೋಂಕು

donald-trumph

ಇದೇ ಮೊದಲ ಬಾರಿಗೆ ಮಾಸ್ಕ್ ಧರಿಸಿದ ಡೊನಾಲ್ಡ್ ಟ್ರಂಪ್: ಸೇನಾ ಆಸ್ಪತ್ರೆಗೆ ಭೇಟಿ !

amitab-bacchan

ಅಮಿತಾಬ್ ಬಚ್ಚನ್ ಹಾಗೂ ಪುತ್ರ ಅಭಿಷೇಕ್ ಬಚ್ಚನ್ ಗೂ ಕೋವಿಡ್ ಸೋಂಕು ದೃಢ, ಆಸ್ಪತ್ರೆಗೆ ದಾಖಲು

ಶಿವಮೊಗ್ಗ: ಸೋಂಕಿತನ ಶವಕ್ಕೆ ಎರಡು ಬಾರಿ ಬೆಂಕಿ ಇಟ್ಟರು!

ಶಿವಮೊಗ್ಗ: ಸೋಂಕಿತನ ಶವಕ್ಕೆ ಎರಡು ಬಾರಿ ಬೆಂಕಿ ಇಟ್ಟರು!

ಮತ್ತೆ ಮೂವರಿಗೆ ಪ್ಲಾಸ್ಮಾ ಥೆರಪಿ: ಇಬ್ಬರು ಗುಣಮುಖ

ಮತ್ತೆ ಮೂವರಿಗೆ ಪ್ಲಾಸ್ಮಾ ಥೆರಪಿ: ಇಬ್ಬರು ಗುಣಮುಖ

ಆ. 18ರಿಂದ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌

ಆ. 18ರಿಂದ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌

ಅಂತಿಮ ಹಂತದಲ್ಲಿ ‘ಬ್ಲೂ ಫ್ಲ್ಯಾಗ್‌ ಬೀಚ್‌’ ಕಾಮಗಾರಿ

ಅಂತಿಮ ಹಂತದಲ್ಲಿ ‘ಬ್ಲೂ ಫ್ಲ್ಯಾಗ್‌ ಬೀಚ್‌’ ಕಾಮಗಾರಿ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

NIA ಅಧಿಕಾರಿಗಳ ಬಲೆಗೆ ಸ್ವಪ್ನಾ ಸುರೇಶ್‌!

NIA ಅಧಿಕಾರಿಗಳ ಬಲೆಗೆ ಸ್ವಪ್ನಾ ಸುರೇಶ್‌!

ಭಾರತದೊಳಕ್ಕೆ ನುಸುಳಲು ಗಡಿಯಲ್ಲಿ ಪಾಕ್ ಬೆಂಬಲಿತ 300 ಉಗ್ರರ ಠಿಕಾಣಿ: ಸೇನೆ

ಭಾರತದೊಳಕ್ಕೆ ನುಸುಳಲು ಗಡಿಯಲ್ಲಿ ಪಾಕ್ ಬೆಂಬಲಿತ 300 ಉಗ್ರರ ಠಿಕಾಣಿ: ಸೇನೆ

ಥಾಣೆಯಲ್ಲಿ ವಿಕಾಸ್ ದುಬೆಯ ಇಬ್ಬರು ಆಪ್ತ ಸಹಚರರು ದಯಾ ನಾಯಕ್ ತಂಡದ ಬಲೆಗೆ

ಥಾಣೆಯಲ್ಲಿ ವಿಕಾಸ್ ದುಬೆಯ ಇಬ್ಬರು ಆಪ್ತ ಸಹಚರರು ದಯಾ ನಾಯಕ್ ತಂಡದ ಬಲೆಗೆ

ಅರುಣಾಚಲ ಪ್ರದೇಶ; ಅಸ್ಸಾಂ ರೈಫಲ್ಸ್ ಯೋಧರ ಎನ್ ಕೌಂಟರ್-6 ನಾಗಾ ಬಂಡುಕೋರರ ಸಾವು

ಅರುಣಾಚಲ ಪ್ರದೇಶ; ಅಸ್ಸಾಂ ರೈಫಲ್ಸ್ ಯೋಧರ ಎನ್ ಕೌಂಟರ್-6 ನಾಗಾ ಬಂಡುಕೋರರ ಸಾವು

ಒಂದೇ ಮಂಟಪದಲ್ಲಿ ಇಬ್ಬರಿಗೆ ತಾಳಿ ಕಟ್ಟಿದ!

ಒಂದೇ ಮಂಟಪದಲ್ಲಿ ಇಬ್ಬರಿಗೆ ತಾಳಿ ಕಟ್ಟಿದ!

MUST WATCH

udayavani youtube

Dragon Fruit ಬೆಳೆದು ಯಶಸ್ವಿಯಾದ ರೈತ | Successful Farmer Vegetable | Udayavani

udayavani youtube

ವಿಶ್ವಾದ್ಯಂತ COVID-19 ಸ್ಥಿತಿಗತಿ & Vaccine ಪ್ರಗತಿ | Udayavani Straight Talk

udayavani youtube

Covid Bus Basin : A new invention by students of SMVIT College Bantakal

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

ಹೊಸ ಸೇರ್ಪಡೆ

ನೋಟಿಸ್‌ ಜಾರಿ: ಆಕ್ಷೇಪಣೆಗೆ ಸೂಚನೆ

ನೋಟಿಸ್‌ ಜಾರಿ: ಆಕ್ಷೇಪಣೆಗೆ ಸೂಚನೆ

ಕೋವಿಡ್ ತೀವ್ರತೆಗೆ ಮಹಾನಗರ ತಲಣ!

ಕೋವಿಡ್ ತೀವ್ರತೆಗೆ ಮಹಾನಗರ ತಲಣ!

ಟೀಂ ಇಂಡಿಯಾ ಮಾಜಿ ಆಟಗಾರನಿಗೂ ಕಾಡಿದ ಕೋವಿಡ್-19 ಸೋಂಕು

ಟೀಂ ಇಂಡಿಯಾ ಮಾಜಿ ಆಟಗಾರನಿಗೂ ಕಾಡಿದ ಕೋವಿಡ್-19 ಸೋಂಕು

donald-trumph

ಇದೇ ಮೊದಲ ಬಾರಿಗೆ ಮಾಸ್ಕ್ ಧರಿಸಿದ ಡೊನಾಲ್ಡ್ ಟ್ರಂಪ್: ಸೇನಾ ಆಸ್ಪತ್ರೆಗೆ ಭೇಟಿ !

amitab-bacchan

ಅಮಿತಾಬ್ ಬಚ್ಚನ್ ಹಾಗೂ ಪುತ್ರ ಅಭಿಷೇಕ್ ಬಚ್ಚನ್ ಗೂ ಕೋವಿಡ್ ಸೋಂಕು ದೃಢ, ಆಸ್ಪತ್ರೆಗೆ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.