ವಿವಾದಿತ ಜಾಗದಲ್ಲಿ ಮಂದಿರವಿತ್ತು

Team Udayavani, Aug 14, 2019, 5:20 AM IST

ನವದೆಹಲಿ: ಸುಪ್ರೀಂ ಕೋರ್ಟ್‌ನಲ್ಲಿ ಮಂಗಳವಾರ ನಡೆದ, ರಾಮಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ಭೂವಿವಾದ ಪ್ರಕರಣದ 5ನೇ ದಿನದ ವಿಚಾರಣೆ ವೇಳೆ, ಅಯೋಧ್ಯೆಯ ವಿವಾದಿತ ಪ್ರದೇಶದಲ್ಲಿ ಮೊದಲು ದೇಗುಲವಿತ್ತು. ಅದನ್ನು ಕೆಡವಿ ಅಲ್ಲಿ ಮಸೀದಿ (ಬಾಬ್ರಿ ಮಸೀದಿ) ನಿರ್ಮಿ ಸಲಾಗಿತ್ತು ಎಂದು ಪ್ರಕರಣದ ಪ್ರಮುಖ ಕಕ್ಷಿದಾರರಾದ ರಾಮ ಲಲ್ಲಾ ವಿರಾಜ್‌ಮಾನ್‌ ಪರ ವಕೀಲರು ವಾದಿಸಿದರು.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯ ಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಪೀಠದ ಮಂದೆ ಈ ವಿಚಾರ ಪ್ರಸ್ತಾಪಿಸಿದ ಹಿರಿಯ ವಕೀಲ ಸಿ.ಎಸ್‌. ವೈದ್ಯ ನಾಥನ್‌, ವಿವಾದಿದ ಸ್ಥಳದಲ್ಲಿ ದೇಗುಲವಿ ದ್ದುದ್ದನ್ನು ಇದೇ ಪ್ರಕರಣದಲ್ಲಿ ತೀರ್ಪು ನೀಡಿದ್ದ ಅಲಹಾಬಾದ್‌ ಹೈಕೋರ್ಟ್‌ನ ನ್ಯಾಯ ಮೂರ್ತಿ ಎಸ್‌.ಯು. ಖಾನ್‌ ಕೂಡ ಉಲ್ಲೇ ಖೀಸಿದ್ದರು ಎಂದು ತಿಳಿಸಿದರು.

‘ನಾನು ಶ್ರೀರಾಮನ ವಂಶಸ್ಥ’
ರಾಜಸ್ಥಾನದ ಮೇವಾಡ ರಾಜಮನೆತನದವರಾದ ಅರವಿಂದ್‌ ಸಿಂಗ್‌ ಮೇವಾಡ್‌ ಎಂಬುವರು, ತಮ್ಮನ್ನು ತಾವು ಶ್ರೀರಾಮನ ವಂಶಸ್ಥರು ಎಂದು ಟ್ವೀಟ್ ಮಾಡಿದ್ದಾರೆ. ಶುಕ್ರವಾರ ನಡೆದ ರಾಮಜನ್ಮಭೂಮಿ ಪ್ರಕರಣದ ವಿಚಾರಣೆ ವೇಳೆ, ಸುಪ್ರೀಂ ಕೋರ್ಟ್‌ನ ನ್ಯಾಯ ಪೀಠ, ಭಾರತದಲ್ಲಿ ಯಾರಾದರೂ ಶ್ರೀರಾಮನ( ರಘುವಂಶಸ್ಥರು) ವಂಶಸ್ಥರಿದ್ದಾರೆಯೇ ಎಂದು ಕೇಳಿತ್ತು. ಈ ಹಿನ್ನೆಲೆಯಲ್ಲಿ, ಟ್ವೀಟ್ ಮಾಡಿರುವ ಸಿಂಗ್‌, ನಮಗೆ ರಾಮಜನ್ಮಭೂಮಿಯ ಮೇಲೆ ಹಕ್ಕು ಸಾಧಿಸುವ ಆಸೆಯೇನೂ ಇಲ್ಲ. ಆದರೆ, ವಿವಾದಿತ ಪ್ರದೇಶದಲ್ಲಿ ರಾಮನ ದೇಗುಲ ನಿರ್ಮಾಣವಾಗ ಬೇಕೆಂಬುದೇ ನಮ್ಮ ಅಭಿಲಾಷೆ ಎಂದಿದ್ದಾರೆ. ಮೂರು ದಿನಗಳ ಹಿಂದೆ, ಬಿಜೆಪಿ ಸಂಸದೆ ಹಾಗೂ ಜೈಪುರ ರಾಜವಂಶಸ್ಥೆ ದಿಯಾ ಕುಮಾರಿ, ‘ತಮ್ಮ ಕುಟುಂಬ ಶ್ರೀರಾಮನ ಪುತ್ರ ಕುಶನಿಂದ ಮುಂದುವರಿದ ಸಂತತಿ’ ಎಂದಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ