ಕಾಂಗ್ರೆಸ್ ತನ್ನ ಪ್ರೀತಿಯ ಅರ್ಥಕೋಶದಿಂದ ನನ್ನನ್ನು ಮೂರ್ಖ ಪ್ರಧಾನಿ ಎಂದಿತ್ತು: ಮೋದಿ
Team Udayavani, May 8, 2019, 6:01 PM IST
ಹೊಸದಿಲ್ಲಿ : 2014ರಲ್ಲಿ ನಾನು ಪ್ರಧಾನಿಯಾದ ದಿನದಿಂದಲೇ ಕಾಂಗ್ರೆಸ್ ಪಕ್ಷ ತನ್ನ ಪ್ರೀತಿಯ ಅರ್ಥಕೋಶದಿಂದ ನನ್ನನ್ನು ಹೀಯಾಳಿಸುತ್ತಾ, ಮೂದಲಿಸುತ್ತಾ ಬಂದಿದ್ದು ಅದು ನನ್ನನ್ನು ‘ಮೂರ್ಖ ಪ್ರಧಾನಿ’ ಎಂದು ಕೂಡ ಕರೆದಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದಿಲ್ಲಿ ನಡೆದ ಚುನಾವಣಾ ರಾಲಿಯಲ್ಲಿ ಹೇಳಿದರು.
ಕಾಂಗ್ರೆಸ್ ನೇತಾರ, ಮಾಜಿ ದಿವಂಗತ ಪ್ರಧಾನಿ ರಾಜೀವ್ ಗಾಂಧಿಯನ್ನು ಭ್ರಷ್ಟಾಚಾರಿ ನಂಬರ್ 1 ಎಂದು ಮೋದಿ ಹೇಳಿರುವುದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ, “ನಿಮ್ಮ ದ್ವೇಷಕ್ಕೆ ನಾವು ಪ್ರತಿಯಾಗಿ ನಿಮಗೆ ಪ್ರೀತಿ ಮತ್ತು ಆಲಿಂಗನವನ್ನು ಮಾತ್ರವೇ ಕೊಡಬಲ್ಲೆವು’ ಎಂದು ಹೇಳಿದ್ದರು.
ಇದಕ್ಕೆ ಉತ್ತರವೆಂಬಂತೆ ಮಾತನಾಡಿದ ಪ್ರಧಾನಿ ಮೋದಿ, “ನಾನು ಪ್ರಧಾನಿಯಾದ ದಿನದಿಂದಲೇ ಕಾಂಗ್ರೆಸ್ ನೇತಾರರು ಎಲ್ಲ ಘನತೆ, ಗೌರವ, ಮರ್ಯಾದೆಗಳನ್ನು ಮರೆತು ನನ್ನನ್ನು ಅತ್ಯಂತ ತುಚ್ಚವಾಗಿ ಹೀಯಾಳಿಸಿದ್ದಾರೆ. ಅವರ ಪ್ರೀತಿಯ ಅರ್ಥಕೋಶದಿಂದ ಅವರು ನನನ್ನು ಗದ್ದಾಫಿ, ಮುಸಲೋನಿ, ಹಿಟ್ಲರ್ ಎಂದು ಕರೆದಿದ್ದಾರೆ; ನಾನು ಮಾನಸಿಕವಾಗಿ ಅಸ್ಥಿರನೆಂದೂ ಜರೆದಿದ್ದಾರೆ ಮತ್ತು ನಾನು ಪ್ರಧಾನಿಯಾದಂದಿನಿಂದಲೂ ನನ್ನ ಮೇಲೆ ಈ ರೀತಿಯ ಪ್ರೀತಿಯ ಹೂ ಮಳೆ ಸುರಿಸುತ್ತಾ ಬಂದಿದ್ದಾರೆ’ ಎಂದು ಮೋದಿ ವ್ಯಂಗ್ಯವಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ