ಅರಿವಿಲ್ಲದೆ ದತ್ತಾಂಶ ಸೋರಿಕೆ
Team Udayavani, Mar 22, 2018, 6:00 AM IST
ಹೊಸದಿಲ್ಲಿ: ಫೇಸ್ಬುಕ್ ಖಾತೆಗಳಿಂದ ಜನರ ವೈಯಕ್ತಿಕ ಮಾಹಿತಿ ಸೋರಿಕೆಯಾಗುತ್ತಿವೆ ಎಂಬ ವಿಚಾರ ಜಗತ್ತಿನ ಎಲ್ಲಾ ಫೇಸ್ಬುಕ್ ಪ್ರಿಯರನ್ನು ಬೆಚ್ಚಿಬೀಳಿಸಿದೆ. ಇದು ಹೇಗಾಗುತ್ತೆ, ಇದರ ನಿಯಂತ್ರಣ ಹೇಗೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ಮಾಹಿತಿ ಕದಿಯುವ ಆ್ಯಪ್ಗ್ಳು: ಕೆಲ ಹೊಸ ಆ್ಯಪ್ಗ್ಳನ್ನು ಡೌನ್ಲೋಡ್ ಮಾಡಿಕೊಂಡಾಗ ಆ ಆ್ಯಪ್ಗ್ಳಿಗೆ ಫೇಸ್ಬುಕ್ ಅಥವಾ ಗೂಗಲ್ ಖಾತೆಗಳ ಮೂಲಕ ಲಾಗಿನ್ ಆಗಲು ಕೇಳುತ್ತವೆ. ಹಾಗೆ, ಫೇಸ್ ಬುಕ್ ಮೂಲಕ ಆ ಆ್ಯಪ್ಗೆ ಲಗ್ಗೆಯಿಟ್ಟರೆ ಸಾಕು, ನಮ್ಮ ಪೂರ್ಣ ಹೆಸರು, ವಯಸ್ಸು, ವಾಸಿಸುವ ಪ್ರದೇಶ, ಯೂಸರ್ ಐಡಿ, ನಮ್ಮ ಸ್ನೇಹಿತರ ಪಟ್ಟಿ ನಮ್ಮ ಅರಿವಿಗೆ ಬಾರದಂತೆ ಅವರ ಕೈ ಸೇರುತ್ತದೆ.
ಫೇಸ್ಬುಕ್ ಖಾತೆ ಡಿಆ್ಯಕ್ಟಿವೇಟ್ ಮಾಡಲು
1. ಫೇಸ್ಬುಕ್ನ ಅಕೌಂಟ್ ಮೆನುವಿಗೆ ಹೋಗಿ.
2. ಅಕೌಂಟ್ ಸೆಟ್ಟಿಂಗ್ಸ್ ಆಯ್ಕೆ ಮಾಡಿ
3. ಜನರಲ್ ಆಯ್ಕೆ ಮಾಡಿ
4. ಮ್ಯಾನೇಜ ಅಕೌಂಟ್ ಆಯ್ಕೆ ಮಾಡಿ
5. ಡಿಆ್ಯಕ್ಟಿವೇಟ್ ಕ್ಲಿಕ್ ಮಾಡಿ.
6. ಮತ್ತೆ ಆ್ಯಕ್ಟಿವೇಟ್ ಮಾಡಿಕೊಳ್ಳಲು ಎಂದಿನಂತೆ ಲಾಗಿನ್ಆಗಬಹುದು.
ನಿಯಂತ್ರಣ ಹೇಗೆ?
ಸೆಟ್ಟಿಂಗ್ಸ್ಗೆ ಹೋಗಿ ಅಲ್ಲಿ ಆ್ಯಪ್ಸ್ ಆಯ್ಕೆ ಮಾಡಿಕೊಳ್ಳಿ.
ಆ್ಯಪ್ಸ್ ಪಟ್ಟಿಯ ಪ್ರತಿ ಆ್ಯಪ್ ಕ್ಲಿಕ್ ಮಾಡಿ ಅವುಗಳ ಪರ್ಮಿಷನ್ ಪರಿಶೀಲಿಸಿ.
ಗ್ಯಾಲರಿ ಇನ್ನಿತರ ವಿಭಾಗಗಳಿಗೆ ಲಗ್ಗೆ ಹಾಕಲು ಅವುಗಳಿಗೆ ಅನುಮತಿ ಇದ್ದರೆ ಅದನ್ನು ಡಿಸೇಬಲ್ ಮಾಡಿ.
ಆ್ಯಪ್ ಬೇಡವೆನಿಸಿದರೆ ಅನ್ಇನ್ಸ್ ಟಾಲ್ ಮಾಡಬಹುದು.