ನೂತನ ಕೃಷಿ ನೀತಿ: ಪಾಟ್ನಾದಲ್ಲಿ ಸಾವಿರಾರು ಮಂದಿ ಪ್ರತಿಭಟನೆ, ಲಾಠಿಚಾರ್ಜ್, ಘರ್ಷಣೆ
ಬ್ಯಾರಿಕೇಡ್ ಅನ್ನು ಮುರಿಯಲು ಯತ್ನಿಸಿದಾಗ ಪೊಲೀಸರು ಲಾಠಿಚಾರ್ಜ್ ನಡೆಸಿದ್ದು ಘರ್ಷಣೆಗೆ ಕಾರಣ
Team Udayavani, Dec 29, 2020, 3:57 PM IST
ಪಾಟ್ನಾ:ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ನೂತನ ಕೃಷಿ ನೀತಿಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ಪಾಟ್ನಾದಲ್ಲಿ ರೈತ ಸಂಘಟನೆ ಮತ್ತು ಎಡಪಕ್ಷಗಳ ಕಾರ್ಯಕರ್ತರು ಮಂಗಳವಾರ (ಡಿಸೆಂಬರ್ 29) ರಾಜಭವನ ಚಲೋ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಗುಂಪನ್ನು ಚದುರಿಸಲು ಲಾಠಿಚಾರ್ಜ್ ನಡೆಸಿದ ಘಟನೆ ನಡೆದಿದೆ.
ರಾಜಭವನದತ್ತ ರೈತರ ನಡಿಗೆ ಎಂಬ ಪ್ರತಿಭಟನಾ ಜಾಥಾವನ್ನು ಅಖಿಲ ಭಾರತೀಯ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಹಾಗೂ ಇತರ ಎಡಪಕ್ಷದ ಸಂಘಟನೆಗಳು ಆಯೋಜಿಸಿದ್ದವು.
ಮಂಗಳವಾರ ಮಧ್ಯಾಹ್ನ ಗಾಂಧಿ ಮೈದಾನದಲ್ಲಿ ಎಡಪಕ್ಷದ ಸಾವಿರಾರು ಕಾರ್ಯಕರ್ತರು ಆಗಮಿಸಿದ್ದು, ಅಲ್ಲಿಂದ ಜಾಥಾ ಹೊರಟಿದ್ದರು. ಆದರೆ ಡಾಕ್ ಬಂಗ್ಲೊ ಚೌಕದ ಸಮೀಪ ಪೊಲೀಸರು ಜಾಥಾವನ್ನು ತಡೆದಿದ್ದರು. ರಾಜಭವನದತ್ತ ತೆರಳದಂತೆ ತಡೆಯುವ ನಿಟ್ಟಿನಲ್ಲಿ ಪೊಲೀಸರು ಬ್ಯಾರಿಕೇಡ್ ಇಟ್ಟಿರುವುದಾಗಿ ವರದಿ ತಿಳಿಸಿದೆ. ಪ್ರತಿಭಟನಾಕಾರರು ಬ್ಯಾರಿಕೇಡ್ ಅನ್ನು ಮುರಿಯಲು ಯತ್ನಿಸಿದಾಗ ಪೊಲೀಸರು ಲಾಠಿಚಾರ್ಜ್ ನಡೆಸಿದ್ದು ಘರ್ಷಣೆಗೆ ಕಾರಣವಾಗಿರುವುದಾಗಿ ವರದಿ ಹೇಳಿದೆ.
ಇದನ್ನೂ ಓದಿ:ಭಾರೀ ಹಿಮಗಾಳಿ: ದೆಹಲಿ ನಿವಾಸಿಗಳಿಗೆ ಆರೆಂಜ್ ಅಲರ್ಟ್, ಪಂಜಾಬ್ ಗೆ ರೆಡ್ ಅಲರ್ಟ್ ಘೋಷಣೆ
ಕಳೆದ ಒಂದು ತಿಂಗಳಿನಿಂದ ದೆಹಲಿ ಗಡಿಪ್ರದೇಶದಲ್ಲಿ ಪಂಜಾಬ್, ಹರ್ಯಾಣ ರೈತರು ಕಾಯ್ದೆಯನ್ನು ರದ್ದುಗೊಳಿಸಬೇಕೆಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರ ಜತೆಗೆ ನಡೆದ ಐದು ಸುತ್ತಿನ ಮಾತುಕತೆ ವಿಫಲಗೊಂಡಿತ್ತು. ಏತನ್ಮಧ್ಯೆ ರೈತರ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಡಿಸೆಂಬರ್ 30ರಂದು ಮತ್ತೆ ರೈತ ಮುಖಂಡರನ್ನು ಕೇಂದ್ರ ಸರ್ಕಾರ ಮಾತುಕತೆಗೆ ಆಹ್ವಾನಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬೈ-ಪುಣೆ ಎಕ್ಸ್ಪ್ರೆಸ್ವೇ: ಬಸ್ಗೆ ಕಾರು ಢಿಕ್ಕಿ; ಎನ್ಸಿಪಿ ಶಾಸಕ ಸಂಗ್ರಾಮ್ ಪಾರು
ಅಮರನಾಥ ಯಾತ್ರೆ ಭದ್ರತಾ ವ್ಯವಸ್ಥೆ: 2 ಮಹತ್ವದ ಸಭೆ ನಡೆಸಿದ ಅಮಿತ್ ಶಾ
2ಜಿ ಯುಗ ಭ್ರಷ್ಟಾಚಾರದ ಸಂಕೇತವಾಗಿತ್ತು, ಈಗ ಪಾರದರ್ಶಕತೆ ಇದೆ: ಪ್ರಧಾನಿ
ಜ್ಞಾನವಾಪಿ ಮಸೀದಿಯಲ್ಲಿ ಸಿಕ್ಕಿದ್ದು ಶಿವಲಿಂಗವಲ್ಲ; ಅದು ಫೌಂಟನ್: ಮಸೀದಿಯ ಆಡಳಿತ ಮಂಡಳಿ ವಾದ
ಮಾಜಿ ಕೇಂದ್ರ ಸಚಿವ ಚಿದಂಬರಂ ಆಸ್ತಿ ಮೇಲೆ ಸಿಬಿಐ ದಾಳಿ; ಪುತ್ರನ ವಿರುದ್ಧ ಹೊಸ ಕೇಸ್
MUST WATCH
ಉದ್ಘಾಟನೆಗೆ ಶಾಸಕರೇ ಬರಬೇಕಂತೆ; ಕಾಫಿನಾಡಲ್ಲಿ ರಸ್ತೆಗೆ ಬೀಗ ಹಾಕಿದ ಬಿಜೆಪಿ ಸದಸ್ಯರು!
ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ಪತ್ತೆ
ದತ್ತ ಜಯಂತಿ ಸಮಯದಲ್ಲಿ ಹೋಮದ ಹೊಗೆ.. ಬೇರೆ ಸಮಯದಲ್ಲಿ ಮಾಂಸದ ಹೊಗೆ
ಶಾಲಾ ಪ್ರಾರಂಭೋತ್ಸವ ಹಿರಿಯಡ್ಕ ಸರಕಾರಿ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳಿಗೆ ಸಂಭ್ರಮದ ಸ್ವಾಗತ
ಶಂಕರನಾರಾಯಣ : ಶಾಲಾರಂಭದ ದಿನದಂದೇ ಸರಕಾರಿ ಶಾಲೆಯಲ್ಲಿ ಪ್ರತಿಭಟನೆ ಬಿಸಿ
ಹೊಸ ಸೇರ್ಪಡೆ
ಪ್ರತಿಯೊಂದು ಸಮುದಾಯವನ್ನು ಸಂಘಟನೆ ತಲುಪಬೇಕು: ಶಾಸಕ ಸಿದ್ದು ಸವದಿ
ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗವು ನಿಖರವಾಗಿ ಎಲ್ಲಿ ಕಂಡುಬಂದಿದೆ ?: ವಿವರ ಕೇಳಿದ ಸುಪ್ರೀಂ
ದೇವದುರ್ಗ ತಾಲೂಕಲ್ಲಿ 193 ಶಿಥಿಲಗೊಂಡ ಕಟ್ಟಡ: ಮಕ್ಕಳಿಗೆ ಬಯಲಲ್ಲೇ ಪಾಠ
ಮುಂಬೈ-ಪುಣೆ ಎಕ್ಸ್ಪ್ರೆಸ್ವೇ: ಬಸ್ಗೆ ಕಾರು ಢಿಕ್ಕಿ; ಎನ್ಸಿಪಿ ಶಾಸಕ ಸಂಗ್ರಾಮ್ ಪಾರು
ಜ್ವರ ಇದ್ದಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ