ಉನ್ನಾವೋ : ವಿಷಾನಿಲ ಸೇವಿಸಿ 3 ಫ್ಯಾಕ್ಟರಿ ಕಾರ್ಮಿಕರ ಸಾವು
Team Udayavani, Jul 30, 2018, 7:27 PM IST
ಲಕ್ನೋ : ಉತ್ತರ ಪ್ರದೇಶದಲ್ಲಿ ಉನ್ನಾವೋದ ಕಾರ್ಖಾನೆಯೊಂದರಲ್ಲಿ ವಿಷಾನಿಲ ಸೇವಿಸಿ ಮೂವರು ಕಾರ್ಮಿಕರು ಮೃತಪಟ್ಟಿರುವುದಾಗಿ ವರದಿಯಾಗಿದೆ.
ಡೇರೆಗಳಿಗೆ ಬಣ್ಣ ನೀಡುವ ಕೆಲಸ ನಡೆಯುವ ಉನ್ನಾವೋದ ಸಿಂಗ್ರೋಸಿಯಲ್ಲಿನ ದುರ್ಗಾ ಇಂಟರ್ನ್ಯಾಶನಲ್ ಫ್ಯಾಕ್ಟರಿಯಲ್ಲಿ ಈ ದುರ್ಘಟನೆ ನಡೆಯಿತು.
ಮೂವರು ಕಾರ್ಮಿಕರು ಬಣ್ಣಗಳನ್ನು ಮಿಶ್ರ ಮಾಡುವ ಟ್ಯಾಕ್ನೊಳಗೆ ಇಳಿದು ಅದರ ನೋಝಲ್ ದುರಸ್ತಿ ಮಾಡುವಾಗ ಅವರು ಕೊಳಕು ನೀರಿನಿಂದ ಹೊರಟ ವಿಷಾನಿಲದ ಸಂಪರ್ಕಕ್ಕೆ ಬಂದರು. ಅವರ ನೆರವಿಗೆ ಮುಂದಾಗುವ ಮುನ್ನವೇ ಅವರು ವಿಷಾನಿಲ ಸೇವಿಸಿ ಮೃತಪಟ್ಟರೆಂದು ವರದಿಗಳು ತಿಳಿಸಿವೆ.