Udayavni Special

ಖದೀಮರಿಂದ SBI ನಕಲಿ ಶಾಖೆ! ; ತಮಿಳುನಾಡಿನಲ್ಲಿ ಪ್ರಕರಣ

ಮಾಜಿ ಉದ್ಯೋಗಿ ಪುತ್ರನಿಂದಲೇ ಕೃತ್ಯ

Team Udayavani, Jul 12, 2020, 7:23 PM IST

ಖದೀಮರಿಂದ SBI ನಕಲಿ ಶಾಖೆ! ; ತಮಿಳುನಾಡಿನಲ್ಲಿ ಪ್ರಕರಣ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಚೆನ್ನೈ: ತಮಿಳುನಾಡಿನ ಕಡಲೂರು ಜಿಲ್ಲೆಯ ಪನ್ರುತಿ ಎಂಬಲ್ಲಿ ಮೂವರು ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದ (ಎಸ್‌ಬಿಐ) ನಕಲಿ ಶಾಖೆಯೊಂದನ್ನು ತೆರೆದು ಕಾರ್ಯಾಚರಿಸುತ್ತಿದ್ದ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ.

ಪ್ರಕರಣ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದು, ಬಂಧಿತರಲ್ಲಿ ಒಬ್ಬ ಎಸ್‌ಬಿಐ ಬ್ಯಾಂಕ್‌ನ ಮಾಜಿ ಉದ್ಯೋಗಿಯ ಪುತ್ರ ಎಂಬುದು ತಿಳಿದುಬಂದಿದೆ.

ಬ್ಯಾಂಕ್‌ನ ಮಾಜಿ ಉದ್ಯೋಗಿಯ ಪುತ್ರ ಕಮಲ್‌ ಬಾಬು(19) ಎಂಬಾತ ಎ.ಕುಮಾರ್‌(42) ಮತ್ತು ಎಂ. ಮಣಿಕಮ್ ‌(52) ಎಂಬವರೊಂದಿಗೆ ಸೇರಿ ಈ ವಂಚನೆ ಎಸಗಿದ್ದಾನೆ. ದೇಶ ವ್ಯಾಪಿ ಲಾಕ್‌ಡಾನ್‌ ಜಾರಿಯಲ್ಲಿದ್ದ ಏಪ್ರಿಲ್‌ನಲ್ಲೇ ಇವರು ನಕಲಿ ಬ್ಯಾಂಕ್‌ ಶಾಖೆ ಆರಂಭಿಸಿದ್ದು, ಯಾರಿಗೂ ಅನುಮಾನ ಬರಲಿಕ್ಕಿಲ್ಲ ಎಂದು ಭಾವಿಸಿದ್ದರು. ಕಮಲ್‌ಬಾಬು ಹೊಸ ಶಾಖೆಗೆ ಕಂಪ್ಯೂಟರ್‌ಗಳು, ಲಾಕರ್‌ಗಳು, ಚಲನ್‌ ಮತ್ತು ನಕಲಿ ದಾಖಲೆಗಳನ್ನು ತಂದಿದ್ದ. ಪನ್ರುತಿ ಬಜಾರ್‌ ಶಾಖೆಯ ಹೆಸರಲ್ಲಿ ವೆಬ್‌ಸೈಟ್‌ ಕೂಡ ರಚಿಸಲಾಗಿತ್ತು.

ಬ್ಯಾಂಕ್‌ನ ಒಳಹೊರಗು ಗೊತ್ತಿತ್ತು: ಬಾಬುವಿನ ಹೆತ್ತವರು ಎಸ್‌ಬಿಐ ಮಾಜಿ ಉದ್ಯೋಗಿಗಳಾಗಿದ್ದ ಕಾರಣ, ಬಾಲ್ಯದಿಂದಲೇ ಆತ ಬ್ಯಾಂಕಿ ನಲ್ಲಿ ಅಡ್ಡಾಡುತ್ತಿದ್ದ. ಹೀಗಾಗಿ ಅಲ್ಲಿನ ಕಾರ್ಯಾ ಚರಣೆ, ಎಲ್ಲಿ- ಏನಿರುತ್ತದೆ ಎಂಬ ಪ್ರತಿಯೊಂದು ಮಾಹಿತಿಯೂ ಅವನ ಮನಸ್ಸಲ್ಲಿ ಅಚ್ಚೊತ್ತಿತ್ತು. ಕೆಲ ವರ್ಷಗಳ ಹಿಂದೆ ಆತನ ತಂದೆ ನಿಧನರಾಗಿದ್ದು, ತಾಯಿಯೂ ನಿವೃತ್ತರಾದರು. ತಂದೆಯ ಹುದ್ದೆಗಾಗಿ ಬಾಬು ಅರ್ಜಿ ಸಲ್ಲಿಸಿದ್ದನಾದರೂ, ಅದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಇದರಿಂದ ಹತಾಶನಾಗಿ ತಾನೇ ಬ್ಯಾಂಕ್‌ ಶಾಖೆ ತೆರೆಯಲು ನಿರ್ಧರಿಸಿದ್ದ. ಈ ಶಾಖೆಯಲ್ಲಿ ವಂಚನೆಗೀಡಾದ ಬಗ್ಗೆ ಯಾವೊಬ್ಬ ಗ್ರಾಹಕನಿಂದಲೂ ದೂರು ಬಂದಿಲ್ಲ. ಆದರೆ, ಬಾಬುವಿನ ತಾಯಿ ಮತ್ತು ಚಿಕ್ಕಮ್ಮನ ಖಾತೆಗಳಲ್ಲಿ ಭಾರೀ ವಹಿವಾಟು ನಡೆದಿರುವುದು ಬೆಳಕಿಗೆ ಬಂದಿದ್ದು, ತನಿಖೆ ನಡೆಸಲಾಗುತ್ತಿದೆ.

ಸಿಕ್ಕಿಬಿದ್ದಿದ್ದು ಹೇಗೆ?
ಇತ್ತೀಚೆಗೆ ಅದೇ ನಗರದಲ್ಲಿದ್ದ ನೈಜ ಶಾಖೆಗೆ ಹೋಗಿದ್ದ ಎಸ್‌ಬಿಐ ಗ್ರಾಹಕರೊಬ್ಬರು, ಅಲ್ಲಿನ ಮ್ಯಾನೇಜರ್‌ ಬಳಿ ಹೊಸ ಶಾಖೆಯ ಕುರಿತು ಮಾಹಿತಿ ನೀಡಿದ್ದರು. ಅಲ್ಲದೆ ನಕಲಿ ಶಾಖೆಯಲ್ಲಿ ಪಡೆದಿದ್ದ ರಶೀದಿಯನ್ನೂ ತೋರಿಸಿದ್ದರು. ಅನುಮಾನ ಬಂದ ಮ್ಯಾನೇಜರ್‌ ಇತರೆ ಅಧಿಕಾರಿಗಳ ಜತೆಗೂಡಿ ಆ ಶಾಖೆಗೆ ಭೇಟಿ ನೀಡಿದಾಗ ಸತ್ಯ ಬಯಲಾಯಿತು. ಆದರೆ, ನಕಲಿ ಶಾಖೆಯನ್ನು ಅಸಲಿ ಬ್ಯಾಂಕ್‌ ಶಾಖೆ ಹೇಗಿರುತ್ತದೋ ಅದೇ ಮಾದರಿಯಲ್ಲಿ ಸ್ವಲ್ಪವೂ ಅನುಮಾನ ಬಾರದಂತೆ ರೂಪಿಸಿದ್ದು ನೋಡಿ ಆ ಅಧಿಕಾರಿಗಳೇ ಚಕಿತರಾಗಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಹಾಸನ ಕೋವಿಡ್ ಸೋಂಕಿಗೆ ಇಬ್ಬರು ಬಲಿ! 131 ಹೊಸ ಪ್ರಕರಣ ದೃಢ

ಹಾಸನ ಕೋವಿಡ್ ಸೋಂಕಿಗೆ ಇಬ್ಬರು ಬಲಿ! 131 ಹೊಸ ಪ್ರಕರಣ ದೃಢ

Photo’s: ಕನಸು ನನಸು: ಅಯೋಧ್ಯೆಯಲ್ಲಿನ ಶಿಲಾನ್ಯಾಸ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದು ಹೀಗೆ

Photo’s: ಕನಸು ನನಸು: ಅಯೋಧ್ಯೆಯಲ್ಲಿನ ಶಿಲಾನ್ಯಾಸ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದು ಹೀಗೆ

ಆಸ್ಪತ್ರೆಯಿಂದಲೇ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮ ವೀಕ್ಷಿಸಿದ ಬಿಎಸ್ ವೈ

ಆಸ್ಪತ್ರೆಯಿಂದಲೇ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮ ವೀಕ್ಷಿಸಿದ ಬಿಎಸ್ ವೈ

ಖ್ಯಾತ, ಬಹುಭಾಷಾ ಹಿನ್ನೆಲೆ ಗಾಯಕ ಎಸ್ ಪಿ ಬಾಲಸುಬ್ರಣ್ಯಂಗೆ ಕೋವಿಡ್ 19 ಸೋಂಕು

ಖ್ಯಾತ, ಬಹುಭಾಷಾ ಹಿನ್ನೆಲೆ ಗಾಯಕ ಎಸ್ ಪಿ ಬಾಲಸುಬ್ರಣ್ಯಂಗೆ ಕೋವಿಡ್ 19 ಸೋಂಕು

ಪ್ರತಿಯೊಬ್ಬನಲ್ಲಿಯೂ ರಾಮನಿದ್ದಾನೆ, ಎಲ್ಲಾ ಸ್ಥಳಗಳಲ್ಲಿಯೂ ರಾಮನಿದ್ದಾನೆ: ಪ್ರಧಾನಿ ಮೋದಿ

ಟೆಂಟ್ ನಲ್ಲಿದ್ದ ರಾಮ್ ಲಲ್ಲಾನಿಗೆ ಬೃಹತ್ ರಾಮಮಂದಿರ ನಿರ್ಮಾಣವಾಗಲಿದೆ: ಪ್ರಧಾನಿ ಮೋದಿ

ramesh

UPSC: 646ನೇ ರ‍್ಯಾಂಕ್ ಪಡೆದ ರಮೇಶ್ ಗುಮಗೇರಿಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅಭಿನಂದನೆ

Ayodhya-bhoomi-pujan-696×392

ಹಬ್ಬದ ಸಡಗರದಲ್ಲಿದ್ದ ಅಯೋಧ್ಯೆ ನಿನ್ನೆ ರಾತ್ರಿ ನಿದ್ರಿಸಲೇ ಇಲ್ಲ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಷ್ಟು ವರ್ಷ ಕಾದದ್ದಕ್ಕೆ ಸಾರ್ಥಕವಾಯಿತು:ಆಡ್ವಾಣಿ

ಇಷ್ಟು ವರ್ಷ ಕಾದದ್ದಕ್ಕೆ ಸಾರ್ಥಕವಾಯಿತು:ಆಡ್ವಾಣಿ

ಹರಿದು ಬರುತ್ತಿದೆ ದೇಣಿಗೆಯ ಮಹಾಪೂರ!

ಹರಿದು ಬರುತ್ತಿದೆ ದೇಣಿಗೆಯ ಮಹಾಪೂರ!

ಕಣಿವೆ ನಾಡಿನ ಕಥೆ ಬದಲಿಸಿದ ದಿನ; 370 ರದ್ದತಿಗೆ 1ವರ್ಷ

ಕಣಿವೆ ನಾಡಿನ ಕಥೆ ಬದಲಿಸಿದ ದಿನ; 370 ರದ್ದತಿಗೆ 1ವರ್ಷ

Old-Ayodhya-ph

1850ರಲ್ಲಿ ಅಯೋಧ್ಯೆಯಲ್ಲಿ ಮೊತ್ತ ಮೊದಲ ಗಲಭೆ; ರಾಮ, ಬಾಬರಿ ಮಸೀದಿ ಟು ಪಾಲಿಟಿಕ್ಸ್

ಧಾರಾಕಾರ ಮಳೆಗೆ ಬೆಚ್ಚಿಬಿದ್ದ ಮುಂಬಯಿ

ಧಾರಾಕಾರ ಮಳೆಗೆ ಬೆಚ್ಚಿಬಿದ್ದ ಮುಂಬಯಿ

MUST WATCH

udayavani youtube

ಮಕ್ಕಳನ್ನು ಬೆಳೆಸಬೇಡಿ; ಬೆಳೆಯಲು ಬಿಡಿ | How to Nurture a Child | Udayavani

udayavani youtube

ಆಸ್ಪತ್ರೆಯಲ್ಲೂ B. S. Yediyurappa ಕರ್ತವ್ಯ ಪ್ರಜ್ಞೆ ; ಪ್ರಮುಖ Files ಪರಿಶೀಲನೆ

udayavani youtube

MGM ಕಾಲೇಜಿನ ನವೀಕೃತ ನೂತನ ರವೀಂದ್ರ ಮಂಟಪದ ಪ್ರಾರಂಭೋತ್ಸವ | Udayavani

udayavani youtube

MALASIYAN ಹಣ್ಣುಗಳನ್ನು ಬೆಳೆದು ಯಶಸ್ಸನ್ನು ಕಂಡ Khajane Agricultural farm

udayavani youtube

ಸುಶಾಂತ್ ಸಾವಿನ ಸುತ್ತ ಅನುಮಾನದ ಹುತ್ತ | Sushant Singh Rajput Death Mysteryಹೊಸ ಸೇರ್ಪಡೆ

ಹಾಸನ ಕೋವಿಡ್ ಸೋಂಕಿಗೆ ಇಬ್ಬರು ಬಲಿ! 131 ಹೊಸ ಪ್ರಕರಣ ದೃಢ

ಹಾಸನ ಕೋವಿಡ್ ಸೋಂಕಿಗೆ ಇಬ್ಬರು ಬಲಿ! 131 ಹೊಸ ಪ್ರಕರಣ ದೃಢ

ಯೂರಿಯಾ ಪೂರೈಕೆಗೆ ಆಗ್ರಹ

ಯೂರಿಯಾ ಪೂರೈಕೆಗೆ ಆಗ್ರಹ

Photo’s: ಕನಸು ನನಸು: ಅಯೋಧ್ಯೆಯಲ್ಲಿನ ಶಿಲಾನ್ಯಾಸ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದು ಹೀಗೆ

Photo’s: ಕನಸು ನನಸು: ಅಯೋಧ್ಯೆಯಲ್ಲಿನ ಶಿಲಾನ್ಯಾಸ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದು ಹೀಗೆ

ಅಂಜನಾದ್ರಿಯಲ್ಲಿ ಹೋಮ, ಹವನ ಶ್ರೀರಾಮಹನುಮ ಭಕ್ತರ ಸಂಭ್ರಮ

ಅಂಜನಾದ್ರಿಯಲ್ಲಿ ಹೋಮ, ಹವನ ಶ್ರೀರಾಮಹನುಮ ಭಕ್ತರ ಸಂಭ್ರಮ

ಸಚಿವ ಚವ್ಹಾಣರಿಂದ ಹೋಮ-ಹವನ

ಸಚಿವ ಚವ್ಹಾಣರಿಂದ ಹೋಮ-ಹವನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.