Udayavni Special

ಮೂವರು ಉಗ್ರರ ಹತ್ಯೆ; ಡಿವೈಎಸ್‌ಪಿ, ಓರ್ವ ಯೋಧ ಹುತಾತ್ಮ


Team Udayavani, Feb 25, 2019, 12:30 AM IST

three-terrorists-killed.jpg

ಶ್ರೀನಗರ: ಜಮ್ಮು-ಕಾಶ್ಮೀರದ ಪುಲ್ವಾಮಾ ದಾಳಿಯ ಅನಂತರದ ಮಹತ್ವದ ಎನ್‌ಕೌಂಟರ್‌ ಒಂದರಲ್ಲಿ ಮೂವರು ಜೈಶ್‌-ಎ-ಮೊಹಮ್ಮದ್‌ ಉಗ್ರರನ್ನು ಹೊಡೆದುರುಳಿಸಲಾಗಿದೆ. ರವಿವಾರ ಕುಲ್ಗಾಂನಲ್ಲಿ ನಡೆದ ಈ ಎನ್‌ಕೌಂಟರ್‌ನಲ್ಲಿ  ಡಿವೈಎಸ್ಪಿ  ಹಾಗೂ ಓರ್ವ ಯೋಧ ಹುತಾತ್ಮರಾಗಿದ್ದಾರೆ. 

ಉಗ್ರರು ವಸತಿ ಪ್ರದೇಶದಲ್ಲಿ ಅಡಗಿದ್ದರು. ಸೇನೆ ಶೋಧ ಕಾರ್ಯಕ್ಕೆ ಮುಂದಾದಾಗ ಏಕಾಏಕಿ ಗುಂಡಿನ ದಾಳಿ ನಡೆಸಿದರು. ಈ ಸಂದರ್ಭ ಪೊಲೀಸ್‌ ತಂಡವನ್ನು ಮುನ್ನಡೆಸುತ್ತಿದ್ದ ಡಿವೈಎಸ್‌ಪಿ ಅಮನ್‌ ಥಾಕೂರ್‌ ಅವರ ಕತ್ತಿನ ಭಾಗಕ್ಕೆ ಗಂಭೀರ ಗಾಯವಾಯಿತು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಬದುಕಿ ಉಳಿಯಲಿಲ್ಲ. ಈ ಹಿಂದೆಯೂ ಹಲವಾರು ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಅವರ ಅಪ್ರತಿಮ ಸೇವೆಗಾಗಿ ಡಿಜಿಪಿ ಕಮೆಂಡೇಶನ್‌ ಪುರಸ್ಕಾರವನ್ನೂ ನೀಡಲಾಗಿತ್ತು.

ಈ ಎನ್‌ಕೌಂಟರ್‌ನಲ್ಲಿ ಓರ್ವ ಸೇನಾ ಮೇಜರ್‌ ಮತ್ತು ಇಬ್ಬರು ಯೋಧರಿಗೂ ಗಾಯವಾಗಿದೆ. ಹವಾಲ್ದಾರ್‌ ಸೋಮ್‌ಬೀರ್‌ ಹುತಾತ್ಮರಾಗಿದ್ದಾರೆ.

ಯೂನಿಫಾರ್ಮ್ ಕನಸಾಗಿತ್ತು
ಅಮನ್‌ ಥಾಕೂರ್‌ ಅವರು ಈ ಹಿಂದೆ ವಿವಿಧ ಕೆಲಸಗಳನ್ನು ನಿರ್ವಹಿಸಿದ್ದರು. ಆದರೆ ಅವರು ಅದನ್ನೆಲ್ಲ ಬಿಟ್ಟು ಯೂನಿಫಾರ್ಮ್ನ ಕನಸನ್ನು 2011ರಲ್ಲಿ ನನಸಾಗಿಸಿಕೊಂಡು ಪೊಲೀಸ್‌ ಅಧಿಕಾರಿಯಾಗಿದ್ದರು. 30ರ ಹರೆಯದ ಥಾಕೂರ್‌ ಯೂನಿಫಾರ್ಮ್ ಧರಿಸುವ ಮೊದಲು ಸಮಾಜ ಕಲ್ಯಾಣ ಇಲಾಖೆ ಹಾಗೂ ಅನಂತರದಲ್ಲಿ ಉನ್ನತ ವ್ಯಾಸಂಗ ನಡೆಸಿ ಸರಕಾರಿ ಕಾಲೇಜಿನ ಉಪನ್ಯಾಸಕ ರಾಗಿದ್ದರು. ಅವರು ಹೆತ್ತವರು, ಪತ್ನಿ ಮತ್ತು 6 ವರ್ಷದ ಪುತ್ರನನ್ನು ಅಗಲಿದ್ದಾರೆ.

ಟಾಪ್ ನ್ಯೂಸ್

ಇಂದು ಕೊನೆಯ ಅಭ್ಯಾಸ ಪಂದ್ಯ: ಭಾರತ-ಆಸ್ಟ್ರೇಲಿಯ ರಣತಂತ್ರ ಕೌತುಕ

ಇಂದು ಕೊನೆಯ ಅಭ್ಯಾಸ ಪಂದ್ಯ: ಭಾರತ-ಆಸ್ಟ್ರೇಲಿಯ ರಣತಂತ್ರ ಕೌತುಕ

ಅಂಗನವಾಡಿ ಕಾರ್ಯಕರ್ತೆಯರು ಉದ್ಯೋಗ ವ್ಯಾಪ್ತಿಗೆ!

ಅಂಗನವಾಡಿ ಕಾರ್ಯಕರ್ತೆಯರು ಉದ್ಯೋಗ ವ್ಯಾಪ್ತಿಗೆ!

ಈಶಾನ್ಯಕ್ಕೆ 6 ಆರು ಹೊಸ ವಾಯುಮಾರ್ಗ

ಈಶಾನ್ಯಕ್ಕೆ 6 ಆರು ಹೊಸ ವಾಯುಮಾರ್ಗ

ಆರ್ಯನ್‌ ಡ್ರಗ್‌ ಕೇಸ್‌: ಸುಪ್ರೀಂ ಮೆಟ್ಟಿಲೇರಿದ ಶಿವಸೇನೆ ನಾಯಕ

ಆರ್ಯನ್‌ ಡ್ರಗ್‌ ಕೇಸ್‌: ಸುಪ್ರೀಂ ಮೆಟ್ಟಿಲೇರಿದ ಶಿವಸೇನೆ ನಾಯಕ

ನ್ಯಾಯ ಒದಗಿಸುವಂತೆ ರೈತರಿಂದ ಆಗ್ರಹ

ನ್ಯಾಯ ಒದಗಿಸುವಂತೆ ರೈತರಿಂದ ಆಗ್ರಹ

ನೂತನ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ ವಿಂಗಡನೆ ಶುರು

ನೂತನ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ ವಿಂಗಡನೆ ಶುರು

ಪಶ್ಚಿಮ ಭಾಗದ ಹರಾಜು-ಮಾರಾಟದಲ್ಲಿ ಆದೇಶ ಉಲ್ಲಂಘನೆ

ಪಶ್ಚಿಮ ಭಾಗದ ಹರಾಜು-ಮಾರಾಟದಲ್ಲಿ ಆದೇಶ ಉಲ್ಲಂಘನೆ





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಂಗನವಾಡಿ ಕಾರ್ಯಕರ್ತೆಯರು ಉದ್ಯೋಗ ವ್ಯಾಪ್ತಿಗೆ!

ಅಂಗನವಾಡಿ ಕಾರ್ಯಕರ್ತೆಯರು ಉದ್ಯೋಗ ವ್ಯಾಪ್ತಿಗೆ!

ಈಶಾನ್ಯಕ್ಕೆ 6 ಆರು ಹೊಸ ವಾಯುಮಾರ್ಗ

ಈಶಾನ್ಯಕ್ಕೆ 6 ಆರು ಹೊಸ ವಾಯುಮಾರ್ಗ

ಆರ್ಯನ್‌ ಡ್ರಗ್‌ ಕೇಸ್‌: ಸುಪ್ರೀಂ ಮೆಟ್ಟಿಲೇರಿದ ಶಿವಸೇನೆ ನಾಯಕ

ಆರ್ಯನ್‌ ಡ್ರಗ್‌ ಕೇಸ್‌: ಸುಪ್ರೀಂ ಮೆಟ್ಟಿಲೇರಿದ ಶಿವಸೇನೆ ನಾಯಕ

ಬಾಂಗ್ಲಾ ಹಿಂದುಗಳ ರಕ್ಷಣೆಗೆ ಸಿಎಎ ಬೇಕು: ಕಾಂಗ್ರೆಸ್‌ ನಾಯಕ ಮಿಲಿಂದ್‌ ದೇವ್ರಾ!

ಬಾಂಗ್ಲಾ ಹಿಂದುಗಳ ರಕ್ಷಣೆಗೆ ಸಿಎಎ ಬೇಕು: ಕಾಂಗ್ರೆಸ್‌ ನಾಯಕ ಮಿಲಿಂದ್‌ ದೇವ್ರಾ!

100 ಕೋಟಿ ಸನಿಹಕ್ಕೆ ಲಸಿಕೆ ಅಭಿಯಾನ :  ಹೆಚ್ಚು ಲಸಿಕೆ ನೀಡಿದ ರಾಜ್ಯಗಳಲ್ಲಿ ಕರ್ನಾಟಕಕ್ಕೂ ಸ್ಥಾನ

100ಕೋಟಿ ಸನಿಹಕ್ಕೆ ಲಸಿಕೆ ಅಭಿಯಾನ :ಹೆಚ್ಚು ಲಸಿಕೆ ನೀಡಿದ ರಾಜ್ಯಗಳಲ್ಲಿ ಕರ್ನಾಟಕಕ್ಕೂ ಸ್ಥಾನ

MUST WATCH

udayavani youtube

ನಮ್ಮ ಸೇನೆಗೊಂದು ಸಲಾಂ

udayavani youtube

ಮೋದಿ ಹೆಬ್ಬೆಟ್ಟ್ ಗಿರಾಕಿ ಟ್ವಿಟ್‍ಗೆ ಶಿವಕುಮಾರ್ ವಿಷಾದ

udayavani youtube

ಗೋವಿನಲ್ಲಿ ಶ್ರೇಷ್ಠ ‘ಕಪಿಲಾ’ ಗೋವಿನ ವಿಶೇಷತೆಗಳೇನು ?

udayavani youtube

‘ಡೀಮ್ಡ್ ಫಾರೆಸ್ಟ್’ ಎಂದು ಈ ಕಾರಣಗಳಿಗೆ ಘೋಷಣೆಯಾಗುತ್ತೆ

udayavani youtube

ಚಿಂತಾಮಣಿಯಲ್ಲೊಂದು ದುರಂತ : ಕುರಿ ತೊಳೆಯಲು ಹೋದ ಮೂವರು ಯುವಕರು ನೀರು ಪಾಲು

ಹೊಸ ಸೇರ್ಪಡೆ

ಇಂದು ಕೊನೆಯ ಅಭ್ಯಾಸ ಪಂದ್ಯ: ಭಾರತ-ಆಸ್ಟ್ರೇಲಿಯ ರಣತಂತ್ರ ಕೌತುಕ

ಇಂದು ಕೊನೆಯ ಅಭ್ಯಾಸ ಪಂದ್ಯ: ಭಾರತ-ಆಸ್ಟ್ರೇಲಿಯ ರಣತಂತ್ರ ಕೌತುಕ

ಜೈಲುಗಳಲ್ಲಿ ಇನ್ನು ಸಿಬಂದಿಗೂ ಮೊಬೈಲ್‌ ನಿಷೇಧ!

ಜೈಲುಗಳಲ್ಲಿ ಇನ್ನು ಸಿಬಂದಿಗೂ ಮೊಬೈಲ್‌ ನಿಷೇಧ!

ಅ. 21ರಿಂದ ಜಿಲ್ಲೆಯಾದ್ಯಂತ ಜಾರಿ; ಮಕ್ಕಳು, ಶಿಕ್ಷಕರ ಬೆಂಬಲಕ್ಕೆ “ಶಾಲಾ ಸ್ಪಂದನ’

ಅ. 21ರಿಂದ ಜಿಲ್ಲೆಯಾದ್ಯಂತ ಜಾರಿ; ಮಕ್ಕಳು, ಶಿಕ್ಷಕರ ಬೆಂಬಲಕ್ಕೆ “ಶಾಲಾ ಸ್ಪಂದನ’

ಭಾರತೀಯ ರೆಸ್ಟೋರೆಂಟ್‌ ಮೇಲೆ ದಾಳಿ ಕೇಸ್‌ ಎಫ್ ಬಿಐಗೆ

ಭಾರತೀಯ ರೆಸ್ಟೋರೆಂಟ್‌ ಮೇಲೆ ದಾಳಿ ಕೇಸ್‌ ಎಫ್ ಬಿಐಗೆ

ಅಂಗನವಾಡಿ ಕಾರ್ಯಕರ್ತೆಯರು ಉದ್ಯೋಗ ವ್ಯಾಪ್ತಿಗೆ!

ಅಂಗನವಾಡಿ ಕಾರ್ಯಕರ್ತೆಯರು ಉದ್ಯೋಗ ವ್ಯಾಪ್ತಿಗೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.