ಗೂಗಲ್‌ ಪ್ಲೇಸ್ಟೋರ್‌ನಿಂದ ಟಿಕ್‌ ಟಾಕ್‌ ಮಾಯ

Team Udayavani, Apr 18, 2019, 6:00 AM IST

ಹೊಸದಿಲ್ಲಿ: ಟಿಕ್‌ ಟಾಕ್‌ನಲ್ಲಿ ವೀಡಿಯೋಗಳನ್ನು ಶೇರ್‌ ಮಾಡಿಕೊಳ್ಳುತ್ತಾ ಟೈಂಪಾಸ್‌ ಮಾಡುತ್ತಿದ್ದವರಿಗೆ ಇದು ಬೇಸರದ ಸುದ್ದಿ. ಜನಪ್ರಿಯ ವೀಡಿಯೋ ಶೇರಿಂಗ್‌ ಆ್ಯಪ್‌ ಟಿಕ್‌ ಟಾಕ್‌ ಇನ್ನು ಡೌನ್‌ಲೋಡ್‌ಗೆ ಲಭ್ಯವಿರುವುದಿಲ್ಲ. ಟಿಕ್‌ಟಾಕ್‌ಗೆ ನಿಷೇಧ ಹೇರಿ ಮದ್ರಾಸ್‌ ಹೈಕೋರ್ಟ್‌ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಭಾರತದ ಗೂಗಲ್‌ ಮತ್ತು ಆ್ಯಪಲ್‌ ಆ್ಯಪ್‌ ಸ್ಟೋರ್‌ಗಳಿಂದ ಟಿಕ್‌ ಟಾಕ್‌ ಅನ್ನು ತೆಗೆದುಹಾಕಲಾಗಿದೆ. ಟಿಕ್‌ ಟಾಕ್‌ ಆ್ಯಪ್‌ ಅಶ್ಲೀಲ ಚಿತ್ರಗಳಿಗೆ ಉತ್ತೇಜನ ನೀಡುತ್ತಿದ್ದು, ಮಕ್ಕಳ ಮೇಲೂ ಇದು ಪ್ರತಿಕೂಲ ಪರಿಣಾಮ ಬೀರಬಹುದು ಎಂಬ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಎ.3ರಂದೇ ಟಿಕ್‌ ಟಾಕ್‌ಗೆ ನಿಷೇಧ ಹೇರುವಂತೆ ತಮಿಳುನಾಡು ಸರಕಾರಕ್ಕೆ ಮದ್ರಾಸ್‌ ಹೈಕೋರ್ಟ್‌ ನಿರ್ದೇಶಿಸಿತ್ತು. ಅಲ್ಲದೆ ಆ್ಯಪಲ್‌ ಮತ್ತು ಗೂಗಲ್‌ಗ‌ೂ ಸರಕಾರ ಪತ್ರ ಬರೆದು, ಟಿಕ್‌ ಟಾಕ್‌ ಡೌನ್‌ಲೋಡ್‌ಗೆ ನಿಷೇಧ ಹೇರುವಂತೆ ಮನವಿ ಮಾಡಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ