ಪ್ರತೀಕಾರ; ತಂಗಿ ಮೇಲೆ ಅತ್ಯಾಚಾರ ಎಸಗಿದ ಕೈದಿಯನ್ನು ತಿಹಾರ್ ಜೈಲಿನಲ್ಲೇ ಕೊಲೆಗೈದ ಅಣ್ಣ

ಅತ್ಯಾಚಾರ ಘಟನೆಯಿಂದ ಆಘಾತಕ್ಕೊಳಗಾದ ಸಹೋದರಿ ಆತ್ಮಹತ್ಯೆಗೆ ಶರಣಾಗಿದ್ದಳು.

Team Udayavani, Jul 1, 2020, 5:34 PM IST

ತಂಗಿ ಮೇಲೆ ಅತ್ಯಾಚಾರ ಎಸಗಿದ ಕೈದಿಯನ್ನು ತಿಹಾರ್ ಜೈಲಿನಲ್ಲೇ ಕೊಲೆಗೈದ ಅಣ್ಣ

ನವದೆಹಲಿ:2014ರಲ್ಲಿ ಅಪ್ರಾಪ್ತ ಸಹೋದರಿ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿ(ಕೈದಿ)ಯನ್ನು ಪ್ರತೀಕಾರವಾಗಿ ತಿಹಾರ್ ಜೈಲಿನಲ್ಲಿಯೇ ಮತ್ತೊಬ್ಬ ಕೈದಿ ಕೊಲೆಗೈದ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ. ಈ ಘಟನೆ ಜೂನ್ 29ರಂದು ನಡೆದಿತ್ತು. ದೆಹಲಿ ಪೊಲೀಸರ ಹೇಳಿಕೆ ಪ್ರಕಾರ, ಕೊಲೆ ಆರೋಪದಲ್ಲಿ ಜೈಲು ಸೇರಿದ್ದ 22 ವರ್ಷದ ಝಾಕೀರ್ ಎಂಬ ಕೈದಿ ಮೆಹ್ತಾಬ್(28ವರ್ಷ) ಎಂಬ ಕೈದಿಗೆ ಹಲವು ಬಾರಿ ಚೂರಿಯಿಂದ ಇರಿದು ಹತ್ಯೆಗೈದಿರುವುದಾಗಿ ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆ ಪ್ರಕಾರ ತಿಹಾರ್ ಜೈಲ್ ನಂಬರ್ 8ರಲ್ಲಿದ್ದ ಕೈದಿ ಝಾಕೀರ್ ಮತ್ತೊಬ್ಬ ಕೈದಿಯಾದ ಮೆಹ್ತಾಬ್ ಗೆ ಸ್ವಯಂ ನಿರ್ಮಿತ ಚೂರಿಯಿಂದ ಇರಿದು ಹತ್ಯೆಗೈದಿದ್ದಾನೆ.

ಏನಿದು ಪ್ರತೀಕಾರ?
2014ರಲ್ಲಿ ದೆಹಲಿಯ ಅಂಬೇಡ್ಕರ್ ನಗರ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಝಾಕೀರನ ಕಿರಿಯ ಸಹೋದರಿ ಮೇಲೆ ಮೆಹ್ತಾಬ್ ಅತ್ಯಾಚಾರ ಎಸಗಿದ್ದ. ಈ ಘಟನೆ ನಂತರ ಮೆಹ್ತಾಬ್ ನನ್ನು ಪೋಕ್ಸೊ ಕಾಯ್ದೆಯಡಿ ಅಂಬೇಡ್ಕರ್ ನಗರ ಪೊಲೀಸರು ಬಂಧಿಸಿದ್ದರು. ಆ ಬಳಿಕ ಮೆಹ್ತಾಬ್ ನನ್ನು ತಿಹಾರ್ ಸೆಂಟ್ರಲ್ ಜೈಲಿಗೆ ಕಳುಹಿಸಲಾಗಿತ್ತು.

ಅತ್ಯಾಚಾರ ಘಟನೆಯಿಂದ ಆಘಾತಕ್ಕೊಳಗಾದ ಝಾಕೀರ್ ಸಹೋದರಿ ಆತ್ಮಹತ್ಯೆಗೆ ಶರಣಾಗಿದ್ದಳು. ಇದರಿಂದ ಝಾಕೀರ್ ಕೂಡಾ ತೀವ್ರವಾಗಿ ಕುಗ್ಗಿ ಹೋಗಿದ್ದ. ತನ್ನ ತಂಗಿ ಮೇಲೆ ಅತ್ಯಾಚಾರ ಎಸಗಿದವನ ಮೇಲೆ ಸೇಡು ತೀರಿಸಿಕೊಳ್ಳಲೇಬೇಕು ಎಂಬ ಹಠಕ್ಕೆ ಬಿದ್ದಿದ್ದ. ಆದರೆ ಆರೋಪಿ ತಿಹಾರ್ ಜೈಲಿನಲ್ಲಿದ್ದರಿಂದ, ಆತನ ವಿರುದ್ಧ ಸೇಡು ತೀರಿಸಿಕೊಳ್ಳಲು ಝಾಕೀರ್ ತಂತ್ರವೊಂದನ್ನು ಹೆಣೆದಿದ್ದ.

ಝಾಕೀರ್ ಕೊಲೆ ಆರೋಪದ ಪ್ರಕರಣದಲ್ಲಿ ತಿಹಾರ್ ಜೈಲು ಸೇರಿದ್ದ. ಇತ್ತೀಚೆಗಷ್ಟೇ ಝಾಕೀರ್ ನನ್ನು ಜೈಲ್ ನಂ.8ಕ್ಕೆ ಸ್ಥಳಾಂತರಿಸಲಾಗಿತ್ತು. ಈ ಹಿಂದೆ ಇದ್ದ ಜೈಲು ಕೋಣೆಯಲ್ಲಿ ಇತರ ಕೈದಿಗಳೊಂದಿಗೆ ಹೊಡೆದಾಡಿಕೊಳ್ಳುತ್ತಿದ್ದ ಝಾಕೀರ್ ಬೇರೆಡೆ ವರ್ಗಾಯಿಸಿ ಎಂದು ಮನವಿ ಮಾಡಿಕೊಂಡಿರುವುದಾಗಿ ವರದಿ ಹೇಳಿದೆ!

ಮೃತ ಕೈದಿ ಮೆಹ್ತಾಬ್ ನನ್ನು ಮೊದಲ ಮಹಡಿಯ 4ನೇ ವಾರ್ಡ ಗೆ ಸ್ಥಳಾಂತರಿಸಿದ್ದರು. ಜೂನ್ 29ರಂದು ಬೆಳಗ್ಗೆ ಪ್ರಾರ್ಥನೆಗಾಗಿ ಇತರ ಕೈದಿಗಳು ಹೊರಬಂದಿದ್ದರು. ಈ ವೇಳೆ ಆರೋಪಿ ಝಾಕೀರ್ ಮೊದಲ ಮಹಡಿಗೆ ಹೋಗಿ ಮೆಹ್ತಾಬ್ ಗೆ ಚೂರಿಯಿಂದ ಇರಿದುಬಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಕೂಡಲೇ ಮೆಹ್ತಾಬ್ ನನ್ನು ಡಿಡಿಯು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಮೆಹ್ತಾಬ್ ಸಾವನ್ನಪ್ಪಿದ್ದ. ಝಾಕೀರ್ ಮೆಹ್ತಾಬ್ ಮೇಲೆ ಸೇಡು ತೀರಿಸಿಕೊಳ್ಳುವ ಅವಕಾಶಕ್ಕಾಗಿಯೇ ಕಾಯುತ್ತಿದ್ದ. ಇದೀಗ ಝಾಕೀರ್ ವಿರುದ್ಧ ಕೊಲೆ ಮೊಕದ್ದಮೆ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಟಾಪ್ ನ್ಯೂಸ್

ಅಕ್ರಮ ಮರಳು ಗಣಿಗಾರಿಕೆ ಪ್ರದೇಶಕ್ಕೆ ಗಣಿ ಅಧಿಕಾರಿ ದಾಳಿ : ಮೂರು ದೋಣಿಗಳು ವಶಕ್ಕೆ

ಅಕ್ರಮ ಮರಳು ಗಣಿಗಾರಿಕೆ ಪ್ರದೇಶಕ್ಕೆ ಗಣಿ ಅಧಿಕಾರಿ ದಾಳಿ : ಮೂರು ದೋಣಿಗಳು ವಶಕ್ಕೆ

akhilesh

ಪಾಕಿಸ್ಥಾನದ ಪರ ಅಖಿಲೇಶ್ ಅನುಕಂಪದ ಮಾತು : ಬಿಜೆಪಿ ಆಕ್ರೋಶ

1-ae2

ವಿ.ವಿ.ಗಳಲ್ಲಿ ಸುಗಮ ಪರೀಕ್ಷಾ ವ್ಯವಸ್ಥೆಗೆ ತಂತ್ರಾಂಶ; ‘ಇ-ಸಹಮತಿ’ಗೆ ಹಸಿರು ನಿಶಾನೆ

ನಿಂತ ನೀರಾಗಿರುವ ಚಾ.ನಗರ ಅಭಿವೃದ್ಧಿಗೆ ಹರಿಯೋ ನೀರಾಗುವರೇ ಸೋಮಣ್ಣ?

ನಿಂತ ನೀರಾಗಿರುವ ಚಾ.ನಗರ ಅಭಿವೃದ್ಧಿಗೆ ಹರಿಯೋ ನೀರಾಗುವರೇ ಸೋಮಣ್ಣ?

1ahan

ಯುಎಇ: ಭಾರತೀಯ ವಿದ್ಯಾರ್ಥಿ ಅಹಾನ್ ಶೆಟ್ಟಿ, SAT ನಲ್ಲಿ ಇತಿಹಾಸ

1-gaa

‘ವೈ ಐ ಕಿಲ್ಡ್ ಗಾಂಧಿ’ ಸಿನಿಮಾ ಬ್ಯಾನ್ ಮಾಡಲು ಕಾಂಗ್ರೆಸ್ ಮನವಿ

ಸವದತ್ತಿ ಮಹಿಳಾ ಪೇದೆ ಈಗ ಪಿಎಸೈ : ಸೇವಾನಿರತ ಮೀಸಲಾತಿಯಡಿ ರಾಜ್ಯಕ್ಕೆ ಪ್ರಥಮ ಸ್ಥಾನ

ಸವದತ್ತಿಯ ಮಹಿಳಾ ಪೇದೆ ಈಗ ಪಿಎಸ್‍ಐ : ಸೇವಾನಿರತ ಮೀಸಲಾತಿಯಡಿ ರಾಜ್ಯಕ್ಕೆ ಪ್ರಥಮ ಸ್ಥಾನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

akhilesh

ಪಾಕಿಸ್ಥಾನದ ಪರ ಅಖಿಲೇಶ್ ಅನುಕಂಪದ ಮಾತು : ಬಿಜೆಪಿ ಆಕ್ರೋಶ

ಗೂಗಲ್ ಕೋಡ್ ಟು ಕಾಂಟೆಸ್ಟ್  2021″ ಸ್ಫರ್ಧೆಯಲ್ಲಿ ಗಮನ ಸೆಳೆದ ಗೋವಾದ ವಿದ್ಯಾರ್ಥಿಗಳು

‘ಗೂಗಲ್ ಕೋಡ್ ಟು ಕಾಂಟೆಸ್ಟ್  2021’ ಸ್ಫರ್ಧೆಯಲ್ಲಿ ಗೋವಾ ವಿದ್ಯಾರ್ಥಿಗಳ ಸಾಧನೆ

1-gaa

‘ವೈ ಐ ಕಿಲ್ಡ್ ಗಾಂಧಿ’ ಸಿನಿಮಾ ಬ್ಯಾನ್ ಮಾಡಲು ಕಾಂಗ್ರೆಸ್ ಮನವಿ

ಚುನಾವಣಾ ಪೂರ್ವ ಸಿದ್ಧತೆ ಕುರಿತು ಚರ್ಚೆ: ಜ.30 ರಂದು ಅಮಿತ್ ಶಾ ಗೋವಾ ಭೇಟಿ

ಚುನಾವಣಾ ಪೂರ್ವ ಸಿದ್ಧತೆ ಕುರಿತು ಚರ್ಚೆ: ಜ.30 ರಂದು ಅಮಿತ್ ಶಾ ಗೋವಾ ಭೇಟಿ

500 ರೂ. ವಿಷಯದಲ್ಲಿ ಜುಟ್ಟು ಹಿಡಿದು ಹೊಡೆದಾಡಿಕೊಂಡ ನರ್ಸ್ ಮತ್ತು ಆಶಾ ಕಾರ್ಯಕರ್ತೆ

500 ರೂ. ವಿಷಯದಲ್ಲಿ ಜುಟ್ಟು ಹಿಡಿದು ಹೊಡೆದಾಡಿಕೊಂಡ ನರ್ಸ್ ಮತ್ತು ಆಶಾ ಕಾರ್ಯಕರ್ತೆ

MUST WATCH

udayavani youtube

ಪ್ರಕೃತಿಯನ್ನು ಲೂಟಿ ಮಾಡಿದ ಪರಿಣಾಮ ಹೀಗೆಲ್ಲ ಆಗಿದೆ !!

udayavani youtube

ಒಂದೇ ವಾಹನಕ್ಕೆ ಒಂದು ತಿಂಗಳ ಅಂತರದಲ್ಲಿ ಪೊಲೀಸರಿಂದ 16 ನೋಟಿಸ್

udayavani youtube

ರಾಷ್ಟ್ರೀಯ ಬಾಲ ಪುರಸ್ಕಾರ : ಪ್ರಧಾನಿ ಜೊತೆ ಮಂಗಳೂರಿನ ರೆಮೋನಾ ಪರೇರಾ ಮಾತುಕತೆ

udayavani youtube

ಬೆಳ್ಳಂಬೆಳಗ್ಗೆ ಟ್ರಾಫಿಕ್ ಜಾಮ್ ! ಕೆಲಸಕ್ಕೆ ಹೋಗುವವರ ಪರದಾಟ ಹೇಳತೀರದು…

udayavani youtube

ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ, ಅರಣ್ಯ ಇಲಾಖೆಯ ಯಶಸ್ವಿ ಕಾರ್ಯಾಚರಣೆ

ಹೊಸ ಸೇರ್ಪಡೆ

1-sddds

ನೀರಾವರಿ ವಿಷಯದಲ್ಲಿ ರಾಜಕೀಯ ಸಲ್ಲ: ರಾಯರಡ್ಡಿ ಆಕ್ಷೇಪಕ್ಕೆ ಸಂಗಣ್ಣ ಕರಡಿ ತಿರುಗೇಟು

1-sasass

ಉಡುಪಿ: ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ :ವೇಳಾಪಟ್ಟಿ ಪ್ರಕಟ

ಅಕ್ರಮ ಮರಳು ಗಣಿಗಾರಿಕೆ ಪ್ರದೇಶಕ್ಕೆ ಗಣಿ ಅಧಿಕಾರಿ ದಾಳಿ : ಮೂರು ದೋಣಿಗಳು ವಶಕ್ಕೆ

ಅಕ್ರಮ ಮರಳು ಗಣಿಗಾರಿಕೆ ಪ್ರದೇಶಕ್ಕೆ ಗಣಿ ಅಧಿಕಾರಿ ದಾಳಿ : ಮೂರು ದೋಣಿಗಳು ವಶಕ್ಕೆ

ಹವಾಮಾ ಮಾಸ್ಟರ್ ಪ್ಲಾನ್ ಘೋಷಣೆ ವಿಳಂಬ ಕಿಷ್ಕಿಂದಾ ಅಂಜನಾದ್ರಿ ಪ್ರವಾಸೋದ್ಯಮಕ್ಕೆ ಹಿನ್ನೆಡೆ

ಹವಾಮಾ ಮಾಸ್ಟರ್ ಪ್ಲಾನ್ ಘೋಷಣೆ ವಿಳಂಬ ಕಿಷ್ಕಿಂದಾ ಅಂಜನಾದ್ರಿ ಪ್ರವಾಸೋದ್ಯಮಕ್ಕೆ ಹಿನ್ನೆಡೆ

ಗಂಗೊಳ್ಳಿ: ಮೀನುಗಾರಿಕಾ ಬಂದರು ಜೆಟ್ಟಿ ಪುನರ್‌ ನಿರ್ಮಾಣ ಸ್ಥಗಿತ

ಗಂಗೊಳ್ಳಿ: ಮೀನುಗಾರಿಕಾ ಬಂದರು ಜೆಟ್ಟಿ ಪುನರ್‌ ನಿರ್ಮಾಣ ಸ್ಥಗಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.