ದೆಹಲಿಯಲ್ಲಿ ಟಿಕ್‌ ಟಾಕ್‌ ಸ್ಟಾರ್‌ ಮೇಲೆ ಗುಂಡಿನ ಮಳೆ ; ಬರ್ಬರ ಹತ್ಯೆ

Team Udayavani, May 22, 2019, 11:00 AM IST

ಹೊಸದಿಲ್ಲಿ : ಎರಡು ಗುಂಪುಗಳ ನಡುವೆ ಗ್ಯಾಂಗ್‌ವಾರ್‌ ನಡೆದ ಬೆನ್ನಲ್ಲೇ ರಾಷ್ಟ್ರ ರಾಜಧಾನಿಯಲ್ಲಿ ಟಿಕ್‌ ಟಾಕ್‌ ಸ್ಟಾರ್‌ವೋರ್ವರನ್ನು ಗುಂಡಿನ ಮಳೆಗೆರೆದು ಬರ್ಬರವಾಗಿ ಹತ್ಯೆಗೆದ ಬೆಚ್ಚಿ ಬೀಳಿಸುವ ಘಟನೆ ಮಂಗಳವಾರ ನಡೆದಿದೆ.

ನಜಾಫ್ಗಢದ ಧರಮ್‌ಪುರ ಪ್ರದೇಶದಲ್ಲಿ ಟಿಕ್‌ ಟಾಕ್‌ ಸ್ಟಾರ್‌ ಆಗಿದ್ದ ಮೋಹಿತ್‌ ಮೊರ್‌ (27) ಎಂಬಾತನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ.

ಸಂಜೆ 5.15 ರ ವೇಳೆಗೆ ಘಟನೆ ನಡೆದಿದ್ದು, ಅಂಗಡಿಯಲ್ಲಿ ಸ್ನೇಹಿತನೊಂದಿಗೆ ಹರಟುತ್ತಿದ್ದ ಮೋಹಿತ್‌ ಮೇಲೆ ಮೂವರು ದುಷ್ಕರ್ಮಿಗಳು ಗುಂಡಿನ ಮಳೆಗೈದಿದ್ದಾರೆ.

ಸ್ಥಳದಲ್ಲೇ ಕುಸಿದು ಬಿದ್ದ ಮೋಹಿತ್‌ನನ್ನು ಆಸ್ಪತ್ರೆಗೆ ಒಯ್ಯಲಾಯಿತಾದರೂ ಅದಾಗಲೇ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

ಹೆಲ್ಮೆಟ್‌ ಧರಿಸಿದ್ದ ದುಷ್ಕರ್ಮಿಗಳು ಕೃತ್ಯ ಎಸಗಿ ಪರಾರಿಯಾಗಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಮೋಹಿತ್‌ ಮೋರ್‌ ಟಿಕ್‌ ಟಾಕ್‌ನಲ್ಲಿ 5 ಲಕ್ಷ ಚಂದಾದಾರನ್ನು ಹೊಂದುವ ಮೂಲಕ ಖ್ಯಾತಿ ಪಡೆದಿದ್ದರು.

13 ಗುಂಡುಗಳನ್ನು ಮೊಹೀತ್‌ ರನ್ನು ಗುರಿಯಾಗಿರಿಸಿ ಹಾರಿಸಲಾಗಿದ್ದುಆ ಪೈಕಿ 7 ದೇಹವನ್ನು ಹೊಕ್ಕಿವೆ ಎಂದು ತಿಳಿದು ಬಂದಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ